– ಮೈಸೂರಲ್ಲಿ ಟಿಪ್ಪು ಸಂತತಿಯವರಿಂದ ಗಲಾಟೆ
ಮೈಸೂರು: ನಗರದಲ್ಲಿ ನಾಗರೀಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಪುಂಡ ಮುಸ್ಲಿಮರು ಪೊಲೀಸ್ ಠಾಣೆ ಮೇಲೆ ಅಕ್ರಮಣ ಮಾಡಿದ್ದಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಕಿಡಿಕಾರಿದ್ದಾರೆ.
ಪೊಲೀಸರನ್ನೇ ಗುರಿಯಾಗಿಸಿ ಇಲ್ಲಿ ಯಾವಾಗಲೂ ದಾಳಿ ಆಗುತ್ತದೆ. ಈಗಲೂ ಅದೇ ಮುಂದುವರಿದಿದೆ. ಟಿಪ್ಪು ಸಂತತಿಯವರು ಮಾಡಿರುವ ಗಲಾಟೆ ಇದು. ಸಿದ್ದರಾಮಯ್ಯ (Siddaramaiah) ಆಡಳಿತ ಹೇಗಿದೆ ಎಂಬುದಕ್ಕೆ ಇದು ಸಾಕ್ಷಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಿದ್ದರಾಮಯ್ಯ ಅವರದ್ದು ಕನ್ನಡಿಗರ ಸರ್ಕಾರ ಅಲ್ಲ. ಇದು ತಾಲಿಬಾನಿ ಸರ್ಕಾರ. ಪೊಲೀಸರು ಆಳುವ ಸರ್ಕಾರದ ಅಣತಿಯಂತೆ ನಡೆಯುವುದನ್ನು ಮೊದಲು ಬಿಡ ಬೇಕು. ಪುಂಡ ಮುಸ್ಲಿಮರಿಗೆ ಸಿದ್ದರಾಮಯ್ಯ ಫ್ರೀ ಬಿಟ್ಟಿದ್ದಾರೆ. ಅದಕ್ಕೆ ಈ ರೀತಿ ಗಲಾಟೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್ ಸೋತರೆ ಉದಯಗಿರಿ ಮುಸ್ಲಿಂರಿಗೆ ಯಾಕೆ ರೋಷ ಬರುತ್ತೆ? ಅವರ ಮನೆಯಲ್ಲಿ ಯಾಕೆ ಸೂತಕ ಬರುತ್ತೆ? ಮುಸ್ಲಿಮರಿಗೆ ಬುದ್ದಿ ಕಲಿಸಬೇಕು. ಉದಯಗಿರಿ ವ್ಯಾಪ್ತಿಯಲ್ಲಿ ಪೊಲೀಸರು ಕೂಬಿಂಗ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ಅವರೇ ನೀವು ಎಷ್ಟು ದಿನ ಸಿಎಂ ಆಗಿ ಇರುತ್ತಿರಾ ಗೊತ್ತಿಲ್ಲ. ಈಗಲಾದರೆ ಖಡಕ್ ಆಗಿ ಕೆಲಸ ಮಾಡಿ. ನೀವು ಎಷ್ಟು ಅಸಮರ್ಥ ಸಿಎಂ ಎಂಬುದಕ್ಕೆ ಅವರ ತವರೂರಿನಲ್ಲಿ ನಡೆದ ಈ ಘಟನೆ ಸಾಕ್ಷಿ. ಕಲ್ಲು ಹೊಡೆಯುವುದು ಮುಸ್ಲಿಂ ಧರ್ಮದಲ್ಲೇ ಇದೆ. ಆ ಕೆಲಸ ಅವರು ಮಾಡ್ತಿದ್ದಾರೆ ಅಷ್ಟೆ ಎಂದಿದ್ದಾರೆ.