ರಾಯಚೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಈಗಿನ ಕನಕದಾಸರು. ಆಗ ಕನಕದಾಸರು ಒಂದು ಸಮಾಜಕ್ಕೆ ಸೀಮಿತರಾಗಿರಲಿಲ್ಲ ಈಗ ಸಿದ್ದರಾಮಯ್ಯವರು ಅವರಂತೆಯೇ ಇದ್ದಾರೆ ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹಾಡಿಹೊಗಳಿದ್ದಾರೆ.
ಜಿಲ್ಲೆಯ ಸಿಂಧನೂರಿನಲ್ಲಿ ನಡೆದ ಕನಕದಾಸರ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ತಂಗಡಗಿ, ಮಾಜಿ ಸಿಎಂ ಸಿದ್ದದರಾಮಯ್ಯ ಅವರ ಸಂಪುಟದಲ್ಲಿ ಸಚಿವನಾಗಿದ್ದಕ್ಕೆ ನನಗೆ ಹೆಮ್ಮೆಯಿದೆ. 5 ವರ್ಷ ಕಾಲ ಉತ್ತಮ ಆಡಳಿತವನ್ನ ಸಿದ್ದರಾಮಯ್ಯ ಅವರು ನೀಡಿದ್ದಾರೆ. ಅಲ್ಲದೇ ಹಿಂದುಳಿದ ಸಮಾಜಗಳ ಮೇಲೆತ್ತುವ ಕೆಲಸ ಮಾಡಿದ್ದಾರೆ. ಅವರ ಕಾರ್ಯಗಳ ಬಗ್ಗೆ ಜನರಿಗೆ ಈಗ ಅರಿವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ಸಮಾಜದಲ್ಲಿ ಯಾವುದೇ ಧರ್ಮ ಮನುಷ್ಯ ಮನುಷ್ಯರನ್ನು ದ್ವೇಷಿಸಲು ಹೇಳುವುದಿಲ್ಲ. ಜಾತಿ ವ್ಯವಸ್ಥೆಯನ್ನು ದೇವರು ಹಾಗೂ ಧರ್ಮ ಮಾಡಿಲ್ಲ. ಸಮಾಜದಲ್ಲಿನ ಕೆಲವು ಸ್ವಾರ್ಥಿಗಳು ಶೋಷಣೆ ಮಾಡಲು ಇಂತಹ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಇದನ್ನು ಬದಲಾವಣೆ ಮಾಡಲು ಬುದ್ಧ, ಬಸವಣ್ಣರಿಂದ ಅಂಬೇಡ್ಕರ್ ವರೆಗೂ ಪ್ರಯತ್ನ ಮಾಡಿದ್ದಾರೆ. ವಿಶ್ವ ಮಾನವನಾಗಿ ಹುಟ್ಟುವ ಮನುಷ್ಯ ಬೆಳೆಯುತ್ತಾ ಮಾನವನಾಗುತ್ತಾನೆ ಎಂದು ತಿಳಿಸಿದರು.
ಕರ್ನಾಟಕ ಸರ್ಕಾರ ಎಲ್ಲಾ ಜಾತಿಯವರ ಸರ್ಕಾರವಾಗಿದ್ದು, ದುರುದ್ದೇಶದಿಂದ ಕೆಲವರು ಟೀಕೆ ಮಾಡುತ್ತಾರೆ ಅಷ್ಟೇ. ಈ ಟೀಕೆಗಳಿಗೆ ನಾನು ಕೇರ್ ಮಾಡಲ್ಲ. ದೇವರು ಆತ್ಮದಲ್ಲಿದ್ದಾನೆಂದು ಬಸವಣ್ಣನವರ ವಚನ ಓದಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv