ಪ್ರತಾಪ್ ಸಿಂಹ ಗಂಡೋ, ಹೆಣ್ಣೋ ಮೊದಲು ಚೆಕ್ ಮಾಡಬೇಕು: ಇಕ್ಬಾಲ್ ಅನ್ಸಾರಿ

Public TV
1 Min Read
SIMA ANSARI

ಕೊಪ್ಪಳ: ಸಂಸದ ಪ್ರತಾಪ್ ಸಿಂಹ ವಿರುದ್ಧ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಿಡಿಕಾರಿದ್ದಾರೆ. ಪ್ರತಾಪ್ ಸಿಂಹ ಗಂಡೋ, ಹೆಣ್ಣೋ ಮೊದಲು ಚೆಕ್ ಮಾಡಬೇಕು ಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಸಂಸದರು ಪ್ರಿಯಾಂಕಾ ಖರ್ಗೆ ವಿರುದ್ಧ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದರು. ಪ್ರತಾಪ್ ಸಿಂಹ ಸಂಸದ ಆಗೋದಕ್ಕೆ ಲಾಯಕ್ಕಿಲ್ಲ. ಪ್ರತಾಪ್ ಸಿಂಹ ಝೀರೋ ಟ್ಯಾಲೆಂಟ್. ಯಾವುದೋ ಗಾಳಿಯಲ್ಲಿ ಜನ ಆತನಿಗೆ ವೋಟ್ ಹಾಕಿದ್ದಾರೆ ಎಂದು ಗುಡುಗಿದರು.

pratap simha 3

ಪ್ರತಾಪ್ ಸಿಂಹ ಕೂಡಲೇ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಹೋರಾಟ ಮಾಡಲಾಗುವುದು. ಸಿಂಹ ಖರ್ಗೆ ವಿರುದ್ಧ ಅಷ್ಟೆ ಅಲ್ಲ, ಅನೇಕ ಕಾಂಗ್ರೆಸ್ ನಾಯಕರ ವಿರುದ್ಧ ಮಾತಾಡ್ತಾರೆ. ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಮುಖಂಡರೇ ಇದ್ದಾರೆ. ರಾಜ್ಯದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ದೊಡ್ಡ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು.

ತನಿಖಾ ಸಂಸ್ಥೆಯಿಂದ ಎಲ್ಲವನ್ನೂ ಮರೆಮಾಚೋ ಕೆಲಸ ಮಾಡ್ತಿದ್ದಾರೆ. ಜನರ ಬೇರೆಡೆ ಸೆಳೆಯೋದು ಬಿಜೆಪಿಯವರ ಕೆಲಸ. ಮೈನ್ ಆಗಿ ಬಿಟ್ ಕಾಯಿನ್ ಅಲ್ಲಿ ಇರೋದೇ ಬಿಜೆಪಿ ನಾಯಕರು ಎಂದು ಹೇಳಿದರು.

IQBAL ANSARI

ಪ್ರತಾಪ್ ಸಿಂಹ ಹೇಳಿದ್ದೇನು..?
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಸಂಸದರು, ಶೋಷಿತರ ಹೆಸರು ಹೇಳಿಕೊಂಡು ಮರಿ ಖರ್ಗೆ ಐಷಾರಾಮಿ ಜೀವನ ಮಾಡುತ್ತಿದ್ದಾರೆ. ಮರಿ ಖರ್ಗೆ ಬಾಯಲ್ಲಿ ಭ್ರಷ್ಟಾಚಾರದ ಮಾತು ಕೇಳಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಆಗುತ್ತಿದೆ. ರಾಜ್ಯ ಕಾಂಗ್ರೆಸ್‍ನವರೇ ದುಡ್ಡು ಕಳೆದುಕೊಂಡಿದ್ದಾರೆ. ಹೀಗಾಗಿ ಅವರು ಮಾತ್ರ ಮಾತನಾಡುತ್ತಿದ್ದಾರೆ. ನಮ್ಮ ಪಕ್ಷದವರೇ ಈ ಪ್ರಕರಣದಲ್ಲಿ ಇದ್ದಿದ್ದರೆ ಶ್ರೀಕಿಯನ್ನು ನಾವು ಯಾಕೆ ಬಂಧಿಸುತ್ತಿದ್ದೆವು ಎಂದು ಪ್ರಿಯಾಂಕಾ ಖರ್ಗೆಗೆ ತಿರುಗೇಟು ನೀಡಿದ್ದರು.

Share This Article