– ಉಚಿತ, ಖಚಿತ, ನಿಶ್ಚಿತ ಅಂದು ಸರ್ಕಾರ ದಿವಾಳಿಯಾಗಿದೆ ಎಂದ ಮಾಜಿ ಸಂಸದೆ
ಮಂಡ್ಯ: ಕ್ಷೇತ್ರ ಬಿಟ್ಟುಕೊಟ್ಟು ಬಿಜೆಪಿ ಸೇರಿದವಳು ನಾನು. ನಮ್ಮದು ತ್ಯಾಗ ಮಾಡಿರುವ ಕುಟುಂಬ, ಯಾವುದಕ್ಕೂ ಆಸೆ ಪಡುವ ಕುಟುಂಬವಲ್ಲ ಎಂದು ಮಾಜಿ ಸಂಸದೆ ಸುಮಲತಾ (Sumalatha) ಹೇಳಿದ್ದಾರೆ.
ವಕ್ಫ್ (Waqf) ವಿರೋಧಿಸಿ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯಲ್ಲಿ (BJP Workers Protest) ಪಾಲ್ಗೊಂಡು ಮಾತನಾಡಿದ ಅವರು, ʻಸ್ಥಾನಮಾನಕ್ಕಾಗಿ ಸುಮಲತಾ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆʼ ಎಂಬ ಸಚಿವ ಚಲುವರಾಯಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರು| ಹೆತ್ತ ಮಕ್ಕಳನ್ನೇ ಕೊಲೆ ಮಾಡಿದ ತಾಯಿ – ತಾನೂ ಆತ್ಮಹತ್ಯೆಗೆ ಯತ್ನ
Advertisement
Advertisement
ಚಲುವರಾಯಸ್ವಾಮಿ (Chaluvarayaswamy) ಅವರು ಏನು ಬೇಕಾದ್ರೂ ಹೇಳಿಕೊಳ್ಳಲಿ, ಕ್ಷೇತ್ರವನ್ನ ಬಿಟ್ಟು ಕೊಟ್ಟು ಬಿಜೆಪಿ ಸೇರಿದವಳು ನಾನು, ನಮ್ಮದು ತ್ಯಾಗ ಮಾಡಿರುವ ಕುಟುಂಬ. ಯಾವುದಕ್ಕೂ ಆಸೆ ಪಡುವ ಕುಟುಂಬವಲ್ಲ. ಮೋದಿ ಸರ್ಕಾರದ (Modi Government) ಯೋಜನೆಯನ್ನ ಜನರಿಗೆ ತಲುಪಿಸುವ ಆಸೆ ಇದೆ. ಯಾವುದೇ ವೈಯಕ್ತಿಕ ಆಸೆ ನಮಗಿಲ್ಲ. ವೈಯಕ್ತಿಕ ಆಸೆಗಾಗಿ ರಾಜಕಾರಣ ಮಾಡುವವರ ಲೀಸ್ಟ್ ನಮ್ಮ ಮುಂದೆ ಇದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಪ್ರವೀರ್ ಶೆಟ್ಟಿ ಸಿನಿಮಾಗೆ ಶ್ರೀಮುರಳಿ ಸಾಥ್-‘ನಿದ್ರಾದೇವಿ Next door’ ಟೀಸರ್ ಔಟ್
Advertisement
Advertisement
ಬಿಜೆಪಿ ಪಕ್ಷ ಸೇರಿರುವುದೇ ನನಗೆ ಸ್ಥಾನಮಾನ:
ಬಿಜೆಪಿ ಪಕ್ಷ ಸೇರಿರುವುದೇ ನನಗೆ ಸ್ಥಾನಮಾನ. ಮೋದಿ ಹಿಂದೆ ನಾವು ಇದ್ದೇವೆ, ಅವರ ಕೆಳಗೆ ಕೆಲಸ ಮಾಡ್ತಿರುವುದೇ ನಮಗೆ ಗೌರವ. ನಾನು ಮಂಡ್ಯದಿಂದ ಎಂಪಿ ಆಗಿದ್ದೆ. ಅಂಬರೀಶ್ ಕ್ಯಾಬಿನೆಟ್ ಮಿನಿಸ್ಟರ್ ಆಗಿದ್ದರು. ಕೇಂದ್ರದಲ್ಲಿಯೂ ಮಂತ್ರಿಯಾಗಿದ್ದರು, ಎಲ್ಲವನ್ನೂ ನೋಡಿದ್ದೇವೆ, ಇದಕ್ಕಿಂತ ಇನ್ನೇನು ಸ್ಥಾನಮಾನ ಬೇಕು? ಎಲ್ಲ ಅಧಿಕಾರವನ್ನೂ ನೋಡಿದ್ದೇವೆ. ಜನಪ್ರಿಯತೆಯನ್ನ ಸಿನಿಮಾ, ರಾಜಕೀಯ ರಂಗ ಎರಡರಲ್ಲೂ ನೋಡಿದ್ದೇನೆ. ಏನೂ ಕಾಣದವರು ಆ ರೀತಿ ಮಾತಾಡಬಹುದು ಎಂದು ಟಾಂಗ್ ಕೊಟ್ಟಿದ್ದಾರೆ.
ಇದೇ ವೇಳೆ ವಕ್ಫ್ ಆಸ್ತಿ ವಿವಾದ ಕುರಿತು ಮಾತನಾಡಿ, ವಕ್ಫ್ ವಿವಾದ ಗಂಭೀರ ವಿಷಯ, ಆ ಕುರಿತು ಜನರಿಗೆ ತಿಳಿವಳಿಕೆ ಕೊಡುವ ಕೆಲಸವನ್ನ ಬಿಜೆಪಿ ಮಾಡ್ತಿದೆ. ಪ್ರತಿಭಟನೆ ಮೂಲಕ ಸಂದೇಶ ನೀಡ್ತಿದೆ. ದೇಶವನ್ನ 50-60 ವರ್ಷಗಳ ಕಾಲ ಕಾಂಗ್ರೆಸ್ ಆಡಳಿತ ಮಾಡಿದೆ. ಅವರ ಅವಧಿಯಲ್ಲಿಯೇ ಈ ಕಾಯ್ದೆಗಳು ಬಂದಿರೋದು. ಜನಸಾಮಾನ್ಯರಿಗೆ ಈಗ ಅದರ ತಿಳಿವಳಿಕೆ ಬರ್ತಾ ಇದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಕ್ಫ್ ಮಂಡಳಿ ರದ್ದಾಗಬೇಕು, ಪಹಣಿಯಲ್ಲಿ ಹೆಸರು ತೆಗೆಸಿಹಾಕಬೇಕು – ಆರ್.ಅಶೋಕ್ ಆಗ್ರಹ
ಇನ್ನೂ ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡ್ತಿದೆ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ರೈತರ ಜಾಗ, ದೇವಸ್ಥಾನ ಎಲ್ಲವೂ ವಕ್ಫ್ ಆಸ್ತಿ ಎಂದು ಕ್ಲೈಮ್ ಮಾಡ್ತಿದ್ದಾರೆ. ಇದು ಮೊಸರಲ್ಲಿ ಕಲ್ಲು ಹುಡುಕುವ ಕೆಲಸವಾ? ತಲೆ ಮೇಲೆ ಬೆಟ್ಟ ಎತ್ತಿ ಹಾಕುವ ವಿಷಯವಾಗಿದೆ. ಬಾಂಗ್ಲಾದಲ್ಲಿ ಏನೇನು ಆಗ್ತಿದೆ ಎಂದು ಕಣ್ಮುಂದೆ ಕಾಣ್ತಿದೆ. ಆ ಉದ್ದೇಶ ಇಟ್ಟುಕೊಂಡು ಕಾಂಗ್ರೆಸ್ ಹೊರಟಿದ್ಯಾ? ಎಂದು ಸುಮಲತಾ ಪ್ರಶ್ನೆ ಮಾಡಿದ್ದಾರೆ.
ʻಕೈʼ ಸರ್ಕಾರದಿಂದ ಪಡಿತರ ಚೀಟಿ ರದ್ದು ವಿಚಾರ ಕುರಿತು ಮಾತನಾಡಿ, ಎಲೆಕ್ಷನ್ ಗೆಲ್ಲೋಕೆ ಇಷ್ಟ ಬಂದಾಗೆ ಆಶ್ವಾಸನೆ ಕೊಟ್ರು. ಅದು ಉಚಿತ, ಇದು ಖಚಿತ, ಅದು ನಿಶ್ವಿತ ಅಂದ್ರು. ಈಗ ಸರ್ಕಾರ ದಿವಾಳಿಯಾಗಿದೆ. ಅದಕ್ಕೆ ಒಂದೊಂದೇ ಕಟ್ ಮಾಡ್ಕೊಂಡು ಬರ್ತಿದ್ದೀರಾ? ಜನರಿಗೆ ಯಾವ ರೀತಿ ಅನ್ಯಾಯ ಮಾಡಿ, ಬಲಿ ಹಾಕ್ತಿದ್ದೀರ, ಬಡವರಿಗೆ, ರೈತರಿಗೆ ಮಾಡ್ತಿರುವ ಅನ್ಯಾಯ ಕಾಣ್ತಿಲ್ವಾ? ಗ್ಯಾರಂಟಿ ಕೊಡೋಕೆ ಕಾಂಗ್ರೆಸ್ ಸರ್ಕಾರಕ್ಕೆ ಆಗ್ತಿಲ್ಲ. ಅದಕ್ಕೆ ರದ್ದು ಮಾಡ್ತಿದ್ದಾರೆ ಎಂದು ಆರೋಪಿಸಿದ್ರು. ಇದನ್ನೂ ಓದಿ: ಜಿಪಂ ಸದಸ್ಯೆ ಅತ್ಯಾಚಾರ ಕೇಸ್ – ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ