ಬೆಂಗಳೂರು: ಐಟಿ ದಾಳಿಗೆ ಒಳಗಾಗಿರೋ ಮಾಜಿ ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಅವರಿಗೆ ಹೊಸ ಕಂಟಕವೊಂದು ಶುರುವಾಗಿದೆ. ಡಿಕೆಶಿ ಅವ್ಯವಹಾರದ ಬೆನ್ನತ್ತಿರೋ ಐಟಿ ಅಧಿಕಾರಿಗಳಿಗೆ ದೆಹಲಿಯಲ್ಲಿರೋ ಪ್ಲ್ಯಾಟ್ ಒಂದು ಹೊಸ ಅಸ್ತ್ರವಾಗಿ ದೊರೆತಿದೆ.
ಹೌದು. ದೆಹಲಿಯಲ್ಲಿ ಡಿಕೆಶಿ ಆಪ್ತರು 4 ಫ್ಲ್ಯಾಟ್ ಖರೀದಿ ಮಾಡಿದ್ದಂತೆ. ಹೈಕಮಾಂಡ್‍ನ ಪ್ರಭಾವಿಗಳು, ಅಧಿಕಾರಿಗಳನ್ನು ಖುಷಿ ಪಡಿಸೋಕೆ ಪ್ರತಿಷ್ಠಿತ ಸಪ್ದರ್‍ಜಂಗ್ ರಸ್ತೆಯಲ್ಲಿ ಡಿಕೆಶಿ ಆಪ್ತರ ಐಷಾರಾಮಿ ಫ್ಲ್ಯಾಟ್ ಗಳನ್ನು ಖರೀದಿಸಿದ್ದಾರೆ. ಆ ಫ್ಲ್ಯಾಟ್‍ಗೆ ಬರೋ ವಿವಿಐಪಿ ಅತಿಥಿಗಳಿಗೆ ಸ್ವರ್ಗವೇ ನಾಚುವಂತ ಆತಿಥ್ಯ, ಮನರಂಜನೆ ಸಿಗುತ್ತಿತ್ತಂತೆ. ತಮ್ಮ ಆಪ್ತರನ್ನು ಡಿಕೆಶಿ ಆ ಫ್ಲ್ಯಾಟ್‍ಗೆ ಕಳಿಸ್ತಿದ್ರಂತೆ. ಮನರಂಜನೆಗಾಗಿಯೇ ಫ್ಲ್ಯಾಟ್ ಖರೀದಿ ಮಾಡಲಾಗಿದೆ ಅಂತ ಐಟಿ ದಾಖಲಿಸಿರೋ ದೂರಲ್ಲಿ ಉಲ್ಲೇಖವಾಗಿದೆ. ಇದನ್ನೂ ಓದಿ: ಡಿಕೆಶಿ ವಿಚಾರವಾಗಿ ಹೇಗೆ ನಡೆದುಕೊಳ್ಳಬೇಕು – ಎಚ್‍ಡಿಕೆ, ರೇವಣ್ಣಗೆ ದೇವೇಗೌಡರ ಕ್ಲಾಸ್!
Advertisement
Advertisement
ಆದ್ರೆ ಅಲ್ಲಿ ಯಾವ ರೀತಿಯ ಮನರಂಜನೆ ಸಿಗ್ತಾ ಇತ್ತು ಅನ್ನೋ ಐಟಿ ಅಧಿಕಾರಿಗಳ ಪ್ರಶ್ನೆಗೆ ಡಿಕೆಶಿ ಅವರು ಇದೂವರೆಗೂ ಉತ್ತರ ಕೊಟ್ಟಿಲ್ಲ. ಐಟಿ ಇಲಾಖೆಯವರು ನಾನಾ ರೀತಿಯ ಪ್ರಶ್ನೆಗಳನ್ನು ಡಿಕೆಶಿ ಮುಂದೆ ಇಟ್ಟಿದ್ದರು. ಆದ್ರೆ ಇದ್ಯಾವುದಕ್ಕೂ ಡಿಕೆಶಿ ಹಾಗೂ ಅವರ ಆಪ್ತರು ಸ್ಪಷ್ಟ ಉತ್ತರ ನೀಡಿಲ್ಲ. ಇದನ್ನೂ ಓದಿ: ಹೆದರಿಸಿದರೆ ಡಿಕೆಶಿ ಹೆದರಲ್ಲ, ನನ್ನ ಹತ್ರನೂ ಕೆಲವರ ಡೈರಿಗಳಿವೆ : ಡಿಕೆ ಶಿವಕುಮಾರ್
Advertisement
ದೆಹಲಿಯಲ್ಲಿ ಡಿಕೆಶಿ ಅವರ 4 ಪ್ಲ್ಯಾಟ್ ಗಳಿದ್ದು, ಅದರಲ್ಲಿ ಎರಡನ್ನು ಕೇವಲ ಹಣ ಇಡಲು ಬಳಸಿಕೊಳ್ಳಲಾಗಿತ್ತು ಅನ್ನೋ ಮಾಹಿತಿ ಲಭಿಸಿದೆ. ಇದರಲ್ಲಿ ಒಂದು ಆಪ್ತರದ್ದಾದ್ರೆ, ಇನ್ನೊಂದು ಡಿಕೆಶಿಯವರದ್ದಾಗಿತ್ತು ಎಂಬುದಾಗಿ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ. ಇದನ್ನೂ ಓದಿ: ಹವಾಲ ವ್ಯವಹಾರದಲ್ಲಿ ಡಿಕೆ ಶಿವಕುಮಾರ್ ಭಾಗಿ?