ಗದಗ: ಖುರಾನ್‍ನ ಆಯತಗಳಲ್ಲಿ ಹಿಂದೂ ಜನರನ್ನ ಕೊಲ್ಲು ಅಂತಾ ಹೇಳಲಾಗಿದೆ ಎನ್ನುವ ಮೂಲಕ ಪರಿಷತ್ ಮಾಜಿ ಸದಸ್ಯ ಹಾಗೂ ಎಸ್.ಎಸ್.ಕೆ ಸಮಾಜದ ರಾಜ್ಯಾಧ್ಯಕ್ಷ ನಾರಾಯಣಸಾ ಭಾಂಡಗೆ ಹೊಸ ವಿವಾದ ಸೃಷ್ಟಿಸಿದ್ದಾರೆ.
ಗದಗದ ಪತ್ರಿಕಾ ಭವನದಲ್ಲಿ ಲವ್ ಜಿಹಾದ್ ವಿರೋಧಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಇತ್ತೀಚೆಗೆ ಹುಬ್ಬಳ್ಳಿ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಲವ್ ಪ್ರಕರಣದ ಹಾಗೂ ಗದಗ ಪ್ರಕರಣ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದ್ದಾರೆ.
ಮುಸಲ್ಮಾನರಿಗೆ ಹಿಡನ್ ಅಜೆಂಡಾ ಇದೆ. ಹಿಂದೂ ಸಮಾಜದ ಯುವತಿಯರನ್ನ ಟಾರ್ಗೆಟ್ ಮಾಡಿ, ಗೊಂದಲ ಸೃಷ್ಟಿಸಿ, ಉಪಯೋಗ ಮಾಡಿಕೊಂಡು ಮುಂದೇನು ಮಾಡಿದ್ದಾರೆ ಅನ್ನೋ ಬಗ್ಗೆ ವಾಟ್ಸಾಪ್‍ನಲ್ಲಿ ಬಂದಿದೆ. ಮುಸ್ಲಿಂ ಸಮಾಜದ ಯುವಕರು ಹಿಂದೂ ಸಮಾಜದ ಯುವತಿಯರನ್ನ ಕಣ್ಣೆತ್ತಿ ನೋಡಬಾರದು ಆ ರೀತಿ ಹಿಂದೂ ಸಮಾಜವನ್ನ ಜಾಗೃತ ಮಾಡಬೇಕಿದೆ. ಲವ್ ಜಿಹಾದ್‍ಗೆ ಮುಂದಾದರೆ ಮನೆ ಹೊಕ್ಕು ಹೊಡೆಯಬೇಕು. ಇನ್ನೊಮ್ಮೆ ಮುಸಲ್ಮಾನರು ಆ ಧೈರ್ಯ ಮಾಡಬಾರದು ಎಂದು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ.
ಮೌಲ್ವಿಗಳ ಬಗ್ಗೆ ಟೀಕೆ ಮಾಡುತ್ತಾ, ಭಾರತ ಮುಸ್ಲಿಂ ರಾಷ್ಟ್ರವಾಗಬೇಕೆಂದು ತಯಾರಾಗಿರಿ. ಭಯೋತ್ಪಾದಕರಾಗಿ ಅಂತಾ ಮುಲ್ಲಾ ಮೌಲ್ವಿಗಳು ಮದರಸಾಗಳಲ್ಲಿ ಬೋಧನೆ ಮಾಡುತ್ತಾರೆ. ಮಠಾಧೀಶರು ಹಿಂದೂ ಸಮಾಜದ ಬಗ್ಗೆ ಮಾತನಾಡಿ. ಅನೇಕ ಮಠಾಧೀಶರು ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ. ದುರ್ದೈವ ಅಂದರೆ ಕೆಲವು ಮಠಾಧೀಶರು ಮಠದಲ್ಲಿ ನಮಾಜ್ ಮಾಡಲು ಅವಕಾಶ ಕೊಡುತ್ತಾರೆ. ಹಾಗಾದರೆ ಮಸೀದಿಯಲ್ಲಿ ಲಿಂಗ ಪೂಜೆ ಮಾಡಿ ನೋಡೋಣ ಅಂತಾ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಮದ್ಯ ಸೇವನೆಗೆ ಹಣಕೊಡಲಿಲ್ಲವೆಂದು ತಂದೆಯನ್ನೆ ಕೊಂದ ಪಾಪಿ
ಸೋಗಲಾಡಿ ಹಿಂದುತ್ವ ಬಿಡಬೇಕು. ದೇಶದಲ್ಲಿ ಬದುಕಬೇಕಾದರೆ ಮುಸಲ್ಮಾನರನ್ನ ಹದ್ದುಬಸ್ತಿನಲ್ಲಿ ಇಡಬೇಕು. ಅವರು ಮಕ್ಕಳಿಗೆ ಬಂದೂಕು ಟ್ರೇನಿಂಗ್ ಕೊಡುತ್ತಾರೆ. ಭಯೋತ್ಪಾದಕರು ಮುಸಲ್ಮಾನರೆ, ಬೇರಾರು ಅಲ್ಲ. ಮುಸಲ್ಮಾನರು ಎಂದಿಗೂ ನಮ್ಮವರಾಗುವುದಿಲ್ಲ. ಕೆಲ ರಾಜಕೀಯ ಪಕ್ಷಗಳು ಮುಸಲ್ಮಾರಿಗೆ ಹುಟ್ಟಿದಂತೆ ಆಡುತ್ತವೇ ಅಂತಾನೂ ಹೇಳುವ ಮೂಲಕ ಕಾಂಗ್ರೆಸ್, ಜೆಡಿಎಸ್ ಪಕ್ಷವನ್ನ ಪರೋಕ್ಷವಾಗಿ ಟೀಕಿಸಿದರು. ಇದನ್ನೂ ಓದಿ: ದೆಹಲಿಯಲ್ಲಿ ಬೆಳ್ಳಂಬೆಳಗ್ಗೆಯೇ ಅಗ್ನಿ ದುರಂತ: 5 ಅಂಗಡಿಗಳು ಭಸ್ಮ
ಈ ಸುದ್ಧಿಗೋಷ್ಠಿನಲ್ಲಿ ಶ್ರೀಕಾಂತ ಖಟವಟೆ, ವಿನೋಧ ಸಿದ್ಲಿಂಗ್ ಸೇರಿದಂತೆ ಎಸ್.ಎಸ್.ಕೆ ಸಮಾಜದ ಅನೇಕ ಮುಖಂಡರು ಭಾಗವಹಿಸಿದ್ದರು.