ಬೆಂಗಳೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ (Munirathna) ಅವರ ಬಂಧನ ವಿಚಾರವಾಗಿ ಮಾಜಿ ಸಂಸದ ಡಿ.ಕೆ ಸುರೇಶ್ (DK Suresh) ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದಲ್ಲಿ ಅನವಶ್ಯಕವಾಗಿ ರಾಜಕೀಯ ಮಾಡುವುದು ಬೇಡ. ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ. ಬಿಜೆಪಿ ಇದಕ್ಕೆ ಬೆಂಬಲ ಕೊಡುತ್ತಾ ಅನ್ನೋದನ್ನ ಸ್ಪಷ್ಟವಾಗಿ ಹೇಳಲಿ ಎಂದು ಪ್ರಶ್ನೆ ಮಾಡಿದ್ದಾರೆ.
Advertisement
ಶಾಸಕ ಮುನಿರತ್ನ ಅವರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ (Bengaluru) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತನಿಖೆಗೆ ಪೊಲೀಸರು ಬಂಧನ ಮಾಡಿದ್ದಾರೆ. ಮಿಕ್ಕ ವಿಚಾರಗಳು ಕಾನೂನಿಗೆ ಸಂಬಂಧಪಟ್ಟಿದ್ದು. ಹಾಗಾಗಿ ನಾನು ಇದರ ಬಗ್ಗೆ ಹೆಚ್ಚು ಏನು ಹೇಳಲು ಹೋಗಲ್ಲ ಎಂದಿದ್ದಾರೆ. ಇದನ್ನೂ ಓದಿ: ಜಾತಿ ನಿಂದನೆ ಆರೋಪ ಪ್ರಕರಣ – ಶಾಸಕ ಮುನಿರತ್ನ 2 ದಿನ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ
Advertisement
ಯಾರೇ ತಪ್ಪು ಮಾಡಿದರೂ ತಪ್ಪೇ. ಈ ರೀತಿ ಜಾತಿ – ಜಾತಿಗಳ ಮಧ್ಯೆ ದ್ವೇಷ ಉಂಟುಮಾಡುವಂತಹದ್ದು ಸರಿಯಾ? ಜೊತೆಗೆ ಜಾತಿ ಧರ್ಮವನ್ನು ಬಹಳ ಕೀಳಾಗಿ ನೋಡುವಂತಹದ್ದು, ಮಹಿಳೆಯರಿಗೆ ಮಾಡತಕ್ಕಂತಹ ಅಗೌರವ ಯಾರು ಕೂಡ ಸಹಿಸಲು ಸಾಧ್ಯವಾಗುವುದಿಲ್ಲ. ಕೆಲವರು ಇದಕ್ಕೆ ರಾಜಕೀಯ ಬಣ್ಣವನ್ನು ಕಟ್ಟುವ ಪ್ರಯತ್ನ ಮಾಡುತ್ತಿದ್ದಾರೆ. ರಾಜಕೀಯ ನಾಯಕರಿಗೆ ವಿರೋಧ ಪಕ್ಷದವರಿಗೆ ಹೇಳುವುದು ಇಷ್ಟೇ. ನಾವ್ಯಾರು ಅವರನ್ನ ಬೈಯಿರಿ ಅಂತ ಹೇಳಲಿಲ್ಲ. ನಾವ್ಯಾರು ಅವರಿಗೆ ಕಮಿಷನ್ ಇಸ್ಕೊಳ್ಳಿ ಅಂತ ಹೇಳಿಲ್ಲ. ಎಲ್ಲವೂ ಕೂಡ ತೆರೆದ ಪುಸ್ತಕದಂತೆ ಬ್ಲಾಕ್ ಅಂಡ್ ವೈಟ್ ನಲ್ಲಿ ಇದೆ. ಅದಕ್ಕೆ ರಾಜಕೀಯ ಸಮರ್ಥನೆ ಮಾಡಿಕೊಳ್ಳುವುದು ಸರಿನಾ? ನಿಮ್ಮ ಜಾತಿಯನ್ನ ಜಾತಿಯ ಹೆಣ್ಣು ಮಕ್ಕಳನ್ನು ನಿಂದನೆ ಮಾಡಿದಂತವರನ್ನ ನೀವು ಯಾವ ರೀತಿಯಾಗಿ ನೋಡ್ತಿರಿ? ಅದೇ ಕಾಂಗ್ರೆಸ್ ಪಕ್ಷದವರು ಏನಾದರೂ ಮಾಡಿದರೆ ಬಿಜೆಪಿಯವರು ಸುಮ್ಮನೆ ಇರುತ್ತಿದ್ರಾ? ಸ್ವಲ್ಪ ಚಿಂತನೆಯನ್ನು ಮಾಡಿ ಮಾಧ್ಯಮಗಳ ಮುಂದೆ ಹೇಳಿಕೆ ಕೊಡಲಿ ಎಂದು ತಿರುಗೇಟು ನೀಡಿದ್ದಾರೆ.
Advertisement
Advertisement
ಈ ವಿಚಾರದಲ್ಲಿ ಅನವಶ್ಯಕವಾಗಿ ರಾಜಕೀಯ ಮಾಡುವುದು ಬೇಡ. ತಪ್ಪು ಮಾಡಿರೋದು ಸಾಮಾನ್ಯ ವ್ಯಕ್ತಿಯಲ್ಲ ಒಬ್ಬ ಮಾಜಿ ಮಂತ್ರಿ. ಬಿಜೆಪಿ ನಾಯಕರು ಅದನ್ನು ಅರ್ಥ ಮಾಡಿಕೊಂಡು ನಿಮ್ಮ ಪಕ್ಷ ಇದಕ್ಕೆ ಬೆಂಬಲ ಕೊಡುತ್ತಾ ಅನ್ನೋದನ್ನ ಸ್ಪಷ್ಟವಾಗಿ ಹೇಳಲಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಬೆಂಬಲಿಸುವ ಆಫರ್ ಬಂದಿತ್ತು, ನಾನೇ ತಿರಸ್ಕರಿಸಿದೆ: ನಿತಿನ್ ಗಡ್ಕರಿ
ದ್ವೇಷ ರಾಜಕಾರಣ ಎಂಬ ಮುನಿರತ್ನ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಡಿಕೆ ಸುರೇಶ್, ದ್ವೇಷಕ್ಕೂ ರಾಜಕಾರಣಕ್ಕೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ನಾವ್ಯಾರು ಆ ಮಾತು ಹೇಳು ಎಂದು ಹೇಳಲೇ ಇಲ್ಲ. ಅವರಿಬ್ಬರ ನಡುವೆ ನಡೆದ ಘಟನೆ. ನಮಗಂತೂ ಗೊತ್ತಿಲ್ಲ. ದೂರು ಕೊಟ್ಟ ಮೇಲೆ ಈ ವಿಚಾರಗಳೆಲ್ಲ ಹೊರಗಡೆ ಬಂದಿದೆ. ಪೊಲೀಸರ ತನಿಖೆಯಿಂದ ಎಲ್ಲ ವಿಚಾರಗಳು ಸಾರ್ವಜನಿಕ ಚರ್ಚೆಯಾಗುತ್ತದೆ. ಚುನಾವಣೆ ಸೋತ ಮೇಲೆ ನಾನು ಯಾವ ವಿಚಾರಕ್ಕೂ ಬಾಯಿ ಹಾಕುತ್ತಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ
ಜನ ಕೊಟ್ಟ ತೀರ್ಪನ್ನು ಗೌರವಯುತವಾಗಿ ಸ್ವೀಕಾರ ಮಾಡಿದ್ದೇನೆ ಎಂದಿದ್ದಾರೆ.
ಜನರಿಗೆ ನನ್ನ ಕೈಯಲ್ಲಿ ಆದಂತಹ ಸಹಾಯ ನಾನು ಮಾಡ್ತಾ ಇದ್ದೇನೆ. ನನ್ನ ಕೆಲಸ ನಾನು ಮಾಡುತ್ತಿದ್ದೇನೆ. ಹೊರತು ಈ ರಾಜಕೀಯದ ನಾಯಕರಿಂದ ಎಲ್ಲದರಿಂದಲೂ ನಾನು ದೂರವೇ ಇದ್ದೀನಿ. ನನಗೆ ಅಂತಹ ಅವಶ್ಯಕತೆ ಇಲ್ಲ. ಕುಂತರೆ ನಿಂತ್ರೆ ದಿನಬೆಳಗಾದ್ರೆ ರಾಜಕಾರಣ ಮಾಡುವುದಲ್ಲ. ಸಿನಿಮಾ ಪ್ರೊಡ್ಯೂಸ್ ಮಾಡಕ್ಕೂ ಹೋಗುವುದಿಲ್ಲ. ಡೈರೆಕ್ಟ್ ಮಾಡ್ಕೋ ಹೋಗೋದಿಲ್ಲ. ಅದೆಲ್ಲವನ್ನು ಬಿಜೆಪಿ-ಜೆಡಿಎಸ್ ಇಬ್ಬರಿಗೆ ಬಿಟ್ಟಿದ್ದೇನೆ. ಪ್ರೊಡ್ಯೂಸರ್, ಆಕ್ಟರ್ ಆಕ್ಷನ್ ಕಟ್ ಎಲ್ಲವೂ ಅವರಿಗೆ ಬಿಟ್ಟಿದ್ದೇವೆ. ನಮ್ಮನ್ನ ನೆನೆಸಿಕೊಳ್ಳದಿದ್ದರೇ ರಾಜಕಾರಣದಲ್ಲಿ ಅವರಿಗೆ ರಕ್ಷಣೆ ಸಿಗೋದಿಲ್ಲ. ರಾಜಕಾರಣದಲ್ಲಿ ಮೇಲೆ ಬರೋದಿಕ್ಕೆ ಆಗೋದಿಲ್ಲ. ʻಡಿಕೆ ಬ್ರದರ್ಸ್ʼರನ್ನ ಟಾರ್ಗೆಟ್ ಮಾಡಬೇಕು ಎಂಬ ಹುನ್ನಾರ ಅಜೆಂಡಾ ಎಲ್ಲರೂ ಇಟ್ಟುಕೊಂಡಿದ್ದಾರೆ. ಅದು ಸರಿನಾ ತಪ್ಪಾ ಅದು ಅವರಿಗೆ ಬಿಟ್ಟದ್ದು ಎಂದು ಹೇಳಿದ್ದಾರೆ.