– ಇಲ್ಲಿ ಬರೋದು ತಾಲಿಬಾನ್ ಸರ್ಕಾರ ಅಂತ ಹೇಳಿದ್ದೆ ಎಂದ ಮಾಜಿ ಸಂಸದ
ಮಡಿಕೇರಿ: ವಕ್ಫ್ ಆಸ್ತಿ ವಿವಾದ ಖಂಡಿಸಿ (Waqf Property Dispute) ರಾಜ್ಯದ ವಿವಿಧ ಜಿಲ್ಲೆಗಳಲ್ಲಿಂದು ಬಿಜೆಪಿ ಕಾರ್ಯಕರ್ತರು ʻನಮ್ಮ ಭೂಮಿ ನಮ್ಮ ಹಕ್ಕುʼ ಘೋಷವಾಕ್ಯದ ಅಡಿಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಅದರಂತೆ ಮಡಿಕೇರಿ ನಗರದ (Madikeri City) ಚೌಡೇಶ್ವರಿ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
Advertisement
ಈ ವೇಳೆ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha), ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 1 ವರ್ಷ ಆರು ತಿಂಗಳಾಯ್ತು. 2023ರ ಚುನಾವಣೆ ಸಂದರ್ಭದಲ್ಲೇ ನಾವು ಹೇಳಿದ್ದೆವು. ಕಾಂಗ್ರೆಸ್ ಬಂದ್ರೆ ಸ್ಥಾಪನೆ ಆಗೋದು ತಾಲಿಬಾನ್ ಸರ್ಕಾರ (Taliban Government) ಅಂತ, ಅದು ಈಗ ನಿಜ ಆಗ್ತಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಟ್ರೋಲ್‌ಗಳಿಗೆ ನಾನು ತಲೆ ಕೆಡಿಸಿಕೊಳ್ಳೊಲ್ಲ, ಮಧು ಬಂಗಾರಪ್ಪ ಮಧು ಬಂಗಾರಪ್ಪನೇ: ಟ್ರೋಲರ್‌ಗಳ ವಿರುದ್ಧ ಕಿಡಿ
Advertisement
Advertisement
ʻನಮ್ಮ ಭೂಮಿ – ನಮ್ಮ ಹಕ್ಕುʼ ಬಿಜೆಪಿಯ (BJP) ಘೋಷಣೆ ಅಲ್ಲ, ರಾಜ್ಯದ ಜನತೆಗೆ ಅನುಭವ. ಕಾಂಗ್ರೆಸ್ ಸರ್ಕಾರ ಬಂದಾಗ ಆ ಭಾಗ್ಯ, ಈ ಭಾಗ್ಯ ಅಂದವರು ಈಗ ಎಲ್ಲವನ್ನ ಕೊಡ್ತಿದ್ದಾರಾ? 10 ಕೆ.ಜಿ. ಅಕ್ಕಿ ಕೊಡ್ತೀವಿ ಅಂದ್ರು, ಇವತ್ತು ಕೇಂದ್ರ ಸರ್ಕಾರದಿಂದ ಅನ್ನ ಕಲ್ಯಾಣ ಯೋಜನೆಯಿಂದ 5 ಕೆ.ಜಿ. ಅಕ್ಕಿ ಕೋಡುತ್ತಿದ್ದಾರೆ, ಉಳಿದ ಅಕ್ಕಿಗೆ ದುಡ್ಡು ಕೊಡ್ತೀವಿ ಅಂದ್ರು, ಅದನ್ನೂ ನೆಟ್ಟಗೆ ಕೊಡ್ತಿಲ್ಲ. ನಿರುದ್ಯೋಗ ಯುವಕರಿಗೆ 3,000 ರೂ. ಕೊಡ್ತೀವಿ ಅಂದ್ರು, ಉಚಿತ ವಿದ್ಯುತ್ ಅಂದ್ರು, ಈಗ ಎಲ್ಲವನ್ನ ಸರಿಯಾಗಿ ಕೊಡ್ತಿದ್ದಾರಾ? ಒಂದೂವರೆ ವರ್ಷದಲ್ಲಿ ಹಣ ದೋಚುವ ಕೆಲಸ ಬಿಟ್ಟು ಬೇರೆ ಯಾವ ಕೆಲಸ ಮಾಡಿದ್ದಾರೆ ಎಂದು ಪ್ರಶ್ನೆಗಳ ಮಳೆ ಸುರಿಸಿದರು.
Advertisement
ರಾತ್ರಿ ಕಳೆದು, ಬೆಳಗಾಗುವಷ್ಟರಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗುತ್ತಿದೆ. ವಿಜಯಪುರದಲ್ಲೂ ಸಾವಿರಾರು ಎಕರೆ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಸಿದ್ದರಾಮಯ್ಯನವರು ಇಷ್ಟು ದಿನ ಅಲ್ಪಸಂಖ್ಯಾತರ ಮೇಲಿರುವ ಕೇಸ್‌ಗಳನ್ನ ವಾಪಸ್ ಪಡೆದು ಹಿಂದೂಗಳ ಹತ್ಯೆಗೆ ದಾರಿ ಮಾಡಿಕೊಡ್ತಿದ್ರು. ಈಗ ಹತ್ಯೆ ಮಾತ್ರ ಅಲ್ಲ, ಹಿಂದೂಗಳ ಭೂಮಿಗೂ ಕಂಟಕ ತಂದಿಡ್ತಿದ್ದಾರೆ ಎಂದು ಕೆಂಡಾಮಂಡಲವಾದರು. ಇದನ್ನೂ ಓದಿ: ವಕ್ಫ್ ಪ್ರತಿಭಟನೆ ನಡೆಯುವ ಮುನ್ನವೇ ಬಾಗಲಕೋಟೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ
ನೆಲೆ ಹುಡುಕಿಕೊಂಡು ಬಂದವರು ನೀವು:
ಇನ್ನೂ ವಕ್ಫ್ ಆಸ್ತಿ ಅಲ್ಲಾನ ಆಸ್ತಿ ಎಂಬ ಸಚಿವ ಜಮೀರ್ ಹೇಳಿಕೆ ಕುರಿತು ಮಾತನಾಡಿ, ಅಲ್ಲಾಗೂ ಭಾರತಕ್ಕೂ ಏನು ಸಂಬಂಧ? ನೀವು ನೆಲೆ ಹುಡುಕಿಕೊಂಡು ಭಾರತಕ್ಕೆ ಬಂದವರು. ನಿಮಗೂ ಭಾರತಕ್ಕೂ ಯಾವುದೇ ಸಂಬಂಧ ಇಲ್ಲ. ನಿಮಗೆ ಇಲ್ಲಿ ಯಾವ ಹಿನ್ನೆಲೆಯೂ ಇಲ್ಲ. ನಿಮ್ಮ ಧರ್ಮದ ಯಾವುದೇ ಕುರುಹುಗಳೂ ಇಲ್ಲಿಲ್ಲ. ಮುಸ್ಲಿಮರಲ್ಲೂ ಜಾತಿಗಳು ಸಾಕಷ್ಟು ಇವೆ. ಆದ್ರೆ ಧರ್ಮ ಅಂತ ಬಂದ್ರೆ ಎಲ್ಲಾರೂ ಒಟ್ಟಾಗಿ ಇರುತ್ತಾರೆ, ಆದ್ದರಿಂದ ಹಿಂದೂಗಳು ಒಟ್ಟಾಗಬೇಕು ಎಂದು ಕರೆ ನೀಡಿದರು.
ಮೂರು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು ನಿಶ್ಚಿತ:
ಇನ್ನೂ ಶನಿವಾರ (ನ.23) ರಾಜ್ಯದ ಚನ್ನಪಟ್ಟಣ, ಶಿಗ್ಗಾಂವಿ ಹಾಗೂ ಸಂಡೂರು ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಪ್ರಕಟವಾಗಲಿದ್ದು, ಮೈತ್ರಿ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೀನುಗಾರಿಕೆ ದೋಣಿಗೆ ಡಿಕ್ಕಿ ಹೊಡೆದ ಭಾರತೀಯ ನೌಕಾಪಡೆ ಜಲಾಂತರ್ಗಾಮಿ – ಇಬ್ಬರು ಮೀನುಗಾರರು ನಾಪತ್ತೆ
ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ, ಸಂಡೂರುನಲ್ಲಿ ಬಂಗಾರು ಹನುಮಂತು ಗೆಲ್ಲುತ್ತಾರೆ. ಈಗಾಗಲೇ ರಾಜ್ಯದ ಜನತೆ ಈ ಕಾಂಗ್ರೆಸ್ ಸರ್ಕಾರದ ನಡೆಯಿಂದ ಬೇಸತ್ತು ಹೋಗಿದ್ದಾರೆ. ಮೂರು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಈ ಸರ್ಕಾರ ತೊಲಗಲಿ ಎನ್ನುವ ಸಂದೇಶ ಕೊಡುತ್ತಾರೆಂದು ನುಡಿದರು.