ನೆಲಮಂಗಲ: ಮುಂಬರುವ ವಿಧಾನ ಸಭೆಯ ಸಾರ್ವತ್ರಿಕ ಚುನಾವಣೆಗೆ ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಲಾಬಿ ಶುರುವಾದಂತೆ ಅಭ್ಯರ್ಥಿಗಳು ಚಿಂತೆಗೀಡಾಗಿದ್ದಾರೆ. ಇಂದು ಬೆಂಗಳೂರು ಹೊರವಲಯ ನೆಲಮಂಗಲ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಅಂಜನಮೂರ್ತಿ ತಮ್ಮ ಮಾತನ್ನ ವ್ಯಕ್ತಪಡಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಮಾತನಾಡಿ ನೋಡು ಗುರು ಟಿಕೆಟ್ ಕೊಡ್ತೀನಿ, ಗೆದ್ದು ಬಂದು ಮಿನಿಸ್ಟರ್ ಆಗು ಅಂತ ಆರು ತಿಂಗಳ ಹಿಂದೆ ಅಭಿಮಾನದ ಮಾತುಗಳನ್ನ ಹೇಳಿದ್ದಾರೆ. ಈ ಮಾತನ್ನ ಸಿದ್ದರಾಮಯ್ಯನವರು ಜೊತೆಗೆ ಹೇಳಬೇಕು. ಸಿದ್ದರಾಮಯ್ಯ ನಮ್ಮ ನಾಯಕರು, ಇಬ್ಬರು ಜೋಡೆತ್ತು ಹೋದಂಗೆ ಹೋಗಬೇಕಿದೆ. ಪಕ್ಷ ಮುನ್ನಡೆಯೋಕೆ ಹೀನಾಗಿ ನಾನು ಮುಂದಿನ ಚುನಾವಣೆಗೆ ಆಕಾಂಕ್ಷಿಯಾಗಿರುವುದಾಗಿ ತಿಳಿಸಿದ್ದಾರೆ.
Advertisement
Advertisement
ನಮ್ಮ ಪಕ್ಷ ಸಮುದ್ರ ಇದ್ದಂಗೆ. ಬಿಎಂಎಲ್ ಕಾಂತರಾಜು ಬರೋದ್ರಿಂದ ಪಕ್ಷಕ್ಕೆ ಬಲ ಬರುತ್ತೆ ನಮ್ಮ ಪಕ್ಷಕ್ಕೆ ಯಾರು ಬಂದ್ರು ನಾವು ಸ್ವಾಗತ ಕೋರುತ್ತೇನೆ. ಆಂಜನಮೂರ್ತಿ ಇತಿಹಾಸದಲ್ಲಿ ಬಂಡಾಯ ಇಲ್ಲ ನನಗೆ ಪಕ್ಷ ಎಲ್ಲವನ್ನೂ ಕೊಟ್ಟಿದ್ದು, ನನಗೆ ಬಂಡಾಯದ ಅವಶ್ಯಕತೆ ಇಲ್ಲ ನನ್ನ ಕಾರ್ಯಕರ್ತ ಒತ್ತಾಯದ ಮೇರೆಗೆ ನಾಮಪತ್ರ ಸಲ್ಲಿಸಿದ್ದೆ. ನಂತರ ಪಕ್ಷ ಮುಖ್ಯ ಅಂತ ನಾಮಪತ್ರ ವಾಪಸ್ ತೆಗೆದುಕೊಂಡೆ ಎಂದರು.
Advertisement
ಪಕ್ಷದ ತೀರ್ಮಾನವೇ ಅಂತಿಮ, ನಾನು ಪಕ್ಷ ಬಿಡೋ ಮಾತೇ ಇಲ್ಲ. ತಾಲೂಕಿನ ಜನ ನನ್ನ ಕೈ ಬಿಡೋದಿಲ್ಲ. ನನ್ನ ಜನರ ಮೇಲೆ ನನಗೆ ನಂಬಿಕೆ ಇದೆ. ಇಲ್ಲಿಯೇ ಹುಟ್ಟಿದ ಜನರಿಗೆ ಅವಕಾಶ ಕೊಡಿ, ನೆರೆಯವರಿಗೆ ಅವಕಾಶ ಕೊಡಬೇಡಿ. ಕಳೆದ ಬಾರಿ ನಂಬಿಕೆಗೆ ದ್ರೋಹ ಆಗಿತ್ತು, ಈಗ ನನಗೆ ಹೈಕಮಾಂಡ್ ಮೇಲೆ ವಿಶ್ವಾಸವಿದೆ ಎಂದಿದ್ದಾರೆ. ಇದನ್ನೂ ಓದಿ: ಈ ಪೂಜಾರಿಯ ಪಾದ ಸ್ಪರ್ಶ ಮಾಡಿದರೆ ಇಷ್ಟಾರ್ಥ ಸಿದ್ಧಿ – ಅರಸೀಕೆರೆಯಲ್ಲಿ ವಿಶಿಷ್ಟ ಆಚರಣೆ
Advertisement
ಅಲ್ಲದೆ ಮುಂದಿನ ವಾರ ಮೇಕೆದಾಟು ಯೋಜನೆ ವಿಚಾರದ ಪಾದಯಾತ್ರೆಯಲ್ಲಿ ನೆಲಮಂಗಲ ತಾಲೂಕಿನ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.