ಬಳ್ಳಾರಿ: ಗಾಲಿ ಜನಾರ್ದನ ರೆಡ್ಡಿ (Janardhan Reddy), ಹೊಸ ಪಕ್ಷ ಕಟ್ಟಿಕೊಂಡು, ಕಲ್ಯಾಣ ಕರ್ನಾಟಕದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಪ್ರವಾಸ ಮಾಡ್ತಿದ್ದಾರೆ. ಹೇಗಾದರೂ ಮಾಡಿಕೊಂಡು ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಿ ಮತ್ತೆ ತನ್ನದೇ ಸಾಮ್ರಾಜ್ಯ ಸ್ಥಾಪನೆಗೆ ಪ್ಲಾನ್‍ಗೆ ರೆಡಿಯಾಗುತ್ತಿದ್ದಾರೆ.
Advertisement
ಮಾಜಿ ಸಚಿವ, ಗಾಲಿ ಜನಾರ್ದನ ರೆಡ್ಡಿ ಹೇಳಿದ್ದನ್ನು ಮಾಡಿ ತೋರಿಸುವ ಜಾಯಮಾನದ ರಾಜಕಾರಣಿ. ಕಳೆದ ಡಿಸೆಂಬರ್ 25 ರಂದು ‘ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಎಂಬ ನೂತನ ಪಕ್ಷವನ್ನು ಸ್ಥಾಪನೆ ಮಾಡಿ, ಕಲ್ಯಾಣ ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷ ಕಟ್ಟಲು ಮುಂದಾಗಿದ್ದಾರೆ. ಹೌದು ಕಳೆದ ಹತ್ತು ವರ್ಷಗಳಿಂದ ಬಳ್ಳಾರಿ (Bellary) ಯಿಂದ ದೂರ ಇದ್ದ ಜನಾರ್ದನ ರೆಡ್ಡಿ, ಈಗ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭ ಮಾಡಿದ್ದಾರೆ. ಒಂದು ಕಡೆ ರೆಡ್ಡಿ ಹೊಸ ಪಕ್ಷ, ಬಿಜೆಪಿಗೆ ದೊಡ್ಡ ಮುಳುವಾಗಿದೆ. ಅದರಲ್ಲಿ ರೆಡ್ಡಿ ಪ್ರಾಬಲ್ಯ ಇರೋ ಬಳ್ಳಾರಿ, ಕೊಪ್ಪಳ ರಾಯಚೂರಿನಲ್ಲಿ ಜಿಲ್ಲೆಯಲ್ಲಿ ಬಿಜೆಪಿ (BJP) ರೆಡ್ಡಿ ಹೊಸ ಪಕ್ಷ ದೊಡ್ಡ ಸವಾಲಾಗಲಿದೆ. ಇದನ್ನೂ ಓದಿ: ಬಿಜೆಪಿಗೆ ಸೆಡ್ಡು ಹೊಡೆದು ಹೊಸ ಪಕ್ಷ ಸ್ಥಾಪಿಸಿದ ರೆಡ್ಡಿ
Advertisement
Advertisement
ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡಿದ ಬಳಿಕ ಬಳ್ಳಾರಿ ಬಿಜೆಪಿಯಲ್ಲಿ ಈ ಭಾರೀ ಸಂಚಲನ ಮೂಡಿದ್ದು, ದಿನದಿಂದ ದಿನಕ್ಕೆ ಬಿಜೆಪಿ ಪಕ್ಷಕ್ಕೆ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿ ರೆಡ್ಡಿ ಗ್ರಾಮೀಣ ಕ್ಷೇತ್ರದ ಮೇಲೆ ಕಣ್ಣು ಇಟ್ಟಿದ್ದು, ಬಿಜೆಪಿಯ ಸೆಕೆಂಡ್ ಲೈನ್ ಲೀಡರ್ ಗಳನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು, ಬಿಜೆಪಿ ಜೊತೆಗೆ ಆಪ್ತ ಸ್ನೇಹಿತ ಶ್ರೀರಾಮುಲು (Sriramulu) ಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಇದು ಬಿಜೆಪಿ ಜೊತೆಗೆ ಆಪ್ತ ಸ್ನೇಹಿತ ಶ್ರೀರಾಮುಲುಗೆ ನುಂಗಲಾರದ ತುತ್ತಾಗಿದೆ. ಇದನ್ನೂ ಓದಿ: ನಮ್ಮದು ರಾಷ್ಟ್ರೀಯ ಪಕ್ಷ, ಹೊಸ ಪಕ್ಷದಿಂದ ಯಾವುದೇ ಪರಿಣಾಮ ಬೀರಲ್ಲ: ರೆಡ್ಡಿಗೆ ಶ್ರೀರಾಮುಲು ಟಾಂಗ್
Advertisement
ಒಂದು ಕಾಲದ ಆಪ್ತ ಸ್ನೇಹಿತ ಶ್ರೀರಾಮುಲು ಈಗಾಗಲೇ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದಾರೆ. ಇತ್ತ ಕಾಂಗ್ರೆಸ್‍ನ ಹಾಲಿ ಶಾಸಕ ನಾಗೇಂದ್ರ ರೆಡ್ಡಿ ಪರಮ ಆಪ್ತ, ನಾಗೇಂದ್ರ ಕ್ಷೇತ್ರದಲ್ಲಿ ತನ್ನದೇ ವರ್ಚಸ್ಸು ಹೊಂದಿದ್ದಾರೆ. ಹೀಗಿರುವಾಗ ರೆಡ್ಡಿ ಬಿಜೆಪಿ ನಾಯಕರನ್ನು ತನ್ನ ಕಡೆಗೆ ಸೆಳೆಯುವ ಮೂಲಕ, ಬಿಜೆಪಿ ಜೊತೆಯಲ್ಲಿ ಆಪ್ತ ಸ್ನೇಹಿತ ರಾಮುಲುಗೆ ಚೆಕ್ ಮೇಟ್ ಇಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರನ್ನು ತಮ್ಮ ಪಕ್ಷಕ್ಕೆ ಸೆಳೆಯುವ ಮೂಲಕ ರಾಮುಲು ಸೋಲಿಸಲು ಮುಂದಾಗಿದ್ದಾರಾ ಎನ್ನುವ ಅನುಮಾನ ಮೂಡಿದೆ. ಇನ್ನು ಮೇಲ್ನೋಟಕ್ಕೆ ರೆಡ್ಡಿ ರಾಮುಲು ದೋಸ್ತಿಯಲ್ಲಿ ಬಿರುಕು ಮೂಡಿ ವರ್ಷಗಳೇ ಕಳೆದಿವೆ. ಹೀಗಾಗಿ ಸ್ನೇಹಿತನ ಸೋಲಿಸಲು ರೆಡ್ಡಿ ಮುಂದಾಗಿದ್ದಾರೆ ಎನ್ನುವ ಚರ್ಚೆ ಕ್ಷೇತ್ರದಲ್ಲಿ ಜೋರಾಗಿದೆ.
ಈ ಎಲ್ಲ ಬೆಳವಣಿಗೆ ನೋಡಿದ್ರೆ, ರೆಡ್ಡಿ ಅನುಭವಿಸಿದ ಆ ಹನ್ನೆರಡು ವರ್ಷಗಳ ವನವಾಸದ ಪ್ರತಿಕಾರಕ್ಕೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಕಟ್ಟಿ, ತಮ್ಮ ಎರಡನೇ ಇನ್ನಿಂಗ್ಸ್ ರೆಡ್ಡಿ ಆರಂಭ ಮಾಡಿದ್ರಾ ಎನ್ನುವ ಅನುಮಾನ ಜನರಲ್ಲಿ ಇದೆ. ಆದ್ರೆ ಇದಕ್ಕೆ ಕಾಲವೇ ಉತ್ತರ ಕೊಡಬೇಕು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k