Dakshina KannadaDistrictsKarnatakaLatestMain Post
ಪಕ್ಷಾಂತರ ಯಾವುದೇ ಪಕ್ಷಕ್ಕಾದರೂ ಮಾರಕ: ರಮಾನಾಥ ರೈ

ಮಂಗಳೂರು: ಪಕ್ಷ ನಿಷ್ಠೆ ಇಲ್ಲದಿದ್ದರಿಂದ ಕೆಲವರು ಪಕ್ಷಾಂತರ ಮಾಡುತ್ತಿದ್ದಾರೆ. ಪಕ್ಷಾಂತರ ಯಾವುದೇ ಪಕ್ಷಕ್ಕಾದರೂ ಅದು ಮಾರಕ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವರು, ಪಕ್ಷ ನಿಷ್ಠೆ ಇಲ್ಲದಿದ್ದರಿಂದ ಕೆಲವರು ಪಕ್ಷಾಂತರ ಮಾಡುತ್ತಿದ್ದಾರೆ. ಇವರು ಬೇರೆ ಪಕ್ಷಕ್ಕೆ ಹೋದರೂ, ನಿಷ್ಠೆಯಿಂದ ಇರುತ್ತಾರೆಂದು ಏನು ಗ್ಯಾರಂಟಿ ಇದೆ. ಅವರಿಗೆ ಯಾವುದೇ ಅಧಿಕಾರ, ಮಾನ್ಯತೆ, ಗೌರವ ಕೊಡಬಾರದು. ಪಕ್ಷಾಂತರ ಯಾವುದೇ ಪಕ್ಷಕ್ಕಾದರೂ ಮಾರಕ ಎಂದು ಪಕ್ಷಾಂತರ ಮಾಡುವವರ ವಿರುದ್ಧ ವಾಗ್ದಾಳಿ ನಡೆಸಿದರು.
ಇದೇ ವೇಳೆ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಕುರಿತು ಪ್ರತಿಕ್ರಿಯಿಸಿದ ಅವರು, ಬಹುಮತ ಇಲ್ಲದೆ ಮುಖ್ಯಮಂತ್ರಿ ಆದವರು ಅಂದರೆ ಅದು ಯಡಿಯೂರಪ್ಪ ಮಾತ್ರ. ಬಹುಮತ ಇಲ್ಲದಿದ್ದರೂ ಎರಡನೇ ಬಾರಿಗೆ ಸಿಎಂ ಆಗಿದ್ದಾರೆ. ಇದು ಆಪರೇಶನ್ ಕಮಲ ಅಲ್ಲ, ಕುದುರೆ ವ್ಯಾಪಾರದ ಆಪರೇಶನ್. ಇದಕ್ಕೆ ಆಪರೇಶನ್ ಕಮಲ ಎನ್ನುವ ಹೆಸರು ಹೇಳಲು ಇಚ್ಚಿಸಲ್ಲ ಎಂದರು.