ಕೋಲಾರ: ಲೋಕಸಭಾ ಚುನಾವಣೆ ಮುಗಿದ ಮೇಲೂ ಕೋಲಾರದಲ್ಲಿ ಸಂಸದ ಮುನಿಯಪ್ಪ ಹಾಗೂ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ನಡುವಿನ ಗುದ್ದಾಟ ಮುಂದುವರಿದಿದೆ.
ಕೋಲಾರದ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ತಮ್ಮ ಬೆಂಬಲಿಗ ರಾಜೇಂದ್ರಗೌಡ ನಾಪಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ ಸಂಸದ ಮುನಿಯಪ್ಪಗೆ ಟಾಂಗ್ ಕೊಟ್ಟರು. ನಾನು ಕೊತ್ತೂರು ಮಂಜು, ಫುಟ್‍ಪಾತ್ ಮಂಜು ಅಲ್ಲ. ಕೊತ್ತೂರು ಮಂಜು ಏನು ಎಂದು ಎಲ್ಲರಿಗೂ ಗೊತ್ತಿದೆ. ನ್ಯಾಯ-ನೀತಿ-ಧರ್ಮ ಪಾಲನೆ ಮಾಡುವವನು. ನಾನು ಯಾರಿಗೂ ಮೋಸ ಮಾಡಿಲ್ಲ. ಕೆಟ್ಟದ್ದೂ ಬಯಸಿಲ್ಲ. ಹಾಗಾಗಿ ಯಾರೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಮುನಿಯಪ್ಪಗೆ ಟಾಂಗ್ ನೀಡಿದ್ದಾರೆ.
Advertisement
Advertisement
ಚುನಾವಣೆಯಲ್ಲಿ ಒಬ್ಬರ ಪರ ಕೆಲಸ ಮಾಡಬೇಕು. ನೋಡಿಕೊಳ್ಳುತ್ತೇನೆ ಅಂದ್ರೆ, ನಾವು ನೋಡಿಕೊಳ್ಳುತ್ತೀವಿ. ಅವರು ನೋಡಿ ಆದ ಮೇಲೆ ನಾವು ನೋಡಿಕೊಳ್ಳುತ್ತೇವೆ ಎಂದು ಚುನಾವಣೆಗೆ ಮುನ್ನ, 18ರ ನಂತರ ಎಲ್ಲರನ್ನು ನೋಡಿಕೊಳ್ಳುವೆ ಎಂದಿದ್ದ ಸಂಸದ ಮುನಿಯಪ್ಪಗೆ ನೇರವಾಗಿ ತಿರುಗೇಟು ನೀಡಿದರು.
Advertisement
ಈಗಾಗಲೇ ಮೈತ್ರಿ ಧರ್ಮ ಪಾಲನೆ ಮಾಡದೆ 10 ಕ್ಕೂ ಹೆಚ್ಚು ಕಾಂಗ್ರೆಸ್ ಮುಖಂಡರ ವಿರುದ್ಧ ಕೆಪಿಸಿಸಿಗೆ ದೂರು ನೀಡಿ ಸಸ್ಪೆಂಡ್ ಬೆದರಿಕೆ ಹಾಕಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದೇನು ಡಿಸಿ-ಎಸಿ ಕೆಲಸ ಅಲ್ಲ. ಸಸ್ಪೆಂಡ್ ಮಾಡೋದಾದ್ರೆ ಮಾಡಿಕೊಳ್ಳಲಿ ಎಂದು ಕಾಂಗ್ರೆಸ್‍ಗೆ ಸವಾಲೆಸೆದರು.
Advertisement
ಸರ್ಕಾರಕ್ಕೆ ಎರಡು ವರದಿ ಸಲ್ಲಿಕೆಯಾಗಿದೆ. ಬಿಜೆಪಿ ಅಭ್ಯರ್ಥಿ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದು ನಿಶ್ಚಿತವಾಗಿದೆ. ನಾವೂ ಕೂಡ ದೈವ ಭಕ್ತರು. ನಾವೂ ಸಾಕಷ್ಟು ದೇವಾಲಯಗಳನ್ನ ಕಟ್ಟಿದ್ದೇವೆ. 500 ವೋಟ್‍ನಲ್ಲಿ ಆದರೂ ಬಿಜೆಪಿ ಅಭ್ಯರ್ಥಿಯನ್ನು ಗದ್ದೇ ಗೆಲ್ಲುತ್ತಾರೆ ಎಂದು ಅವರು ಹೇಳಿದರು.