ಕೊಪ್ಪಳ: ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯಕ್ಕೆ ಸಿದ್ದರಾಮಯ್ಯ ಒಬ್ಬರೇ ನಾಯಕ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
Advertisement
ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಅವರು, ಬೇರೆ ಪಕ್ಷದವರು ಏನೇ ಹೇಳಿದ್ರೂ, ನಾವು ಸಿದ್ದರಾಮಯ್ಯರನ್ನು ಬಿಟ್ಟು ಯಾರನ್ನೂ ಒಪ್ಪಲ್ಲ. ಮುಸ್ಲಿಂ ಸಮುದಾಯದವರು ಸಿದ್ದರಾಮಯ್ಯರನ್ನು ಬಿಟ್ಟು ಬೇರೆ ಯಾರನ್ನೂ ನಮ್ಮ ಸಮುದಾಯ ಒಪ್ಪಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಅಲ್ಪಸಂಖ್ಯಾತರಿಗೆ ಅನೇಕ ಯೋಜನೆಗಳನ್ನು ಕೊಟ್ಟಿದ್ದಾರೆ. ವಕ್ಫ್ ಬೋರ್ಡ್ ಇಲಾಖೆಯಿಂದ ಹಣ ಕೊಡಿಸಿದ್ದಾರೆ. ಕುಮಾರಸ್ವಾಮಿ ಮತ್ತು ದೇವೇಗೌಡರು ನನಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರೆ ಇದನ್ನು ನಾನಾಗಲಿ, ನನ್ನ ಕುಟುಂಬವಾಗಲಿ ಮರೆಯಲು ಸಾಧ್ಯವಿಲ್ಲ ಆದರೆ ಕುಮಾರಸ್ವಾಮಿ ನಮಗೆ ಸಹಕಾರ ಕೊಡಲಿಲ್ಲ ಎಂದು ನೇರವಾಗಿ ಎಚ್‍ಡಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ನಿಮ್ಮ ಹೊಟ್ಟೆಕಿಚ್ಚಿನಿಂದ ಹಾಳಾಗ್ತಿರೋದು ನೀವೇ ಸಿದ್ದರಾಮಯ್ಯ ಅಲ್ಲ – ಹೆಚ್‍ಡಿಕೆ ವಿರುದ್ಧ ಜಮೀರ್ ಗುಡುಗು
Advertisement
Advertisement
ನಾನು ಸಚಿವನಾಗಿದ್ದಾಗ ಅಭಿವೃದ್ದಿಗೆ ಹಣ ಕೇಳಿದ್ರೆ, ನಮ್ಮನ್ನು ಕುಮಾರಸ್ವಾಮಿ ಬೈತಿದ್ರು 2008 ರಲ್ಲಿ ನಾನು ಸೋಲನ್ನು ಅನುಭವಿಸಲು, ಮುಸ್ಲಿಮರು ಕಾರಣ. ಯಾಕಂದ್ರೆ ಮುಸ್ಲಿಂ ಸಮುದಾಯ ಜೆಡಿಎಸ್ ಪಕ್ಷವನ್ನು ವಿರೋಧ ಮಾಡಿದರು. ಕುಮಾರಸ್ವಾಮಿಗೆ ಬಹಳ ಸುಳ್ಳು ಹೇಳುವ ಅಭ್ಯಾಸವಿದೆ. ಸಿಂಧಗಿ ಮತ್ತು ಹಾನಗಲ್‍ನಲ್ಲಿ ಜೆಡಿಎಸ್ ಮುಸ್ಲಿಂ ಸಮುದಾಯದ ಅಭ್ಯರ್ಥಿಗಳನ್ನು ಹಾಕಬೇಕಿತ್ತಾ? ವೋಟ್ ಒಡೆಯಲು ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. ಮುಸ್ಲಿಂ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸಿ ಬೆಂಗಳೂರಿನಲ್ಲಿ ಕೂತು ಮುಸ್ಲಿಂ ಸಮುದಾಯಕ್ಕೆ ಬೈಯುತ್ತಿದ್ದಾರೆ. ಬಿಜೆಪಿಯ ಅನುಕೂಲಕ್ಕಾಗಿ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದಾರೆ. ಕುಮಾರಸ್ವಾಮಿ ಮುಸ್ಲಿಂ ಸಮುದಾಯಕ್ಕಾಗಿ ಕೆಲಸ ಮಾಡಿಲ್ಲ. ನಮ್ಮ ಸಮುದಾಯಕ್ಕೆ ಎಚ್‍ಡಿಕೆ ಯಾವುದಾದರೂ ಒಂದು ಕೆಲಸ ಮಾಡಿದ್ದರೆ ಬಹಿರಂಗವಾಗಿ ಬಂದು ಹೇಳಿಕೆ ನೀಡಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನಿಮ್ಮ ಅಂತ್ಯಕಾಲವೂ ಆರಂಭವಾಗಿದೆ – ಸಿದ್ದರಾಮಯ್ಯ ವಿರುದ್ಧ ಹೆಚ್‍ಡಿಕೆ ಟ್ವೀಟ್ ವಾರ್