– ಮೋದಿ ಎದುರು ನಿಂತು ಮಾತಾಡೋ ಸಂಸದರಿಲ್ಲ
ತುಮಕೂರು: ಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರವಿಲ್ಲದಿದ್ದರೆ ಅವರು ಸತ್ತು ಹೋಗುತ್ತಿದ್ದರು ಎಂದು ಮಾಜಿ ಸಚಿವ ಎಸ್.ಆರ್ ಶ್ರೀನಿವಾಸ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Advertisement
ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಬಿಜೆಪಿಯ ನಾಯಕರು 100 ಬಾರಿ ಒಂದೇ ಸುಳ್ಳು ಹೇಳಿ ಅದನ್ನು ಸತ್ಯ ಮಾಡುವ ಕಾರ್ಯಕ್ಕೆ ಮುಂದಾಗಿದ್ದಾರೆ. ಬಹುಮತವಿಲ್ಲದಿದ್ದರು ಕೂಡ ನನಗೆ ಬಹುಮತವಿದೆ ಎಂದು ಹೇಳಿ ವಿಧಾನಸೌಧದಲ್ಲಿ ಬಿಎಸ್‍ವೈ ಭಾಷಣ ಮಾಡಿದ್ದರು. ಆದರೆ ಅಧಿಕಾರ ಪಡೆಯಲು ವಿಧಾನಸೌಧದಲ್ಲಿ 214 ಶಾಸಕರಲ್ಲಿ 213 ಶಾಸಕರು ಇರಬೇಕು ಎಂಬ ಕನಿಷ್ಠ ಜ್ಞಾನ ಅವರಿಗೆ ಇರಲಿಲ್ಲ. ವಾಮಮಾರ್ಗದ ಮೂಲಕ ಬಿಜೆಪಿಯವರು ಅಧಿಕಾರ ಪಡೆದುಕೊಂಡು ತಮಗೇನು ಗೊತ್ತಿಲ್ಲ ಎಂದು ಹೇಳುತ್ತಾರೆ. ಎಂತಹ ನಾಟಕ ಆಡುತ್ತಾರೆ ಎಂದು ಬಿಎಸ್‍ವೈ ಅವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.
Advertisement
Advertisement
ಮೊದಲು ಬಿಎಸ್‍ವೈ ಗುಡುಗಿದರೆ ವಿಧಾನಸೌಧದಲ್ಲಿ ನಡುಗುತ್ತಾರೆ ಎಂಬ ಮಾತು ಇತ್ತು. ಆದರೆ ಇಂದು ಬಿಎಸ್‍ವೈ ದೆಹಲಿಗೆ ತೆರಳಿದರೆ ಅವರೇ ನಡುಗುತ್ತಾರೆ. ರಾಜ್ಯದ ಸ್ಥಿತಿ ನೋಡಿದರೆ ಸಮರ್ಥರಿಗೆ ಆಡಳಿತ ನೀಡಬೇಕಾಗಿತ್ತು ಎಂಬ ಅಂಶ ತಿಳಿಯುತ್ತದೆ. 25 ಸಂಸದರಲ್ಲಿ ಒಬ್ಬರು ಗಂ…. ಇಲ್ಲ. ಮೋದಿ ಎದುರು ನಿಂತು ಮಾತನಾಡುವ ಧೈರ್ಯ ಯಾರಿಗೂ ಇಲ್ಲ ಎಂದು ಆಕ್ಷೇಪಾರ್ಹ ಪದಗಳನ್ನು ಎಸ್.ಆರ್.ಶ್ರೀನಿವಾಸ್ ಉಪಯೋಗಿಸಿದರು. ಅಲ್ಲದೇ ಪ್ರವಾಹ ಸಂತ್ರಸ್ತರಿಗೆ ಪರಿಹಾರ ತರುವ ಯೋಗ್ಯತೆ ಸಂಸದರಿಗೆ ಇಲ್ಲ ಎಂದು ಆರೋಪಿಸಿದರು.
Advertisement
ಯಾರು ಶಕ್ತಿವಂತರು, ಹೋರಾಟಗಾರರು ಇದ್ದಾರೆ ಎಂಬುವುದು ನಮ್ಮ ರಾಜ್ಯ ಸರ್ಕಾರವನ್ನು ನೋಡಿದರೆ ತಿಳಿಯುತ್ತದೆ. ಸಮರ್ಥರಿಗೆ ಆಡಳಿತ ನೀಡದಿದ್ದರೆ ಏನಾಗುತ್ತದೆ ಎಂಬುವುದು ಜನರಿಗೆ ಈಗ ಅರ್ಥವಾಗುತ್ತಿದೆ. ಆದರೆ ಇಂದಿಗೂ ದೇವೇಗೌಡ ಅವರು ಹೋರಾಟ ಮಾಡಿ ಪಕ್ಷ ಕಟ್ಟುವ ಕಾರ್ಯದಲ್ಲಿ ನಡೆಸುತ್ತಿದ್ದಾರೆ. ದೇವೇಗೌಡರಿಗೆ ಮತ ನೀಡುವ ಬದಲು ಕ್ಷೇತ್ರದಲ್ಲಿ ಭ್ರಷ್ಟಾಚಾರ ನಡೆಸುವವರಿಗೆ ಅಧಿಕಾರ ನೀಡಿದ್ದೀರಿ. ಕ್ಷೇತ್ರದಲ್ಲಿ ಗೆಲುವು ಪಡೆದಿರುವವರು ನನ್ನ ಮುಂದೆ ಬಂದು ನಿಂತು ಮಾತನಾಡಲಿ. ಅಪ್ಪ-ಮಕ್ಕಳು ಇಬ್ಬರು ಕಳ್ಳರು ಎಂದು ಹೇಳಿ ಸಂಸದ ಜಿ.ಎಸ್.ಬಸವರಾಜ್ ವಿರುದ್ಧವೂ ಏಕವಚನದಲ್ಲಿ ಆರೋಪ ಮಾಡಿದರು.
ಎಚ್‍ಡಿಡಿಯಿಂದ ಅಂತರ: ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋತ ಬಳಿಕ ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್, ಎಚ್‍ಡಿಡಿ ಅವರಿಂದ ಅಂತರ ಕಾಯ್ದುಕೊಂಡರಾ? ಎಂಬ ಪ್ರಶ್ನೆ ಇಂದಿನ ಸಭೆಯಲ್ಲಿ ಕಾರ್ಯಕರ್ತರನ್ನು ಕಾಡಿತ್ತು. ಸದಾ ಕ್ಷೇತ್ರದಲ್ಲಿ ನಡೆಯುವ ಸಭೆಗಳಲ್ಲಿ ಎಚ್‍ಡಿಡಿ ಪಕ್ಕದಲ್ಲೇ ಇರುತ್ತಿದ್ದ ಎಸ್.ಆರ್.ಶ್ರೀನಿವಾಸ್ ಅವರು ಇಂದು ದೂರ ದೂರ ಕಂಡು ಬಂದರು. ವೇದಿಕೆ ಮೇಲೂ ಎಚ್‍ಡಿಡಿ ಅವರಿಂದ ಅಂತರ ಕಾಯ್ದುಕೊಂಡರು. ಇದಕ್ಕೂ ಮುನ್ನ ಭೈರವಿ ಮಹಿಳಾ ಸಂಘದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲೂ ಎಚ್‍ಡಿಡಿ ಅವರಿಂದ ದೂರ ಉಳಿದ ಎಸ್.ಆರ್.ಶ್ರೀನಿವಾಸ್, ಶಂಕು ಸ್ಥಾಪನೆ ನಡೆಯುತ್ತಿದ್ದರೂ ತಮ್ಮ ಪಾಡಿಗೆ ತಾವು ಉಪಾಹಾರ ಸೇವಿಸುತ್ತಿದ್ದರು. ಇತ್ತೀಚೆಗಷ್ಟೇ ಶ್ರೀನಿವಾಸ್ ಅವರು, ಎಚ್‍ಡಿ ಕುಮಾರಸ್ವಾಮಿ ಅವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.