ಕೊಲ್ಲೂರು ದೇಗುಲದಿಂದ ಬರ್ತಿದ್ದ ಒಂದು ಹಿಡಿ ಅಕ್ಕಿಯನ್ನೂ ನಿಲ್ಲಿಸಿರಲಿಲ್ಲ, ಆದ್ರೂ ಪ್ರತಿಭಟಿಸಿದ್ರು: ರಮಾನಾಥ ರೈ

Public TV
2 Min Read
MANGALURU PROTEST 3

– ಬಿಜೆಪಿ ಸರ್ಕಾರ ಮಕ್ಕಳಿಗೆ ನೀಡಿದ್ದು ಪೊಟ್ಟು ಸೈಕಲ್

ಮಂಗಳೂರು: ಅಂದು ನಾವು ಮಕ್ಕಳಿಗೆ ಕೊಡುವ ಅನ್ನವನ್ನ ನಿಲ್ಲಿಸಿರಲಿಲ್ಲ. ದೇವಸ್ಥಾನದ ಹಣ ದುರುಪಯೋಗ ಆಗಬಾರದೆಂದು ತಡೆದಿದ್ವಿ. ನಾನು ಕೊಲ್ಲೂರು ದೇವಸ್ಥಾನ (Kolluru Temple) ದಿಂದ ಬರುತ್ತಿದ್ದ ಒಂದು ಹಿಡಿ ಅಕ್ಕಿಯನ್ನ ನಿಲ್ಲಿಸಿರಲಿಲ್ಲ. ಆದರೂ ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ರು ಎಂದು ಮಾಜಿ ಸಚಿವ ರಮಾನಾಥ ರೈ (Ramanatha Rai) ಯವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

MANGALURU PROTEST 2

ರಾಜ್ಯ ಸರ್ಕಾರದ ಪ್ರತಿಷ್ಠಿತ ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರದ ಅಸಹಕಾರ ವಿರೋಧಿಸಿ ನಗರದ ಕ್ಲಾಕ್ ಟಾವರ್ ಸರ್ಕಲ್‍ನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಪ್ರತಿಭಟನೆ ನಡೆಯುತ್ತಿದೆ. ಊಟದ ತಟ್ಟೆಗಳನ್ನು ಹಿಡಿದುಕೊಂಡು ತಟ್ಟೆ ಬಡಿಯುತ್ತಾ ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ನಾಯಕರು, ಅಕ್ಕಿ ಪೂರೈಕೆ ಮಾಡಲು ನಿರಾಕರಿಸಿದ ಕೇಂದ್ರ ಬಿಜೆಪಿ ಸರ್ಕಾರ (BJP Government) ಬಡವರಿಗೆ ದ್ರೋಹ ಮಾಡುತ್ತಿದೆ ಎಂದು ಆರೋಪ ಮಾಡಿದರು. ಇದನ್ನೂ ಓದಿ; ಸರ್ಕಾರದಿಂದ ಕಲ್ಲಡ್ಕ ಪ್ರಭಾಕರ್ ಭಟ್ ಶಾಲೆಗೆ ಬರುತ್ತಿದ್ದ ಅನುದಾನ ಕಟ್: ರಮಾನಾಥ ರೈ ಹೀಗಂದ್ರು!

ಈ ವೇಳೆ ಮಾತನಾಡಿದ ರಮಾನಾಥ ರೈ, ಈ ಹಿಂದೆ ನಾನು ಅಧಿಕಾರದಲ್ಲಿದ್ದಾಗ ಮಕ್ಕಳಿಗೆ ಕೊಡುವ ಅನ್ನ ನಿಲ್ಲಿಸಿದ್ದೇನೆಂದು ಬಿಜೆಪಿಯವರು ಪ್ರತಿಭಟಿಸಿದ್ದರು. ನನ್ನ ವಿರುದ್ಧ ಅನ್ನದ ಬಟ್ಟಲು ತಟ್ಟಿ ಪ್ರತಿಭಟಿಸಿದ್ರು. ಅಂದು ನಾವು ಮಕ್ಕಳಿಗೆ ಕೊಡುವ ಅನ್ನವನ್ನೂ ನಿಲ್ಲಿಸಿರಲಿಲ್ಲ. ದೇವಸ್ಥಾನದ ಹಣ ದುರುಪಯೋಗ ಆಗಬಾರದೆಂದು ತಡೆದಿದ್ದೆವು. ನಾನು ಕೊಲ್ಲೂರು ದೇವಸ್ಥಾನದಿಂದ ಬರುತ್ತಿದ್ದ ಒಂದು ಹಿಡಿ ಅಕ್ಕಿಯನ್ನ ಕೂಡ ನಿಲ್ಲಿಸಿರಲಿಲ್ಲ. ಆದರೂ ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ರು. ಈಗ ನಮ್ಮ ಸರ್ಕಾರದ ಅನ್ನ ಭಾಗ್ಯ ಯೋಜನೆಗೆ ವಿರೋಧ ಮಾಡಲಾಗಿದೆ. ಕೇಂದ್ರ ಸರ್ಕಾರ (Central Government) ಈ ಯೋಜನೆಯನ್ನ ತಡೆದು ಬಡವರಿಗೆ ದ್ರೋಹ ಮಾಡುತ್ತಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಿಸಿಯೂಟ, ಶರತ್ ಮಡಿವಾಳ ಹತ್ಯೆ ಕುರಿತ ಆರೋಪಕ್ಕೆ ರಮಾನಾಥ ರೈ ಬೇಸರ

MANGALURU PROTEST 1

ನಮಗೆ 2 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಬೇಕಾಗಿದೆ. ನಮ್ಮ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕೆಂದೆ ಈ ರೀತಿ ಮಾಡಲಾಗಿದೆ. ಯಡಿಯೂರಪ್ಪ ನೇತೃತ್ವದ ಸರ್ಕಾರ ಶಾಲಾ ಮಕ್ಕಳಿಗೆ ಸೈಕಲ್ ನೀಡಿತ್ತು. ಆದರೆ ಒಂದು ವರ್ಷದಲ್ಲಿ ಸೈಕಲ್ (Cycle) ಮೂಲೆ ಸೇರಿತ್ತು. ಬಿಜೆಪಿ ಸರ್ಕಾರ ಮಕ್ಕಳಿಗೆ ನೀಡಿದ್ದು ಪೊಟ್ಟು ಸೈಕಲ್. ಬಿಜೆಪಿ ನಾಯಕರು ನೀಡಿದ್ದ ಭರವಸೆಯನ್ನು ಈವರೆಗೆ ಈಡೇರಿಸಲು ಸಾಧ್ಯವಾಗಿಲ್ಲ. ಹೊರ ದೇಶದಲ್ಲಿರುವ ಕಪ್ಪು ಹಣವನ್ನು ಈವರೆಗೂ ತರಲು ಇವರಿಗೆ ಸಾಧ್ಯವಾಗಿಲ್ಲ. ಈ ಬಿಜೆಪಿ ನಾಯಕರು ಆತ್ಮಹತ್ಯೆ ಮಾಡಿಕೊಳ್ಳಬೇಕು. ಬಿಜೆಪಿ ನಾಯಕರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಸಿದ್ದರಾಮಯ್ಯ ಅಲ್ಲ ಸುಳ್ಳುರಾಮಯ್ಯ – ಸರ್ಕಾರದ ವಿರುದ್ಧ ಅಶೋಕ್‌ ಕಿಡಿ

Share This Article