ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿಗೆ ಮೋದಿ ಹೆದರಿದ್ದಾರೆ: ಪಾಕ್ ಮಾಜಿ ಸಚಿವ

Public TV
1 Min Read
modi rahul pak

ನವದೆಹಲಿ: ಕಾಶ್ಮೀರದ ಪೊಲೀಸ್ ಅಧಿಕಾರಿಗಳನ್ನು ಉಗ್ರರು ಹತ್ಯೆ ಮಾಡಿದ ಬಳಿಕ ಭಾರತ ಪಾಕಿಸ್ತಾನ ನಡುವಿನ ಮಾತುಕತೆ ರದ್ದು ಮಾಡಿರುವ ಕುರಿತು ಪಾಕ್ ಮಾಜಿ ಸಚಿವ ರೆಹಮಾನ್ ಮಲಿಕ್ ಕಿಡಿಕಾರಿದ್ದು, ಭಾರತದ ಮುಂದಿನ ಪ್ರಧಾನಿ ರಾಹುಲ್ ಗಾಂಧಿ ಅವರಿಗೆ ಮೋದಿ ಹೆದರಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಬಹುದೊಡ್ಡ ಹಗರಣ ಎಂದು ರಫೇಲ್ ಒಪ್ಪಂದ ಕುರಿತು ಆರೋಪಿಸಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿರ ವೀಡಿಯೋ ಹಂಚಿಕೊಂಡಿರುವ ರೆಹಮಾನ್ ಮಲಿಕ್, ಮೋದಿ ವಿರುದ್ಧ ಕಿಡಿಕಾರಿದ್ದಾರೆ. ತಮ್ಮ ಟ್ವಿಟ್ಟರಿನಲ್ಲಿ ರಾಹುಲ್ ಗಾಂಧಿ ಅವರ ಪತ್ರಿಕಾಗೋಷ್ಠಿಯ ವೀಡಿಯೋ ಪೋಸ್ಟ್ ಮಾಡಿ, ರಾಹುಲ್ ಅವರನ್ನು ನಿಂದನೆ ಮಾಡುವವರು ಈ ವೀಡಿಯೋ ನೋಡಿ. ರಾಹುಲ್ ಒಬ್ಬ ಲೀಡರ್, ನಾನು ಹೇಳಿದ್ದನ್ನೇ ಅವರು ಹೇಳುತ್ತಿದ್ದಾರೆ. ಇದನ್ನು ನೋಡಿದ ಬಳಿಕವಾದರು ನನ್ನ ಬಳಿ ಕ್ಷಮೆ ಕೇಳಿ ಎಂದು ಹೇಳಿದ್ದಾರೆ.

ಈ ವೀಡಿಯೋ ಪೋಸ್ಟ್ ಮಾಡುವ ಮುನ್ನ ಮತ್ತೊಂದು ಟ್ವೀಟ್ ಮಾಡಿರುವ ಮಲಿಕ್, ರಾಹುಲ್ ಗಾಂಧಿ ನಿಮ್ಮ ಮುಂದಿನ ಪ್ರಧಾನಿ. ಪ್ರಧಾನಿ ಮೋದಿ, ರಾಹುಲ್‍ರನ್ನು ಕಂಡು ಹೆದರಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಸರಣಿ ಟ್ವೀಟ್ ಮಾಡಿದ ಬಳಿಕ ಪ್ರತಿಕ್ರಿಯೆ ನೀಡಿರುವ ಮಲಿಕ್, ನನ್ನ ಕೆಲ ಟ್ವೀಟ್‍ಗಳು ಭಾರತವನ್ನು ಅಲುಗಾಡುವಂತೆ ಮಾಡಿದ್ದು ನನಗೆ ಸಂತಸ ತಂದಿದೆ. ನಾನು ಟ್ವೀಟ್ ಮಾಡುವ ಮೊದಲು ಪ್ರಧಾನಿ ಮೋದಿ ಹಾಗೂ ಆರ್‍ಎಸ್‍ಎಸ್ ಕೃತ್ಯಗಳ ಬಗ್ಗೆ ಕೆಲ ಭಾರತೀಯರಿಗೆ ಅರಿವೆ ಇರಲಿಲ್ಲ ಎಂದು ಹೇಳಿದ್ದಾರೆ. ಈ ಹಿಂದೆಯೂ ಭಾರತದ ರಕ್ಷಣಾ ಸೇನೆ ಮುಖ್ಯಸ್ಥ ಬಿಪಿನ್ ರಾವತ್‍ರನ್ನು ಟಾರ್ಗೆಟ್ ಮಾಡಿದ್ದ ಮಲಿಕ್, ಬಿಪಿನ್ ಒಬ್ಬ ಸೋಮಾರಿ ಎಂದು ಆರೋಪಿಸಿದ್ದರು.

ಮಲಿಕ್ ಶೇರ್ ಮಾಡಿರುವ ವೀಡಿಯೋದಲ್ಲಿ ರಾಹುಲ್ ಗಾಂಧಿ ರಫೇಲ್ ಒಪ್ಪಂದದಲ್ಲಿ ಪ್ರಧಾನಿ ಮೋದಿ ಸರ್ಕಾರ ಭ್ರಷ್ಟಾಚಾರ ನಡೆಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಮೋದಿ ರಫೇಲ್ ಒಪ್ಪಂದ ಮಾಡುವ ವೇಳೆ ಮಾಜಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಗೋವಾದಲ್ಲಿ ಮೀನು ಖರೀದಿ ಮಾಡುತ್ತಿದ್ದರು ಎಂದು ವ್ಯಂಗ್ಯವಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

 

Share This Article
Leave a Comment

Leave a Reply

Your email address will not be published. Required fields are marked *