ಮುಂಬೈ: ಸಲ್ಮಾನ್ ಖಾನ್ (Salman Khan) ಮತ್ತು ಪೂಜಾ ಹೆಗ್ಡೆ (Pooja Hegde) ನಟನೆಯ ಬಹುನಿರೀಕ್ಷಿತ ಸಿನಿಮಾ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಚಿತ್ರದ ‘ಯೆಂಟಮ್ಮಾ’ ಸಾಂಗ್ (Yentamma Song) ರಿಲೀಸ್ ಆಗಿ ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದೆ. ಸಲ್ಮಾನ್ ಖಾನ್ ಜೊತೆ ರಾಮ್ ಚರಣ್, ದಗ್ಗುಬಾಟಿ ವೆಂಕಟೇಶ್ ಜಬರ್ದಸ್ತ್ ಆಗಿ ಡ್ಯಾನ್ಸ್ ಮಾಡಿ ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ.
Advertisement
ಈ ನಡುವೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್ (Laxman Sivaramakrishnan), ಸಲ್ಮಾನ್ ಖಾನ್ ಡಾನ್ಸ್ ತುಂಬಾ ಅಸಹ್ಯಕರವಾಗಿದೆ, ದಕ್ಷಿಣ ಭಾರತದ ಸಂಸ್ಕೃತಿಯನ್ನ ಅವಮಾನಿಸುವಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Advertisement
ಸಲ್ಲು ಡಾನ್ಸ್ ಅತ್ಯಂತ ಹಾಸ್ಯಾಸ್ಪದವಾಗಿದೆ. ಸಲ್ಮಾನ್ ಖಾನ್ ಧರಿಸಿರೋದು ಲುಂಗಿ ಅಲ್ಲ, ಧೋತಿ. ಸಾಂಪ್ರದಾಯಿಕ ಉಡುಪನ್ನ ಅಸಹ್ಯಕರವಾಗಿ ತೋರಿಸಿ, ನಮ್ಮ ದಕ್ಷಿಣ ಭಾರತದ ಸಂಸ್ಕೃತಿಯನ್ನ ಇದು ಅವಮಾನಿಸಲಾಗಿದೆ ಎಂದು ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಹನಟನ ಹುಟ್ಟು ಹಬ್ಬಕ್ಕೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ ರಶ್ಮಿಕಾ ಮಂದಣ್ಣ
Advertisement
Advertisement
ಸಲ್ಮಾನ್ ಖಾನ್ ನಟನೆ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿರುವ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ (Kisi Ka Bhai Kisi Ki Jaan) ಸಿನಿಮಾ ಸಾಂಗ್ ರಿಲೀಸ್ ಆಗಿದೆ. ಸಲ್ಮಾನ್ ಚಿತ್ರಕ್ಕೆ ಗೆಸ್ಟ್ ಅಪಿಯರೆನ್ಸ್ ಕೊಟ್ಟಿರುವ ರಾಮ್ ಚರಣ್ – ವೆಂಕಟೇಶ್ ಮಸ್ತ್ ಆಗಿ ಕುಣಿದು ಕುಪ್ಪಳಿಸಿದ್ದಾರೆ. ಪೂಜಾ ಹೆಗ್ಡೆ ಕೂಡ ನಾನೇನು ಕಮ್ಮಿ ಅಂತಾ ಭರ್ಜರಿಯಾಗಿ ಯೆಂಟಮ್ಮಾ ಸಾಂಗ್ಗೆ ಸ್ಟೆಪ್ ಹಾಕಿದ್ದಾರೆ.
ಪಾಯಲ್ ದೇವ್ ಸಂಗೀತ ನಿರ್ದೇಶನ ಮಾಡಿರುವ ಈ ಹಾಡಿನಲ್ಲಿ ಹಿಂದಿ ಮತ್ತು ತೆಲುಗು ಮಿಶ್ರಿತ ಸಾಹಿತ್ಯ ಇದೆ. ಇದು ಅಭಿಮಾನಿಗಳಿಗೆ ಹೊಸ ಕಿಕ್ ನೀಡುತ್ತಿದೆ. ಇದನ್ನೂ ಓದಿ: ಸುದೀಪ್ ಗೆ ‘ಬಾಸ್’ ಎಂದ ಸಿಎಂ ಬೊಮ್ಮಾಯಿ : ವಿಡಿಯೋ ವೈರಲ್