ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (Karnataka Maharshi Valmiki Scheduled Tribe Development Corporation Ltd) ಹಗರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಾಜಿ ಮಂತ್ರಿ ನಾಗೇಂದ್ರ (Nagendra) ಆಪ್ತರು ತಮಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರಕರಣದ ಪ್ರಮುಖ ಆರೋಪಿ ಸತ್ಯನಾರಾಯಣ ವರ್ಮಾ (Satyanarayana Varma) ಕೋರ್ಟ್ ಸಾಕ್ಷಿಯಾಗಿ ಆರೋಪ ಮಾಡಿದ್ದಾರೆ.
ಇಂದು ಸತ್ಯನಾರಾಯಣ ವರ್ಮಾ ಸೇರಿ ಮೂವರು ಆರೋಪಿಗಳನ್ನು ಬೆಂಗಳೂರಿನ ಮೂರನೇ ಎಸಿಎಂಎಂ ಕೋರ್ಟ್ (ACMM Court) ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ತನಗೆ ಜೀವ ಬೆದರಿಕೆ ಇರುವುದಾಗಿ ಆರೋಪಿ ವರ್ಮಾ ಅಳಲು ತೋಡಿಕೊಂಡಿದ್ದಾರೆ.
ನಾನು ಅರೆಸ್ಟ್ ಆಗುವ ಮುನ್ನ ನಮ್ಮ ಮನೆಗೆ ನಾಗೇಂದ್ರ ಸಹಚರರು ಬಂದು ಇಡೀ ಕುಟುಂಬಕ್ಕೆ ಬೆದರಿಕೆ ಹಾಕಿದ್ದರು ಎಂದು ಸತ್ಯನಾರಾಯಣವರ್ಮಾ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಕಸ್ಟಡಿಯಲ್ಲಿದ್ದ ವೇಳೆ ನಾಗೇಂದ್ರ ಪಿಎ ಆಗಿದ್ದ ನೆಕ್ಕಂಟಿ ನಾಗರಾಜ್ ಆಪ್ತರು ತಮ್ಮ ಮೇಲೆ ಹಲ್ಲೆಗೆ ಯತ್ನಿಸಿದ್ದರು. ನ್ಯಾಯಾಲಯದಿಂದ ಕರೆದೊಯ್ಯುವ ಸಂದರ್ಭದಲ್ಲೂ ಹಲ್ಲೆಗೆ ಪ್ರಯತ್ನಿಸಿದ್ದರು ಎಂದು ಸತ್ಯನಾರಾಯಣ ವರ್ಮಾ ಆಪಾದಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಧೀಶರು, ಹಲ್ಲೆ ಯತ್ನದ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದರು. ಇದೇ ವೇಳೆ ನಾಗೇಂದ್ರ ಆಪ್ತಸಹಾಯಕನಾಗಿದ್ದ ನೆಕ್ಕಂಟಿ ನಾಗರಾಜನನ್ನು ಬಾಡಿವಾರೆಂಟ್ ಮೇಲೆ ನಾಲ್ಕು ದಿನ ಎಸ್‌ಐಟಿ ವಶಕ್ಕೆ ಪಡೆದಿದೆ. ಇದನ್ನೂ ಓದಿ: ಜನಾಂಗೀಯ ನಿಂದನೆ ಹೇಳಿಕೆ ನೀಡಿದ್ದ ಸ್ಯಾಮ್ ಪಿತ್ರೋಡಾ ಈಗ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ