ಚಿತ್ರದುರ್ಗ: ಇದೂವರೆಗೂ ಮೌನವಾಗಿದ್ದ ಗಣಿಧಣಿ, ಮಾಜಿ ಸಚಿವ ಜನಾರ್ದನರೆಡ್ಡಿ ಗೆಳೆಯ ಶ್ರೀರಾಮುಲು ಗೆಲುವಿಗಾಗಿ ರಣತಂತ್ರ ರೂಪಿಸಲು ಸಜ್ಜಾಗಿದ್ದು, ಮೊಳಕಾಲ್ಮೂರು ಕ್ಷೇತ್ರಕ್ಕೆ ಶಿಫ್ಟ್ ಆಗಲು ನಿರ್ಧರಿಸಿದ್ದಾರೆ.
ಹಾನಗಲ್ ಬಳಿಯ ತೋಟದ ಮನೆಯಲ್ಲಿ ಜನಾರ್ದನರೆಡ್ಡಿ ವಾಸ್ತವ್ಯಕ್ಕೆ ಸಕಲ ಸಿದ್ಧತೆ ನಡೆದಿದೆ. ನುಂಕಿಮಲೆ ಬೆಟ್ಟದ ರಸ್ತೆಯಲ್ಲಿರೋ ಎರಡು ಮಹಡಿಯ ಹವಾ ನಿಯಂತ್ರಿತ ತೋಟದ ಮನೆಗೆ ಸೋಮಶೇಖರ ರೆಡ್ಡಿಯವರಿಂದ ಕೇವಲ 101 ರೂ. ಬಾಡಿಗೆ ಪಡೆದಿರುವ ಡಾ.ವೆಂಕಟೇಶ್, ರಾಜಕೀಯ ವಲಯಕ್ಕೆ ಅಗತ್ಯವಿರುವಂತೆ ಮನೆಯ ಮುಂಭಾಗದಲ್ಲಿ ನೆರಳಿನ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಇದನ್ನೂ ಓದಿ: ಕುಚುಕು ಗೆಳೆಯನ ಪರವಾಗಿ ಪ್ರಚಾರಕ್ಕೆ ಬರ್ತಾರಂತೆ ಗಾಲಿ ಜರ್ನಾದನ ರೆಡ್ಡಿ
ಮೂರ್ನಾಲ್ಕು ದಿನದಲ್ಲಿ ತೋಟದ ಮನೆಗೆ ಜನಾರ್ದನರೆಡ್ಡಿ ಶಿಫ್ಟ್ ಆಗುವ ಸಾಧ್ಯತೆ ಇದೆ. ಜನಾರ್ದನರೆಡ್ಡಿ ಎಂಟ್ರಿಯಿಂದ ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಮೂಡಿಸಿದ್ದು, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನತ್ತ ಎಲ್ಲರ ಚಿತ್ತ ಸೆಳೆದಿದೆ. ಇದನ್ನೂ ಓದಿ: ಬಿಜೆಪಿಗೂ, ರೆಡ್ಡಿಗೂ ಸಂಬಂಧವಿಲ್ಲ ಅಂದ ಶಾ ಹೇಳಿಕೆಗೆ ಶ್ರೀರಾಮುಲು ಹೀಗಂದ್ರು