– ತಲಕಾವೇರಿ ಜೀರ್ಣೋದ್ಧಾರಕ್ಕೆ 18 ಕೋಟಿ ಅನುದಾನ ಕೊಟ್ಟಿದ್ದ ಎಸ್‌ಎಂಕೆ!
ಮಡಿಕೇರಿ: ಎಸ್.ಎಂ ಕೃಷ್ಣ (SM Krishna) ದೇಶಕಂಡ ಅತ್ಯುತ್ತಮ ರಾಜಕಾರಣಿ ಅಂದ್ರೆ ತಪ್ಪಾಗಲ್ಲ. ತಾನು ಓದುವ ಸಂದರ್ಭದಲ್ಲೇ ಅವರ ಭಾಷಣ ಕೇಳಲು ವಿಧಾನ ಪರಿಷತ್‌ಗೆ ಹೋಗಿದ್ದೆ. ಅವರ ಮಾತಿನ ಸ್ಫೋರ್ತಿಯಿಂದಲೇ ನಾನು ರಾಜಕೀಯ ರಂಗ ಪ್ರವೇಶಿಸಿದೆ ಎಂದು ಮಾಜಿ ಸಚಿವ ಎಂ.ಸಿ ನಾಣಯ್ಯ (MC Nanaiah) ತಮ್ಮ ನೆನಪುಗಳನ್ನು ಹಂಚಿಕೊಂಡರು.
ʻಪಬ್ಲಿಕ್ ಟಿವಿʼಯೊಂದಿಗೆ ಮಾತನಾಡಿದ ಅವರು, ಎಸ್‌ಎಂಕೆ ನಿಧನಕ್ಕೆ ಸಂತಾಪ ಸೂಚಿಸಿದರು. ಪ್ರಜಾ ಸೋಷಿಯಲಿಸ್ಟ್ ಪಾರ್ಟಿ ಮೂಲಕ ರಾಜಕೀಯ ರಂಗ ಪ್ರವೇಶ ಮಾಡಿದರು. ನಾನು ಓದುವ ಸಂದರ್ಭದಲ್ಲೇ ಪರಿಷತ್‌ನಲ್ಲಿ ವಿಪಕ್ಷ ನಾಯಕರಾಗಿದ್ದರು. ಅತ್ಯಂತ ಸರಳವಾಗಿ ಅಳೆದು ತೂಗಿ ಮಾತಾನಾಡುವ ವ್ಯಕ್ತಿತ್ವ ಅವರದ್ದಾಗಿತ್ತು. ಅಂದಿನ ರಾಜಕೀಯ ದಿನಗಳ ಬಗ್ಗೆ ಮೆಲುಕು ಹಾಕುವ ಸಂದರ್ಭದಲ್ಲಿ ನಾನು ರಾಜ್ಯದ ಮುಖ್ಯಮಂತ್ರಿಗಳ ಬಗ್ಗೆ ʻನಾ ಕಂಡ ಮುಖ್ಯಮಂತ್ರಿಗಳುʼ ಎಂಬ ಪುಸ್ತಕ ಬರೆದಿದ್ದೆ. ಅದರಲ್ಲಿ ಎಸ್.ಎಂ ಕೃಷ್ಣ ಅವರ ಸಾಧನೆಗಳ ಬಗ್ಗೆ ಹಾಗೂ ನನ್ನೊಂದಿಗೆ ಇರುವ ನಿಕಟಪೂರ್ವ ಸಂಬಂಧಗಳ ಬಗ್ಗೆಯೂ ಉಲ್ಲೇಖ ಮಾಡಿದ್ದೇನೆ ಎಂದು ತಿಳಿಸಿದ್ರು.
ಎಸ್‌ಎಂಕೆ ಅವರು ಮುಖ್ಯಮಂತ್ರಿ ಆಗುವ ಸಂದರ್ಭದಲ್ಲಿ ನಾನು ವಿಪಕ್ಷ ನಾಯಕನಾಗಿ ಕೆಲಸ ಮಾಡಿದ್ದೆ. ಅಂದು ನಾನು ಸದನದಲ್ಲಿ ಕೃಷ್ಣ ಅವರಿಗೆ ನಿಮಗೆ ಪ್ರಧಾನಿಯಾಗುವ ಎಲ್ಲಾ ಲಕ್ಷಣ ಇದೆ ಎಂದು ಹೇಳಿದ್ದೆ. ಅದಕ್ಕೆ ಅವರು ಅಯ್ಯೋ ನಾಣಯ್ಯ ಅವ್ರೇ ಏನ್ ಹೇಳ್ತಾ ಇದ್ದೀರಿ, ರಾಜಕೀಯದಿಂದ ಬೇಗ ಕಳಿಸಿಕೋಡುವ ಆಸೆ ಏನಾದ್ರೂ ಇದೆಯೇ ಎಂದು ನಕ್ಕಿದ್ದರು ಎಂದು ತಮ್ಮ ಅನುಭವ ಹಂಚಿಕೊಂಡರು. ಇದನ್ನೂ ಓದಿ: ಭಾಗ-1 | ಶಾಸಕನಿಂದ ಮುಖ್ಯಮಂತ್ರಿವರೆಗೆ…. ಎಸ್‌ಎಂಕೆ ರಾಜಕೀಯ ಜೀವನದ ಏಳುಬೀಳು!
ತಲಕಾವೇರಿ ಜೀರ್ಣೋದ್ಧಾರಕ್ಕೆ ಎಸ್‌ಎಂಕೆ ಕೊಡಗೆ ಅಪಾರ:
ಇನ್ನೂ ʻಪಬ್ಲಿಕ್ ಟಿವಿʼ ಜೊತೆಗೆ ಮಾಜಿ ಸಚಿವೆ ಸುಮಾ ವಸಂತ್ ಮಾತನಾಡಿ, ದಕ್ಷಿಣ ಭಾರತದ ಪ್ರಮುಖ ನದಿ, ಕಾವೇರಿಯ ಉಗಮ ಸ್ಥಾನ, ತಲಕಾವೇರಿಯ (Tala Kaveri) ದೇವಾಲಯದ ಜೀರ್ಣೋದ್ಧಾರಕ್ಕೆ ಕೃಷ್ಣ ಅವರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು. ಇದನ್ನೂ ಓದಿ: ರಾಜ್‌ಕುಮಾರ್ ಕಿಡ್ನಾಪ್ ವೇಳೆ ಸ್ಯಾಟ್‌ಲೈಟ್ ಫೋನ್‌ನಿಂದ ವೀರಪ್ಪನ್ ಜೊತೆ ಮಾತನಾಡಿದ್ದ ಎಸ್‌ಎಂಕೆ
ಎಸ್‌ಎಂಕೆ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಕೊಡಗಿನ ಟಿ ಜಾನ್, ಎಂ.ಎಂ ನಾಣಯ್ಯ ಮತ್ತು ನನಗೆ ಸಚಿವ ಸ್ಥಾನ ನೀಡಿದ್ರು. ನಾನು ರಾಜಕೀಯವಾಗಿ ಬೆಳೆಯಲು ಅವರೇ ನೇರ ಕಾರಣ ತನ್ನಗೆ ಸಾಕಷ್ಟು ಧೈರ್ಯ ತುಂಬಿದ್ರು. ಕೊಡಗು ಜಿಲ್ಲೆಯ ಭಾಗಮಂಡಲ ಹಾಗೂ ತಲಕಾವೇರಿ ಜೀರ್ಣೋದ್ಧಾರ ಮಾಡಲು ಅವರು ಕೊಟ್ಟ ಕೊಡುಗೆ ಯಾವತ್ತೂ ಮರೆಯಲು ಸಾದ್ಯವಿಲ್ಲ. ನಾವು ಕೇಳಿದ ತಕ್ಷಣ ಅಂದಿನ ಕಾಲಘಟ್ಟಕ್ಕೆ ಸುಮಾರು 18 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ರು. ಆದ್ರೆ ಶಂಕುಸ್ಥಾಪನೆ ಮಾಡುವ ಸಂದರ್ಭದಲ್ಲಿ ಅವರ ಹೆಸರು ಹಾಕದೇ ಇರುವುದು ತುಂಬಾ ನೋವು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಕಲ್ಲಿನಲ್ಲಿ ಅವರ ಹೆಸರು ಕೆತ್ತನೆ ಮಾಡುವಂತೆ ಮವಿ ಮಾಡುತ್ತೇನೆ ಎಂದು ತಿಳಿಸಿದರು.