ಮಂಡ್ಯ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಕಾಂಗ್ರೆಸ್ ಪಕ್ಷ ತೊರೆದ ನಂತರ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬಿಡಲು ಸಿದ್ಧರಾದವರ ಪಟ್ಟಿಗೆ ಮಾಜಿ ಶಾಸಕ ಸುರೇಶಗೌಡ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರುತ್ತಿರುವುದಾಗಿ ಸುರೇಶ್ ಗೌಡ ಬಹಿರಂಗ ಹೇಳಿಕೆ ನೀಡಿದ್ದಾರೆ.
ಜಿಲ್ಲೆಯ ಮದ್ದೂರು ತಾಲೂಕಿನ ಕಿರಂಗೂರು ಗ್ರಾಮದಲ್ಲಿ ತಮ್ಮ ಬೆಂಬಲಿಗರ ಜೊತೆ ಮಾತನಾಡಿದ ಸುರೇಶ ಗೌಡ, ಇದೇ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಜೆಡಿಎಸ್ ಸೇರಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.
Advertisement
ಮಾಜಿ ಪ್ರಧಾನಿ ದೇವೇಗೌಡ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಸೇರಿದಂತೆ ಮಂಡ್ಯ ಜಿಲ್ಲೆಯ ಜೆಡಿಎಸ್ ನಾಯಕರ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಅವರಿಗೆ ಪಕ್ಷ ಸೇರಲು ಬಯಸುತ್ತಿರೋದಾಗಿ ತಿಳಿಸಿದ್ದೇನೆ. ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದೆ. ಅವರು ಸ್ವಾಗತ ಕೋರೋದು ಬಾಕಿ ಇದೆ. ಯುಗಾದಿ ನಂತರ ಪಕ್ಷ ಸೇರುವ ಪ್ರಕ್ರಿಯೆ ನಡೆಯುತ್ತೆ ಅಂತಾ ಸುರೇಶ್‍ಗೌಡ ಹೇಳಿದ್ದಾರೆ.
Advertisement
ಇದನ್ನೂ ಓದಿ: ಕಾಂಗ್ರೆಸ್ ನಾಯಕ ಹೆಚ್.ವಿಶ್ವನಾಥ್ ಜೆಡಿಎಸ್‍ಗೆ ಸೇರ್ಪಡೆ?
Advertisement
ಚಲುವರಾಯಸ್ವಾಮಿ ಸೇರಿದಂತೆ ಏಳು ಜನ ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷ ಸೇರೋ ಮಾತನಾಡ್ತಿದ್ದಾರೆ. ಮುಂದೊಂದು ದಿನ ಅವರು ಕಾಂಗ್ರೆಸ್ ಪಕ್ಷಕ್ಕೂ ಕೈ ಕೊಡುತ್ತಾರೆ. ಹೀಗಾಗಿ ನಾಗಮಂಗಲ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಇರಲ್ಲ. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ನಶಿಸಿ ಹೋಗ್ತಿದೆ. ಇದಕ್ಕೆ ದಿಗ್ವಿಜಯ್ ಸಿಂಗ್, ಪರಮೇಶ್ವರ್, ಸಿದ್ದರಾಮಯ್ಯ ಕಾರಣ. ಇ-ಮೇಲ್ ಮೂಲಕ ರಾಹುಲ್ ಗಾಂಧಿಗೆ ದೂರು ಸಲ್ಲಿಸಿದ್ದು, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸುರೇಶ್‍ಗೌಡ ಅಸಮಾಧಾನ ಹೊರಹಾಕಿದರು.
Advertisement