ಕರಾಚಿ: ಪಾಕಿಸ್ತಾನದ ಪರ ದೇಶಿಯ ಕ್ರಿಕೆಟ್ ಟೂರ್ನಿಯಗಳಲ್ಲಿ ಆಡಿದ್ದ ತಂಡದ ಮಾಜಿ ಆಟಗಾರ ಸದ್ಯ ಜೀವನ ನಿರ್ವಹಣೆಗಾಗಿ ವ್ಯಾನ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕ್ ಮಾಜಿ ಆಟಗಾರ ಫಜಲ್ ಸುಭಾನ್ ಸದ್ಯ ವ್ಯಾನ್ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಾಕ್ ಕ್ರಿಕೆಟ್‍ನಲ್ಲಿ ತೆಗೆದುಕೊಂಡ ಕೆಲ ನಿರ್ಣಯಗಳೇ ಆಟಗಾರರು ಈ ಸ್ಥಿತಿಗೆ ಬರಲು ಕಾರಣವಾಗಿದೆ ಎಂದು ಫಜಲ್ ಸುಭಾನ್ ಹೇಳಿದ್ದಾರೆ.
Advertisement
SAD STORY OF ???????? ????
Fazal Subhan was the player of HBL, he has played U19 & A side cricket for Pakistan, he was contender of Pak Test team,
After closing of Departmental cricket he is driving drive
“BHARE KE SUZUKI”
His salary was 1 lac & now earning is less then 40k
???? ???? ???? pic.twitter.com/nq22vPY55v
— Shoaib Jatt (@Shoaib_Jatt) October 11, 2019
Advertisement
ಪಾಕ್ ತಂಡದ ಪರ ಆಡಲು ಬಹಳಷ್ಟು ಶ್ರಮಪಟ್ಟೆ. ದೇಶಿಯ ಕ್ರಿಕೆಟ್ ಭಾಗವಾಗಿ ನಡೆಯುವ ಡಿಪಾರ್ಟ್ ಮೆಂಟಲ್ ಕ್ರಿಕೆಟ್‍ನಲ್ಲೂ ಆಡುತ್ತಿದೆ. ಇದರಿಂದ ನನಗೆ 1 ಲಕ್ಷ ರೂ. ಸಿಗುತ್ತಿತ್ತು. ಆದರೆ ಸದ್ಯ ಈ ಟೂರ್ನಿಗಳನ್ನು ರದ್ದು ಪಡಿಸಿದ ಕಾರಣ ನಾನು ಜೀವನ ನಿರ್ವಹಣೆಗಾಗಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
Advertisement
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದಂತೆ ಎಚ್ಚೆತ್ತ ಪಾಕ್ ಆಟಗಾರ ಮೊಹಮ್ಮದ್ ಹಫೀಜ್, ಪಾಕ್ ಕ್ರಿಕೆಟ್ ಮಂಡಳಿ ಕೈಗೊಂಡ ಹೊಸ ನಿಯಮಗಳ ಕಾರಣ ಹಲವು ಆಟಗಾರರು ಇದೇ ರೀತಿ ಬೀದಿಗೆ ಬಿದ್ದಿದ್ದಾರೆ. ಹೊಸ ನಿಯಮಗಳಿಂದ ಕೇವಲ 200 ಮಂದಿಗೆ ಮಾತ್ರ ಉಪಯೋಗವಿದ್ದು, ಸಾವಿರಾರರು ದೇಶಿ ಕ್ರಿಕೆಟ್ ಆಟಗಾರರು ಸಮಸ್ಯೆ ಎದುರಿಸಿದ್ದಾರೆ. ಇದರ ಹೊಣೆಯನ್ನು ಯಾರು ತೆಗೆದುಕೊಳ್ಳುತ್ತಾರೆ ಎಂದು ನನಗೆ ತಿಳಿದಿಲ್ಲ ಎಂದು ಪಾಕ್ ಕ್ರಿಕೆಟ್ ಮಂಡಳಿಯ ವಿರುದ್ಧ ಕಿಡಿಕಾರಿದ್ದಾರೆ.