ಹಾಸನ: ನನ್ನ ಮೇಲೆ ದಾಳಿ ಮಾಡಲು ಬಂದರೆ, ನಾನು ಆನೆ ಕೊಲ್ಲುತ್ತೇನೆ, ನೀವು ನನ್ನ ಅರೆಸ್ಟ್ ಮಾಡಿ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ರೋಷಾವೇಷ ವ್ಯಕ್ತಪಡಿಸಿದರು.
ಹಾಸನ (Hassan) ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ (Elephant) ಹಾವಳಿ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಯಿ (Basavaraj Bommai) ಸೂಚನೆಯಂತೆ ಇಂದಿನಿಂದ ಹಾಸನ, ಕೊಡಗು (Kodagu) ಭಾಗದಲ್ಲಿ ಅಧಿಕಾರಿಗಳು ಅಧ್ಯಯನ ನಡೆಸಿದರು. ಸಕಲೇಶಪುರ ತಾಲೂಕಿನ ಬಾಗೆ ಗ್ರಾಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಬಾಧಿತ ಪ್ರದೇಶದ ಜನರು, ವಿವಿಧ ಸಂಘ, ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಿದರು.
Advertisement
Advertisement
ಈ ವೇಳೆ ಮಾತನಾಡಿದ ಮಾಜಿ ಶಾಸಕ, ಆನೆಗಳು ಬಂದಿರುವುದು ಕಾಡಿಗಲ್ಲ, ನಾಡಿಗೆ. ಆನೆ ದಾಳಿಯಿಂದ ಸತ್ತಾಗ ಪರಿಹಾರ ಕೊಡುವುದು ಬೇಡ, ಇದನ್ನು ನಾವು ಕೊಡುತ್ತೇವೆ. ಬದಲಿಗೆ ನೀವು ನಿಮ್ಮ ಆನೆಗಳನ್ನು ಸ್ಥಳಾಂತರಿಸಿ, ಇದಕ್ಕೆ ಮುಖ್ಯಮಂತ್ರಿಗಳು ಒಪ್ಪಿದ್ದಾರೆ. ಜೊತೆಗೆ ಪರಿಸರವಾದಿಗಳಿಗೆ ರೇಡಿಯೋ ಕಾಲರ್ ಹಾಕಿ ಬಿಡಿ. ಅವರಿಗೆ ಮೂರುಕಾಸಿನ ತಲೆ ಇಲ್ಲ. ಜನನಿಬಿಡ ಪ್ರದೇಶದಲ್ಲಿ ಆನೆ ಜನರನ್ನು ತುಳಿದು ಸಾಯಿಸುತ್ತಿವೆ. ಇದಕ್ಕೊಂದು ಅಂತಿಮ ಪರಿಹಾರ ಕಂಡುಹಿಡಿಯಲೇಬೇಕಾಗಿದೆ ಎಂದು ಒತ್ತಾಯಿಸಿದರು. ಇದನ್ನೂ ಓದಿ: ಇರಾನ್ ಚಳವಳಿಗೆ ಕೈಜೋಡಿಸಿದ ಕೇರಳದ ಮುಸ್ಲಿಂ ಮಹಿಳೆಯರು – ಹಿಜಬ್ ಸುಟ್ಟು ಪ್ರತಿಭಟನೆ
Advertisement
ಆನೆ ದಾಳಿ ಕುರಿತು ನೀವು ಬೆಂಗಳೂರಿಗೆ ಹೋಗಿ ಕೊಡುವ ರಿಪೋರ್ಟ್ ಜನರ ವಿರುದ್ಧನ ಆಗಿದ್ದರೆ, ನಾನು 3 ಗನ್ ತರಿಸಿದ್ದೇನೆ. ಆ ಗನ್‌ಗೆ ಲೈಸನ್ಸ್ ಇದ್ದು, ಡಬಲ್ ಬ್ಯಾರೆಲ್ ಗನ್ ನನ್ನ ಬಳಿ ಇದೆ. ನಾನು ತೋಟಕ್ಕೆ ಹೋದಾಗ ಅಟ್ಯಾಕ್ ಮಾಡಲು ಆನೆ ಬಂದರೆ ನಾನು ಶೂಟ್ ಮಾಡುತ್ತೇನೆ. ನನ್ನನ್ನು ಕೊಲ್ಲಲು ಬಂದರೆ, ನಾನು ಆನೆ ಕೊಲ್ಲುತ್ತೇನೆ. ನೀವು ನನ್ನ ಅರೆಸ್ಟ್ ಮಾಡಿ ಎಂದು ಕಿಡಿಕಾರಿದ ಅವರು, ಕಾಡಾನೆ ದಾಳಿ ಬಂದು ದಾಳಿ ನಡೆಸುತ್ತಿರುವುದರಿಂದ ಗ್ರಾಮಸ್ಥರು ಸಿಟ್ಟಿಗೆದ್ದಿಲ್ಲ, ಬದಲು ನೋವನ್ನು ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
Advertisement
ಸಭೆಯಲ್ಲಿ ಕಾಡಾನೆಗಳನ್ನು ಸಂಪೂರ್ಣ ಸ್ಥಳಾಂತರಿಸುವಂತೆ ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಕಾಫಿ ಬೆಳೆಗಾರ ಬೆಕ್ಕನಹಳ್ಳಿ ನಾಗರಾಜ್, ಪರಿಸರವಾದಿಗಳ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಸಂಪೂರ್ಣ ಕುಸಿದ ಮನೆಗೆ 50 ಸಾವಿರ ರೂ. ಪರಿಹಾರ – ನೊಂದ ಕುಟುಂಬದಿಂದ ರಾಷ್ಟ್ರಪತಿಗೆ ದಯಾಮರಣ ಅರ್ಜಿ