ಅಸ್ಸಾಂ ಯುವತಿ ಫೋಟೋ ಮಾರ್ಫ್ – ಸೆಕ್ಸ್‌ ಚಿತ್ರೋದ್ಯಮಕ್ಕೆ ಎಂಟ್ರಿಯಾಗಿರೋದಾಗಿ ಪ್ರಚಾರ ಮಾಡ್ತಿದ್ದ ಭಗ್ನ ಪ್ರೇಮಿ ಅರೆಸ್ಟ್‌

Public TV
3 Min Read
Assam Babydoll Archi

– ಸೇಡು ತೀರಿಸಿಕೊಳ್ಳಲು ಶುರು ಮಾಡಿದ್ದ ʻಬೇಬಿ ಡಾಲ್‌ ಆರ್ಚಿʼಯಿಂದಲೇ 10 ಲಕ್ಷ ದುಡಿದ
– ಸೇಡಿಗೆ ಎಐ ಬಳಸಿ ಫೋಟೋದಿಂದ ವೀಡಿಯೋ ಮಾಡ್ತಿದ್ದ ಮೆಕ್ಯಾನಿಕಲ್ ಎಂಜಿನಿಯರ್

ಗುವಾಹಟಿ: ಒಂದು ವಾರದ ಹಿಂದಷ್ಟೇ ಅಮೆರಿಕದ ನೀಲಿ ಚಿತ್ರೋದ್ಯಮಕ್ಕೆ ಅಸ್ಸಾಂ ಮೂಲದ ಯುವತಿ ಅರ್ಚಿತಾ ಫುಕನ್ (Archita Phukan) ಕಾಲಿಟ್ಟಿದ್ದಾರೆ ಎಂಬ ವಿಚಾರ ವ್ಯಾಪಕ ಸದ್ದು ಮಾಡಿತ್ತು. ಆದರೀಗ ಈ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಅಸಲಿಗೆ ಅಂತಹ ವೈರಲ್‌ ಆಗಿದ್ದ ಫೋಟೋನಲ್ಲಿ ಇದ್ದದ್ದು ಆ ಯುವತಿಯೇ ಇಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ..

ಹೌದು.. ಈ ಹಿಂದೆ ಅಸ್ಸಾಂ ಮೂಲದ ಅರ್ಚಿತಾ ಫುಕನ್ ಅಮೆರಿಕದ ಸೆಕ್ಸ್‌ ಚಿತ್ರೋಧ್ಯಮಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ ಇಂಬು ನೀಡುವಂತೆ ಅರ್ಚಿತಾ ಅಮೆರಿಕದ ನೀಲಿ ಚಿತ್ರತಾರೆ ಕೇಂದ್ರ ಲಸ್ಟ್ (Kendra Lust) ಜೊತೆ ಇರುವ ಫೋಟೋ ಕೂಡ ವೈರಲ್ ಆಗಿತ್ತು. ಆದ್ರೆ ಇದು ನಿಜವಾಗಿಯೂ ಆಕೆಯ ಫೋಟೋ ಆಗಿರಲಿಲ್ಲ. ಆಕೆಯಿಂದ ಪದೇ ಪದೇ ತೀರಸ್ಕಾರಕ್ಕೆ ಒಳಗಾಗಿದ್ದ ಭಗ್ನಪ್ರೇಮಿ ಸೇಡು ತೀರಿಸಿಕೊಳ್ಳಲು AI ಬಳಸಿ ಫೋಟೋದಿಂದ ವೀಡಿಯೋ ಮಾಡ್ತಿದ್ದ ಅನ್ನೋ ರಹಸ್ಯ ಬಹಿರಂಗವಾಗಿದೆ.

Kendra Lust

ಆಕೆಯಿಂದ ತಿರಸ್ಕಾರಗೊಂಡಿದ್ದ ಭಗ್ನಪ್ರೇಮಿ ಅಸ್ಸಾಂನ ಮೆಕ್ಯಾನಿಕಲ್ ಎಂಜಿನಿಯರ್ ಪ್ರತಿಮ್ ಬೋರಾ ಬೇಬಿ ಡಾಲ್‌ ಅರ್ಚಿ ವಿರುದ್ಧ ಸೇಡು ತೀರಿಸಿಕೊಳ್ಳಲು ಈ ಕೃತ್ಯ ಎಸಗಿದ್ದಾನೆ. ತನಗೆ ಕೈಕೊಟ್ಟ ಕೋಪದಿಂದ ಆಕೆಯನ್ನ ನೀಲಿ ಚಿತ್ರತಾರೆ ಎನ್ನುವಂತೆ ಬಿಂಬಿಸಿದ್ದ. AI ಬಳಿಸಿಕೊಂಡು ಫೋಟೋದಿಂದ ವಿಡಿಯೋ ಮಾಡಿದ್ದ ಬೋರಾ, ತನ್ನ ಪ್ರಿಯತಮೆಯನ್ನೇ ಹೋಲುವ ಚಿತ್ರಗಳನ್ನು ಅಶ್ಲೀಲವಾಗಿ ಚಿತ್ರಿಸಿ ಸಾಮಾಜಿಕ ಜಾಲತಾಣಗಳಲ್ಲಿ ʻಬೇಬಿಡಾಲ್ ಆರ್ಚಿʼ ಎಂಬ ಹೆಸರಿನಲ್ಲಿ ಅಪ್ಲೋಡ್ ಮಾಡುತ್ತಿದ್ದ. ಇದರಿಂದ ಸುಮಾರು 10 ಲಕ್ಷ ರೂ. ದುಡಿದಿರುವುದಾಗಿಯೂ ತಿಳಿದುಬಂದಿದೆ.

ಆಗಸ್ಟ್ 2020 ರಲ್ಲಿ ʻಬೇಬಿ ಡಾಲ್‌ ಆರ್ಚಿʼ ಹೆಸರಿನಲ್ಲಿ ಕ್ರಿಯೇಟ್‌ ಮಾಡಿದ್ದ ಸೋಷಿಯಲ್‌ ಮೀಡಿಯಾ ಖಾತೆಯು ಜುಲೈ 14ರ ಹೊತ್ತಿಗೆ 13 ಲಕ್ಷ ಫಾಲೋವರ್ಸ್‌ಗಳನ್ನ ಗಳಿಸಿತ್ತು.‌ ಈ ಮಧ್ಯೆ 2 ಬಾರಿ ಖಾತೆ ಹೆಸರನ್ನ ಬದಲಾವಣೆ ಕೂಡ ಮಾಡಿದ್ದ. ಸದ್ಯ ಆರೋಪಿಯನ್ನ ಬಂಧಿಸಿರುವ ಪೊಲೀಸರು, ಆತನಿಂದ ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳು, ಹಾರ್ಡ್ ಡಿಸ್ಕ್ ಮತ್ತು ಇತರ ಡಿಜಿಟಲ್‌ ಸಾಧನಗಳನ್ನ ವಶಪಡಿಸಿಕೊಂಡಿದ್ದಾರೆ. ಡಿಜಿಟಲ್ ಸಾಕ್ಷ್ಯಗಳನ್ನು ಪರಿಶೀಲನೆ ಮಾಡಬೇಕಿರುವುದರಿಂದ ಬಹು ಸಂಸ್ಥೈಗಳು ಈ ತನಿಖೆಯಲ್ಲಿ ಭಾಗಿಯಾಗಲಿವೆ.

Assam Babydoll Archi 3

ರಹಸ್ಯ ಭೇದಿಸಿದ್ದು ಹೇಗೆ?
ತನ್ನ ಹೆಸರಿನಲ್ಲಿ ಬೇರಾವುದೋ ಯುವತಿಯ ಫೋಟೋ ಅಪ್ಲೋಡ್ ಆಗುತ್ತಿರುವದರ ಕುರಿತು ಅರ್ಚಿತಾ ಎಂಬ ಯುವತಿ ಈ ಹಿಂದೆ ಅಸ್ಸಾಂನ ದಿಬ್ರುಗಢ ಪೊಲೀಸ್ ಠಾಣೆಯಲ್ಲಿ ಮಾನನಷ್ಟ ಮೊಕ್ಕದ್ದಮೆ ದಾಖಲಿಸಿದ್ದಳು. ಈ ದೂರಿನ ವಿಚಾರಣೆ ನಡೆಸಿದ ಪೊಲೀಸರು ಅರ್ಚಿತಾ ಫುಕನ್ ಸಾಮಾಜಿಕ ಜಾಲತಾಣದ ಕುರಿತು ತನಿಖೆ ನಡೆಸಿದಾಗ ಆಕೆಯ ಮಾಜಿ ಪ್ರಿಯಮತನ ಕುಕೃತ್ಯ ಬಯಲಾಗಿದೆ. ಯುವತಿಯಿಂದ ಬೇರ್ಪಟ್ಟ ಬಳಿಕ ಮಾಜಿ ಪ್ರಿಯತಮ ಆಕೆಯನ್ನೇ ಹೋಲುವ ಎಐ ಯುವತಿಯನ್ನು ರಚಿಸಿ ಅದರ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆದ್ರೆ ಒಂದು ವಾರದ ಹಿಂದೆ ನೀಲಿ ತಾರೆ ಕೇಂದ್ರ ಲಸ್ಟ್‌ ಜೊತೆಗೆ ಆರ್ಚಿ ಅವರು ಇರುವ ಫೋಟೋವನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿತ್ತು. ಆ ನಂತರವೇ ಈ ಸುದ್ದು ವ್ಯಾಪಕ ಸದ್ದು ಮಾಡತೊಡಗಿತು. ಇದು 82,000 ಇದ್ದ ಫಾಲೋರ್ಸ್‌ಗಳ ಸಂಖ್ಯೆಯನ್ನ 12 ಲಕ್ಷದ ವರೆಗೆ ಹೆಚ್ಚಾಗುವಂತೆ ಮಾಡಿತು. ಪ್ರಸ್ತುತ ಆರೋಪಿ ಪ್ರತಿಮ್ ಬೋರಾ ವಿರುದ್ಧ ಅಸ್ಸಾಂ ಪೊಲೀಸರು ಸೈಬರ್ ಕಿರುಕುಳ, ಮಾನನಷ್ಟ ಮತ್ತು ಗೌಪ್ಯತೆಯ ಉಲ್ಲಂಘನೆ ಸೇರಿದಂತೆ ಭಾರತೀಯ ದಂಡ ಸಂಹಿತೆ ಮತ್ತು ಐಟಿ ಕಾಯ್ದೆಯ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

Assam Babydoll Archi 2

ಸೇಡಿಗಾಗಿ ಶುರು ಮಾಡಿದ್ದ ಖಾತೆಯಿಂದ್ಲೇ 10 ಲಕ್ಷ ದುಡಿದ
ಇನ್ನೂ ಅಚ್ಚರಿ ಅಂದ್ರೆ ಬೋರಾ ತನ್ನ ಮಾಜಿ ಪ್ರಿಯತಮೆಗೆ ಕಿರುಕುಳ ನೀಡಲು ಆರಂಭಿಸಿದ್ದ BaBy Doll Archi ಖಾತೆಯಿಂದ 10 ಲಕ್ಷ ರೂ. ಹಣವನ್ನೂ ಕೂಡ ಸಂಪಾದನೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಆರಂಭದಲ್ಲಿ ಕಿರುಕುಳ ತಂತ್ರವಾಗಿ ಪ್ರಾರಂಭವಾದ ಈ ಖಾತೆಯನ್ನು ಆರೋಪಿ ಪ್ರತಿಮ್ ಬೋರಾ ಹಣಗಳಿಸಲು ಪ್ರಾರಂಭಿಸಿದಾಗ ಮುಂದುವರೆಸಿದ್ದ. ಅವನು ಪೋಸ್ಟ್ ಮಾಡಿದ ವಯಸ್ಕರ ಕಟೆಂಟ್ ಗೆ ಚಂದಾದಾರಿಕೆ ಲಿಂಕ್ ಇತ್ತು. ಜನರು ಅದನ್ನು ಪ್ರವೇಶಿಸಲು ಪಾವತಿಸಬೇಕಾಗಿತ್ತು. ಅವನು ಅದರ ಮೂಲಕ ಸುಮಾರು 10 ಲಕ್ಷ ರೂ.ಗಳನ್ನು ಗಳಿಸಿದ್ದ. ಅವನು ದುರಾಸೆಯಿಂದ ಈ ಕೃತ್ಯವನ್ನು ಮುಂದುವರಿಸಿದ್ದ ಎಂದು ತಿಳಿದುಬಂದಿದೆ.

Kendra Lust 2

ಅರ್ಚಿತಾ ಕಟೆಂಟ್ ಶೇರ್ ಮಾಡಬೇಡಿ
ಇದೇ ವೇಳೆ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಅರ್ಚಿತಾ ಫುಕನ್ ಕುರಿತ ಪೋಸ್ಟ್ ಗಳನ್ನು ಆನ್‌ಲೈನ್‌ನಲ್ಲಿ ಫಾರ್ವರ್ಡ್ ಮಾಡುವುದು, ಹಂಚಿಕೊಳ್ಳುವುದು ಅಥವಾ ತೊಡಗಿಸಿಕೊಳ್ಳುವುದರ ವಿರುದ್ಧ ಸಾರ್ವಜನಿಕರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಇನ್ನು ಈ ಪ್ರಕರಣ ಬಹಿರಂಗ ಮಾಡಿದ ಪೊಲೀಸರಿಗೆ ಯುವತಿ ಅರ್ಚಿತಾ ಧನ್ಯವಾದ ಹೇಳಿದ್ದಾರೆ.

Share This Article