ನ್ಯೂಯಾರ್ಕ್: ತನ್ನ 7 ವರ್ಷದ ಪುತ್ರನೊಂದಿಗೆ ಕಟ್ಟಡದಿಂದ ಜಿಗಿದು ಮಾಜಿ ಮಾಡೆಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ ಅಂತ ಹೇಳಲಾಗಿದೆ.
47 ವರ್ಷದ ಸ್ಟೆಫನಿ ಆಡಮ್ಸ್ ತನ್ನ ಮಗ ವಿನ್ಸೆಂಟ್ ಜೊತೆ ಶುಕ್ರವಾರ ಬೆಳಗ್ಗೆ 8.15ರ ಸುಮಾರಿಗೆ ನಗರದಲ್ಲಿರುವ ಗೋತಮ್ ಹೊಟೇಲಿನ ಮೇಲಿನ ಮಹಡಿಯಿಂದ ಹಾರಿದ್ದಾರೆ ಅಂತ ಮೇಲ್ನೋಟಕ್ಕೆ ಕಂಡು ಬಂದಿದೆ.
- Advertisement 2-
ಸದ್ಯ ಇಬ್ಬರ ಮೃತದೇಹ ಹೋಟೆಲಿನ ಎರಡನೇ ಮಹಡಿಯಲ್ಲಿ ದೊರೆತಿದೆ. ಎರಡನೇ ಮಹಡಿಯಲ್ಲಿ ಯಾರೋ ಕಿರುಚಾಡುತ್ತಿರುವುದು ಕೇಳಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದಾಗ ಇಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ ಅಂತ ವರದಿಯಾಗಿದೆ.
- Advertisement 3-
- Advertisement 4-
ಯಾರು ಈ ಮಾಡೆಲ್?:
ಪ್ಲೇ ಬಾಯ್ ಮ್ಯಾಗಜಿನ್ ಮುಖಪುಟವನ್ನು 1992ರಲ್ಲಿ ಮಿಸ್ ನವೆಂಬರ್ ಸ್ಟಿಫನಿ ಆಡಮ್ಸ್ ಅವರು ಅಲಂಕರಿಸಿದ್ದರು. ಆನಂತರ 2003ರ ವರೆಗೆ ಅಮೆರಿಕ ಸೇರಿದಂತೆ ಜನಪ್ರಿಯವಾಗಿದ್ದ ಈ ಪತ್ರಿಕೆಯ ಮಾಡೆಲ್ ಆಗಿ ಮುಂದುವರೆದಿದ್ದರು. ವಿಚ್ಛೇದಿತರಾಗಿದ್ದ ಸ್ಟಿಫಾನೀ ಆಡಮ್ಸ್ ಮಾಜಿ ಪತಿ ಚಾಲ್ರ್ಸ್ ನಿಕೋಲಾಯಿಯೊಂದಿಗಿನ ವ್ಯಾಜ್ಯಗಳಿಂದ ಬಳಲಿದ್ದರು. ಸ್ಟಿಫಾನೀ ಆಡಮ್ಸ್ ಅವರನ್ನು ಅನೇಕ ಬಾರಿ ಪೊಲೀಸರು ವಿಚಾರಣೆ ನಡೆಸಿದ್ದರು ಎಂಬುದಾಗಿ ವರದಿಯಾಗಿದೆ.
ಸದ್ಯ ಮಾಜಿ ಮಾಡೆಲ್ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬುದು ತನಿಖೆಯ ಬಳಿಕವಷ್ಟೇ ತಿಳಿದುಬರಬೇಕಿದೆ.