Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Court

ನ್ಯಾ. ವರ್ಮಾ ವಿರುದ್ಧದ ಕೇಸ್‌ ತನಿಖಾ ಸಮಿತಿಗೆ ಉತ್ತರ ಕನ್ನಡದ ಗಣಪತಿ ಭಟ್‌ ನೇಮಕ

Public TV
Last updated: September 7, 2025 6:43 pm
Public TV
Share
2 Min Read
Yashwant Varma Ganapati Bhat
SHARE

– ಲೋಕಸಭಾ ತನಿಖಾ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿ ಭಟ್ ನಿಯುಕ್ತಿ

ಕಾರವಾರ/ನವದೆಹಲಿ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ (Om Birla) ಅವರು, ನಿವೃತ್ತ ಐಆರ್‌ಎಸ್‌ ಅಧಿಕಾರಿ ಗಣಪತಿ ಭಟ್ (Ganapati Bhat) ಅವರನ್ನು, ನ್ಯಾಯಮೂರ್ತಿ ಯಶವಂತ ವರ್ಮಾ (Yashwant Varma) ಅವರ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ರಚಿಸಲಾದ ಮೂವರು ಸದಸ್ಯರ ತನಿಖಾ ಸಮಿತಿಗೆ ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದಾರೆ. ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.

ಈ ಸಮಿತಿಯ ಸದಸ್ಯರಾಗಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅರವಿಂದ್ ಕುಮಾರ್, ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಮನೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ಹಿರಿಯ ವಕೀಲ ಬಿ.ವಿ.ಆಚಾರ್ಯ ನಿಯುಕ್ತಿಯಾಗಿದ್ದಾರೆ. ಇದನ್ನೂ ಓದಿ: ನ್ಯಾ. ವರ್ಮಾ ನಡೆ ವಿಶ್ವಾಸ ಮೂಡಿಸುವುದಿಲ್ಲ; ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

Yashwant Varma cash row

1989ನೇ ಬ್ಯಾಚ್‌ನ (ಆದಾಯ ತೆರಿಗೆ) ಐಆರ್‌ಎಸ್‌ ಅಧಿಕಾರಿಯಾಗಿದ್ದ ಗಣಪತಿ ಭಟ್‌ ಇತ್ತೀಚೆಗೆ ಬೆಂಗಳೂರು ಕಚೇರಿ ಹೊಂದಿದ್ದ ಕರ್ನಾಟಕ ಮತ್ತು ಗೋವಾ ಪ್ರಾದೇಶಿಕ ಆದಾಯ ತೆರಿಗೆ ಇಲಾಖೆಯ ಪ್ರಧಾನ ಮುಖ್ಯ ಆಯುಕ್ತ ಸ್ಥಾನದಿಂದ ನಿವೃತ್ತರಾಗಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯಲ್ಲಿ ಅಂತಾರಾಷ್ಟ್ರೀಯ ತೆರಿಗೆ ವಿಭಾಗದ ಪ್ರಧಾನ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಆದಾಯ ತೆರಿಗೆ ಇಲಾಖೆಯ ಮೂರು ದಶಕಗಳಿಗಿಂತ ಹೆಚ್ಚಿನ ವೃತ್ತಿಜೀವನದಲ್ಲಿ ಅವರು ಹಲವಾರು ಪ್ರಮುಖ ಮತ್ತು ಸೂಕ್ಷ್ಮ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಸಂಕೀರ್ಣ ತನಿಖೆಗಳು ಹಾಗೂ ನೀತಿ ವಿಷಯಗಳಲ್ಲಿನ ಪರಿಣತಿಗೆ ಪ್ರಸಿದ್ಧರಾಗಿದ್ದಾರೆ. ಇಲಾಖೆಯಲ್ಲಿ ಕೆಲಸ ಮಾಡುವ ಅವಧಿಯಲ್ಲಿ ಮತ್ತು ಇತ್ತೀಚೆಗೆ ಕರ್ನಾಟಕ–ಗೋವಾ ಮತ್ತು ಕೇರಳದ ಆದಾಯ ತೆರಿಗೆ ತನಿಖಾ ಮಹಾನಿರ್ದೇಶಕರಾಗಿದ್ದಾಗ, ಅವರು ಅನೇಕ ರೋಚಕ ಪ್ರಕರಣಗಳಲ್ಲಿ ಆದಾಯ ತೆರಿಗೆ ತನಿಖೆಗಳನ್ನು ನಡೆಸಿ ಶೋಧ ಮತ್ತು ವಶಪಡಿಸಿಕೊಳ್ಳುವ ಕಾರ್ಯಾಚರಣೆಗೆ ಕಾರಣರಾಗಿದ್ದರು. ಭಾರತೀಯ ಪ್ರಜೆಗಳು ಹೊಂದಿರುವ ಗಡಿಯಾಚೆಗಿನ ಹಣಕಾಸು ವ್ಯವಹಾರಗಳು, ಸಾಗರೋತ್ತರ ಆಸ್ತಿಗಳು ಮತ್ತು ವಿದೇಶಿ ಬ್ಯಾಂಕ್ ಖಾತೆಗಳ ಕುರಿತು ಮಾಹಿತಿ ಸಂಗ್ರಹಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಅವರ ವೃತ್ತಿಪರ ಕಾರ್ಯವು ಕಾನೂನಿನ ಸೂಕ್ಷ್ಮದೃಷ್ಟಿ, ತನಿಖಾ ಕೌಶಲ್ಯ ಮತ್ತು ನೀತಿ ಒಳನೋಟಗಳ ಅಪರೂಪದ ಸಮ್ಮಿಶ್ರಣದ ನಿದರ್ಶನವಾಗಿದೆ.

ಗಣಪತಿ ಭಟ್ ಅವರು ಭಾರತ ಸರ್ಕಾರದ ಅನೇಕ ಇಲಾಖೆಗಳಲ್ಲೂ ನಿಯೋಜನೆಯ ಮೇಲೆ ಕಾರ್ಯನಿರ್ವಹಿಸಿದ್ದು, ವಿಶೇಷವಾಗಿ ಲೋಕಸಭೆಯ ಹೆಚ್ಚುವರಿ ಕಾರ್ಯದರ್ಶಿಯಾಗಿ ಹಲವಾರು ಸಂಸದೀಯ ಸಮಿತಿಗಳನ್ನು ಅವುಗಳ ಕಾರ್ಯದರ್ಶಿಯಾಗಿ ನಿರ್ವಹಿಸಿದ್ದರು. ಅವರು ಅಕಾಡೆಮಿಕ್ ಮತ್ತು ನೀತಿ ಚರ್ಚೆಗಳಿಗೆ ಸಹ ಕೊಡುಗೆ ನೀಡಿದ್ದಾರೆ. Tax Policy and FDI ಎಂಬ ಪುಸ್ತಕದ ಲೇಖಕರಾಗಿರುವ ಅವರು ಪ್ರಸ್ತುತ ಭಾರತೀಯ ಪ್ರಜಾಪ್ರಭುತ್ವದ ಸಂದರ್ಭದಲ್ಲಿ ಅಧಿಕಾರಗಳ ವಿಂಗಡಣೆ ಕುರಿತಂತೆ ಸಂಶೋಧನೆ ನಡೆಸುತ್ತಿದ್ದಾರೆ. ಅವರ ಬೌದ್ಧಿಕ ಆಸಕ್ತಿಗಳು ಆರ್ಥಿಕಶಾಸ್ತ್ರ ಮತ್ತು ತೆರಿಗೆ ವಿಷಯಗಳನ್ನೂ ಮೀರಿದೆ. ಸಂಸ್ಕೃತ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವುದರ ಜೊತೆಗೆ ಸಮಕಾಲೀನ ಸಾಮಾಜಿಕ–ರಾಜಕೀಯ ವಿಷಯಗಳ ತೀಕ್ಷ್ಣ ವೀಕ್ಷಕರಾಗಿದ್ದಾರೆ. ಇದನ್ನೂ ಓದಿ: ಕಂತೆ ಕಂತೆ ಹಣ ಕೇಸ್ – ನ್ಯಾ.ಯಶವಂತ್ ವರ್ಮಾ ಅರ್ಜಿ ವಜಾ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಬಿದ್ರೆಪಾಲ ಗ್ರಾಮದಲ್ಲಿ ಜನಿಸಿದ ಗಣಪತಿ ಭಟ್, ಧಾರವಾಡದಲ್ಲಿ ಬಿ.ಎ., ಪುಣೆಯಲ್ಲಿ ಎಂ.ಎ. ಮಾಡಿ, 2010ರಲ್ಲಿ ಆರ್ಥಿಕಶಾಸ್ತ್ರದಲ್ಲಿ ಪಿಹೆಚ್.ಡಿ ಪೂರೈಸಿದ್ದಾರೆ. ಅಲ್ಲದೇ, ದೆಹಲಿ ವಿಶ್ವವಿದ್ಯಾಲಯದಿಂದ ಎಲ್.ಎಲ್.ಬಿ. ಪದವಿಯನ್ನೂ ಪಡೆದಿದ್ದಾರೆ.

TAGGED:Ganapati BhatJustice Yashwant VarmaYashwant Varma Cashಗಣಪತಿ ಭಟ್ಯಶವಂತ್‌ ವರ್ಮಾ
Share This Article
Facebook Whatsapp Whatsapp Telegram

Latest Cinema News

Navya Nair
ಮಲ್ಲಿಗೆ ಮುಡಿದ ನಟಿ ನವ್ಯಾಗೆ ಆಸ್ಟ್ರೇಲಿಯಾದಲ್ಲಿ 1 ಲಕ್ಷ ದಂಡ
Cinema Latest South cinema Top Stories
Pushpa 3
`ಪುಷ್ಪ 3 ಬರೋದು ಪಕ್ಕಾ’..ಅಲ್ಲು ಅರ್ಜುನ್‌ ಗುಡ್ ನ್ಯೂಸ್ ಕೊಟ್ಟಿದ್ದೆಲ್ಲಿ?
Cinema Latest South cinema Top Stories
Bhuvan Ponnanna
ಭುವನ್ ಪೊನ್ನಣ್ಣ ರೀ ಎಂಟ್ರಿಗೆ ಯೋಗರಾಜ್ ಭಟ್ ಸಾಥ್
Cinema Latest Sandalwood Top Stories Uncategorized
Prem
ಶ್ರೀಧರ್ ಸಂಭ್ರಮ್ ಸಂಗೀತದ `ಲೈಫ್ ಟು ಡೇ’ ಹಾಡಿಗೆ ಜೋಗಿ ಪ್ರೇಮ್ ಕಂಠದಾನ
Cinema Latest Sandalwood Top Stories
bhavana ramanna IVF
ನಟಿ ಭಾವನಾ ರಾಮಣ್ಣ ಮಗು ನಿಧನ
Bengaluru City Cinema Latest Main Post Sandalwood

You Might Also Like

Stone pelting during Ganesha procession in Madduru Mandya
Districts

ಗಣೇಶ ವಿಸರ್ಜನೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ – ಮದ್ದೂರು ಉದ್ವಿಗ್ನ

Public TV
By Public TV
14 minutes ago
flight
Latest

ವಿಮಾನಕ್ಕೆ ಬಿಳಿ ಬಣ್ಣ ಹಚ್ಚೋದ್ಯಾಕೆ?

Public TV
By Public TV
51 minutes ago
daily horoscope dina bhavishya
Astrology

ದಿನ ಭವಿಷ್ಯ 08-09-2025

Public TV
By Public TV
57 minutes ago
Temple
Bagalkot

ಚಂದ್ರ ಗ್ರಹಣ ವೇಳೆ ದೇವರಿಗೆ ಜಲಾಭಿಷೇಕ – ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ

Public TV
By Public TV
6 hours ago
Dharwad
Bengaluru City

Blood Moon Photo Gallery | ಬಾನಂಗಳದಲ್ಲಿ ಖಗೋಳ ಕೌತುಕ – ರಾಜ್ಯದಲ್ಲಿ ಎಲ್ಲೆಲ್ಲಿ ರಕ್ತಚಂದ್ರನ ದರ್ಶನ?

Public TV
By Public TV
7 hours ago
Bengaluru Moon
Bengaluru City

ನಭೋ ಮಂಡಲದಲ್ಲಿ ಖಗೋಳ ಕೌತುಕ – ಆಗಸದಲ್ಲಿ ರಕ್ತರೂಪಿ ಚಂದ್ರನ ದರ್ಶನ

Public TV
By Public TV
7 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?