ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ (Money Laundering Case) ಸಂಬಂಧಿಸಿದಂತೆ ಮಹಾರಾಷ್ಟ್ರದ (Maharashtra) ಮಾಜಿ ಗೃಹ ಸಚಿವ ಹಾಗೂ ಎನ್‌ಸಿಪಿ (NCP) ನಾಯಕ ಅನಿಲ್ ದೇಶ್‌ಮುಖ್ (Anil Deshmukh) ಅವರಿಗೆ ಬಾಂಬೆ ಹೈಕೋರ್ಟ್ (Bombay High Court) ಮಂಗಳವಾರ ಜಾಮೀನು (Bail) ಮಂಜೂರು ಮಾಡಿದೆ.
ಜಾಮೀನು ಅಕ್ಟೋಬರ್ 13 ರಂದು ಜಾರಿಗೆ ಬರಲಿದೆ ಎಂದು ಹೈಕೋರ್ಟ್ ಹೇಳಿದೆ. 1 ಲಕ್ಷ ರೂ. ಶ್ಯೂರಿಟಿ ಮತ್ತು ಇಡಿ ಸಮನ್ಸ್ ಜಾರಿ ಮಾಡಿದಾಗ ವಿಚಾರಣೆಗೆ ಹಾಜರಾಗುವಂತೆ ಷರತ್ತು ವಿಧಿಸಲಾಗಿದೆ.
Advertisement
Advertisement
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ದೇಶ್‌ಮುಖ್ ಅವರ ಜಾಮೀನು ಅರ್ಜಿಯನ್ನು ವಿಶೇಷ ನ್ಯಾಯಾಲಯ ಈ ವರ್ಷದ ಆರಂಭದಲ್ಲಿ ತಿರಸ್ಕರಿಸಿತ್ತು. ಆ ಸಂದರ್ಭ ಅಕ್ರಮ ಹಣ ವರ್ಗಾವಣೆಯಲ್ಲಿ ದೇಶ್‌ಮುಖ್ ಭಾಗಿಯಾಗಿರುವ ಬಗ್ಗೆ ಪ್ರಾಥಮಿಕವಾಗಿ ಪುರಾವೆಗಳಿವೆ ಎಂದು ಇಡಿ ವಾದಿಸಿತ್ತು. ಇದನ್ನೂ ಓದಿ: PFI ಮೊಬೈಲ್ ರಿಟ್ರೀವ್ – ಹತ್ಯೆಯಾದವರು, ಹತ್ಯೆ ಮಾಡಿದವರ ವಿವರಕ್ಕೆ ಬಳಕೆಯಾಗ್ತಿತ್ತು ಒಂದು ವಿಶೇಷ ಆ್ಯಪ್
Advertisement
Advertisement
ಮಹಾರಾಷ್ಟ್ರದ ಗೃಹ ಸಚಿವರಾಗಿದ್ದಾಗ ತಮ್ಮ ಅಧಿಕಾರವನ್ನು ವೈಯಕ್ತಿಕ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬುದು ದೇಶ್‌ಮುಖ್ ವಿರುದ್ಧದ ಆರೋಪವಾಗಿದೆ. 4.7 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಇಡಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದನ್ನೂ ಓದಿ: ರಷ್ಯಾ ಈಗ ಭಾರತದ 2ನೇ ಅತಿ ದೊಡ್ಡ ತೈಲ ಪೂರೈಕೆದಾರ