ಮಂಡ್ಯ: ರಾಜಕೀಯ ವೈಷಮ್ಯದಿಂದ ಹಾಲಿ, ಮಾಜಿ ಶಾಸಕರ ಬೆಂಬಲಿಗರು ಬಡಿದಾಡಿಕೊಂಡ ಘಟನೆ ಮಂಡ್ಯ ತಾಲೂಕಿನ ಬಸರಾಳು ಗ್ರಾಮದಲ್ಲಿ ನಡೆದಿದೆ.
ಮಾಜಿ ಶಾಸಕ ಸುರೇಶ್ ಗೌಡ ಬೆಂಬಲಿಗರಾದ ಪ್ರವೀಣ್, ಸಂದೀಪ್ ಮೇಲೆ ಹಾಲಿ ಶಾಸಕ ಚಲುವರಾಯಸ್ವಾಮಿ ಬೆಂಬಗಲಿಗರಾದ ವಿನಯ್, ಶಬರಿ, ಸೇರಿ ಏಳು ಮಂದಿ ಬ್ಯಾಟ್, ವಿಕೆಟ್, ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಯಿಂದಾಗಿ ಪ್ರವೀಣ್, ಸಂದೀಪ್ ಎಂಬವರಿಗೆ ಗಾಯಗಳಾಗಿವೆ.
ಕೆಂಚನಹಳ್ಳಿಗೆ ಊಟಕ್ಕೆ ಬಂದು ವಾಪಸ್ಸಾಗುತ್ತಿದ್ದಾಗ ಘಟನೆ ಸಂಭವಿಸಿದ್ದು ಎರಡೂ ಗುಂಪಿನವರಿಂದ ಬಸರಾಳು ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಆದ್ರೆ ಅಷ್ಟಕ್ಕೆ ಸುಮ್ಮನಾಗದ ಚಲುವರಾಯಸ್ವಾಮಿ ಬೆಂಬಲಿಗರು, ನಾಗಮಂಗಲಕ್ಕೆ ಬಂದು ಪಟ್ಟಣದಲ್ಲಿರುವ ಸುರೇಶ್ ಗೌಡ ಅಭಿಮಾನಿ ಸಂಘದ ಕಚೇರಿಯನ್ನೂ ಧ್ವಂಸಗೊಳಿಸಿದ್ದಾರೆ ಅಂತ ದೂರಲಾಗಿದೆ.
ನಿಮ್ಮ ರಾಜಕೀಯ ದ್ವೇಶವಿದ್ದರೆ ನೇರವಾಗಿ ನನ್ನ ಮೇಲೆ ಹಲ್ಲೆ ನಡೆಸಿ ನಮ್ಮ ಕಾಯ೯ಕತ೯ರು ಹಾಗು ಅಭಿಮಾನಿಗಳ ಮೇಲೆ ನಿಮ್ಮ ಅಧಿಕಾರ ದಪ೯ ಬೇಡ
— SURESH GOWDA (@sureshgowdaMLA) March 8, 2017