– ಪೊಲೀಸರ ಕಥೆ ಗೊತ್ತಿರೋರು ಎನ್‌ಕೌಂಟರ್ ಅಂತ ಒಪ್ಪಲ್ಲ
ಚಿಕ್ಕಮಗಳೂರು: ನಕ್ಸಲ್ ನಾಯಕ ವಿಕ್ರಂ ಗೌಡನ (Vikram Gowda) ಹತ್ಯೆ ತೀವ್ರ ಖಂಡನೀಯ, ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಎನ್‌ಕೌಂಟರ್ ಸಮರ್ಥಿಸಿಕೊಂಡಿರುವುದು ದುರಾದೃಷ್ಟಕರ ಎಂದು ಮಾಜಿ ನಕ್ಸಲ್ ನಿಲಗುಳಿ ಪದ್ಮನಾಭ್ (Nilaguli Padmanab) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು (Chikkamagaluru) ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಕ್ರಂ ಗೌಡನ ಹತ್ಯೆ ಅತ್ಯಂತ ಖಂಡನೀಯ, ಯಾರೂ ಒಪ್ಪುವಂತದ್ದಲ್ಲ. ಸತ್ಯವನ್ನು ತಿಳಿದುಕೊಳ್ಳದೆ ಒಮ್ಮುಖ ವರದಿ ನೋಡಿ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಹತ್ಯೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವುದು ಯಾರೂ ಒಪ್ಪುವುದಿಲ್ಲ. ಪೊಲೀಸರ ಎನ್‌ಕೌಂಟರ್ (Police Encounter) ಕಥೆ ಗೊತ್ತಿರೋರು ಯಾರೂ ಇದನ್ನ ಎನ್‌ಕೌಂಟರ್ ಅಂತ ಒಪ್ಪಿಕೊಳ್ಳುವುದಿಲ್ಲ. ಇದನ್ನ ಪ್ರಜಾತಂತ್ರವಾದಿಯೂ ಒಪ್ಪುವ ವಿಚಾರವೇ ಅಲ್ಲ. ಹತ್ಯೆ ಕಪೋಲ ಕಲ್ಪಿತವಾಗಿ ಸೃಷ್ಟಿ ಮಾಡಿರುವ ಎನ್‌ಕೌಂಟರ್. ಎಲ್ಲೋ ಹಿಡಿದು ಹಿಂಸೆ ನೀಡಿ ಸಾಯಿಸಿ ಕೊನೆಗೆ ಉಡುಪಿಯ ಪೀತಬೈಲಿಗೆ ತಂದು ಮೃತದೇಹ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಹತ್ಯೆ ಮಾಡಿ ಎಂದು ಸಂವಿಧಾನ ಹೇಳಿಲ್ಲ:
ಹತ್ಯೆಯ ಬಗ್ಗೆ ಮಾಧ್ಯಮದವರಿಗೂ ತಿಳಿಯದಂತೆ ಯಾರಿಗೂ ಮುಖ ತೋರಿಸದೆ, ಎಲ್ಲಾ ವಿಚಾರವನ್ನು ವಂಚಿಸಿದ್ದಾರೆ. ಆರೋಪಿಯನ್ನು ಕೊಲೆ ಮಾಡಿ ಎಂದು ಸಂವಿಧಾನ (Constitution) ಕೂಡ ಹೇಳಿಲ್ಲ. ವಿಕ್ರಂ ಗೌಡನ ಎನ್‌ಕೌಂಟರ್ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: Naxal Encounter| 3 ರಾಜ್ಯಕ್ಕೆ ಬೇಕಾಗಿದ್ದ ಮೋಸ್ಟ್ ವಾಟೆಂಡ್ ನಕ್ಸಲ್ ನಾಯಕ ವಿಕ್ರಂ ಗೌಡ ಯಾರು?
ಸರ್ಕಾರದಿಂದ ಏನೂ ಪ್ರಯೋಜನ ಇಲ್ಲ:
ಇನ್ನೂ ಸರ್ಕಾರ ನಕ್ಸಲರಿಗೆ (Naxal) ಮುಖ್ಯವಾಹಿನಿಗೆ ಬನ್ನಿ ಅನ್ನುತ್ತೆ. ಬಂದರೆ ಸರ್ಕಾರದಿಂದ ಏನೂ ಪ್ರಯೋಜನ ಇಲ್ಲ. ಕನ್ಯಾಕುಮಾರಿ ಮುಖ್ಯ ವಾಹಿನಿಗೆ ಬಂದು 8 ವರ್ಷವಾಯ್ತು. ನಾನು ಅತೀ ಕಷ್ಟದಲ್ಲಿದ್ದೇನೆ. ಮನೆ ಕೊಡಲಿಲ್ಲ, ನನ್ನ ಗುಡಿಸಲಿಗೆ ಕರೆಂಟ್ ಕೊಡ್ಲಿಲ್ಲ. ಕೇಸ್‌ಗಳು ಹಾಗೆಯೇ ಇವೆ. ವಾರಕ್ಕೆ ಮೂರು-ನಾಲ್ಕು ದಿನ ಕೋರ್ಟ್‌ಗೆ ಅಲೆಯುತ್ತಿದ್ದೇನೆ. ಕನ್ಯಾಕುಮಾರಿ ಏಳೂವರೆ ವರ್ಷಗಳಿಂದ ಜೈಲಿನಲ್ಲಿದ್ದಾರೆ. ಇದು ಮುಖ್ಯವಾಹಿನಿನಾ? ಜೈಲಿನಲ್ಲಿರೋದು ಮುಖ್ಯವಾಹಿನಿಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಕ್ರಂ ಗೌಡ ನಕ್ಸಲ್ ತಂಡ ಸೇರಿದ್ದು ಹೇಗೆ? ಮನೆ ಮನೆಗೆ ಹೇಗೆ ಬರುತ್ತಿದ್ದರು? – ಸ್ಥಳೀಯರು ಬಿಚ್ಚಿಟ್ಟ ಸತ್ಯ ಓದಿ