ಮಂಡ್ಯ: ರಾಜ್ಯದಲ್ಲಿ ರಾಜ್ಯ ಸರ್ಕಾರ (State Government) 40% ತೆಗೆದುಕೊಳ್ಳುತ್ತಿದ್ರೆ, ನಾಗಮಂಗಲ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕ ಸುರೇಶ್‍ಗೌಡ 50% ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ (L. R Shivarame Gowda) ಗಂಭೀರ ಆರೋಪ ಮಾಡಿದ್ದಾರೆ.
Advertisement
ನಾಗಮಂಗಲದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಟೆಂಡರ್ (Tender) ನೀಡಲಾಗುತ್ತಿದೆ, ಕೋಟ್ಯಂತರ ರೂಪಾಯಿ ಅಭಿವೃದ್ಧಿ ಹೆಸರಲ್ಲಿ ಲೂಟಿ ಆಗುತ್ತಿದೆ. ಶಾಸಕರು, ಅಧಿಕಾರಿಗಳು ಇದರಲ್ಲಿ ಸಂಪೂರ್ಣವಾಗಿ ಶಾಮೀಲಾಗಿದ್ದಾರೆ. 20 ಲಕ್ಷ ಕೆಲಸ ಆಗಿಲ್ಲ, ಆದ್ರೆ ಒಂದು ಕೋಟಿ ಕಾಮಗಾರಿ ಬಿಲ್ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿರ್ಮಲಾನಂದ ಸ್ವಾಮೀಜಿ ಹೆಗಲ ಮೇಲೆ ಕೈಹಾಕಿ ಅಶೋಕ್ ಅಪಮಾನ : ಸಿಎಂ ಇಬ್ರಾಹಿಂ ಕಿಡಿ
Advertisement
Advertisement
ಪಿಡಬ್ಲುಡಿ, ಕೆ.ಆರ್.ಡಿ.ಎಲ್ ಸೇರಿದಂತೆ ಎಲ್ಲ ಇಲಾಖೆಯಲ್ಲಿಯು ಹಣ ಲೂಟಿ ಆಗುತ್ತಿದೆ. ನಮಗೆ ಇದರ ವಿರುದ್ಧ ಹೋರಾಡಲು ಯಾವುದೆ ಅಸ್ತ್ರ ಇರಲಿಲ್ಲ, ಈಗ ಲೋಕಾಯುಕ್ತ ಇದೆ. ತಕ್ಷಣದಲ್ಲಿಯೇ ಆ ಕುರಿತು ದೂರು ಕೊಡುತ್ತೇನೆ. ನಾಗಮಂಗಲ ಕ್ಷೇತ್ರದಲ್ಲಿ 50%ನ್ನು ಇಲ್ಲಿನ ಶಾಸಕರು ಪಡೆಯುತ್ತಿದ್ದಾರೆ ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.