ರಾಯಚೂರು: ಶಾಸಕ ಎಸ್.ಟಿ ಸೋಮಶೇಖರ್ (ST Somashekahr) ಹಾಗೂ ಹೆಬ್ಬಾರ್ ತಾಳಿ ಒಂದು ಕಡೆ ಕಟ್ಟಿಸಿಕೊಂಡು ಸಂಸಾರ ಇನ್ನೊಬ್ಬರ ಜೊತೆ ಮಾಡಬಾರದು ಅಂತ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ (KS Eshwarappa) ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಅವರನ್ನ ಚುನವಾಣೆಯಲ್ಲಿ ನಿಲ್ಲಿಸಿ, ಗೆಲ್ಲಿಸಿ ಮಂತ್ರಿ ಮಾಡಾಯ್ತು, ಈಗ ಮತ್ತೆ ಗೆದ್ದಾಯ್ತು. ಈಗ ಸಿದ್ದರಾಮಯ್ಯ, ಡಿಕೆಶಿ ಕಡೆ ಒಲವಾಗಿದೆ. ಬಿಜೆಪಿ (BJP) ಅಲ್ಲಿ ಇಉವ ಹಾಗಿದ್ರೆ ಇರಿ, ಇಲ್ಲಾ ಹೋಗಿ. ತಾಳಿ ಒಬ್ಬರತ್ರ ಕಟ್ಟಿಸಿಕೊಂಡು ಸಂಸಾರ ಮತ್ತೊಬ್ಬರ ಜೊತೆ ಮಾಡಬಾರದು. ಅದು ನಮ್ಮ ಸಂಸ್ಕೃತಿ ಅಲ್ಲ. ಅವರಿಂದ ವೈಯಕ್ತಿಕವಾಗಿ ನೊಂದಿದ್ದೇನೆ ಅಂತ ಈಶ್ವರಪ್ಪ ಹೇಳಿದರು.
Advertisement
Advertisement
ಇದೇ ವೇಳೆ ಜ್ಞಾನವ್ಯಾಪಿಯ (Gyanavapi) ವೈಜ್ಞಾನಿಕ ಸಮೀಕ್ಷೆಗೆ ಮುಸಲ್ಮಾನ ಸಮುದಾಯ ಸಲ್ಲಿಸಿದ್ದ ಅರ್ಜಿ ವಜಾ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರಪ್ಪ, ಎರಡು ಕನಸು ಈಗ ಈಡೇರಿದೆ. ಅಯೋದ್ಯಯಲ್ಲಿ ರಾಮಮಂದಿರ, ಆರ್ಟಿಕಲ್ 370 ಕಿತ್ತು ಬೀಸಾಕಾಯ್ತು ಎಂದರು. ಇದನ್ನೂ ಓದಿ: ಅಶಿಸ್ತಿನ ವರ್ತನೆ, 49 ಸಂಸದರ ಅಮಾನತು – ಇಲ್ಲಿಯವರೆಗೆ 149 ಮಂದಿ ಸಸ್ಪೆಂಡ್
Advertisement
ಕಾಶಿ ವಿಶ್ವನಾಥನ ಸರ್ವೇಗೆ ರಿಪೋರ್ಟ್ ಬಂದಿತ್ತು. ಕಾಶಿ ವಿಶ್ವನಾಥ ದೇವಸ್ಥಾನ, ಮಥುರೈ ಶ್ರೀಕೃಷ್ಣನ ದೇವಸ್ಥಾನ ಒಡೆದು ಮಸೀದಿ ಕಟ್ಟಲಾಗಿದೆ ಎಂದಿದ್ದೆ. ಹೊಸ ಮಸೀದಿಗಳನ್ನ ಒಡೆಯಲ್ಲ, ಸ್ವಾತಂತ್ರ್ಯ ಬಂದ ಮೇಲೆ ಮುಸಲ್ಮಾನರು ಹೊಸ ಮಸೀದಿ ಕಟ್ಟಿಕೊಂಡು ನಮಾಜ್ ಮಾಡ್ತಿದ್ದಾರೆ ಅದಕ್ಕೆ ಗೌರವ ಕೊಡ್ತೇವೆ. ವಯಸ್ಸಿಗೆ ಬಂದ ಮಗು ಹೇಳುತ್ತೆ ಕೃಷ್ಣ ಹುಟ್ಟಿದ ಸ್ಥಳ ಯಾವುದು ಅಂದ್ರೆ ಮಥುರಾ ಅಂತ. ಕಾಶಿ ವಿಶ್ವನಾಥ ದೇವಸ್ಥಾನ ಹಿಂದೂಗಳದ್ದು ಅಂತಾರೆ. ರಾಮ ಹುಟ್ಟಿದ ಜಾಗ ಅಯೋಧ್ಯೆ ಅಂತಾರೆ. ಆದ್ರೆ ಕಾಂಗ್ರೆಸ್, ಸಿದ್ದರಾಮಯ್ಯಗೆ ಅರ್ಥ ಆಗಲ್ಲ. ರಾಮ ಅಯೋಧ್ಯೆಯಲ್ಲಿ ಹುಟ್ಟಿದ್ದಕ್ಕೆ ಸಾಕ್ಷಿ ಕೊಡಿ ಅಂತಾರೆ ಅಂತ ಈಶ್ವರಪ್ಪ ಅಸಮಾಧಾನ ಹೊರಹಾಕಿದರು.
Advertisement