ಚಂಡೀಗಢ: ಹರಿಯಾಣದ (Haryana) ಮಾಜಿ ಸಚಿವ ಮಂಗೇ ರಾಮ್ ರಾಠಿ (Mange Ram Rathi) ಅವರ ಪುತ್ರ ಜಗದೀಶ್ ರಾಠಿ (Jagdish Rathi) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಎನ್ಎಲ್ಡಿ ರಾಜ್ಯ ಮುಖ್ಯಸ್ಥ ನಫೆ ಸಿಂಗ್ ರಾಠಿ ಸೇರಿದಂತೆ ಆರು ಜನರ ವಿರುದ್ಧ ಕುಮ್ಮಕ್ಕು ನೀಡಿದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಗದೀಶ್ (55) ಬುಧವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. “ಮಾಜಿ ಸಚಿವ ಮಂಗೇ ರಾಮ್ ರಾಠಿ ಅವರ ಪುತ್ರ ಜಗದೀಶ್ ರಾಠಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದಾರೆ ಎಂದು ಆರು ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ” ಎಂದು ಜಜ್ಜರ್ನ ಪೊಲೀಸ್ ವರಿಷ್ಠಾಧಿಕಾರಿ ವಸೀಮ್ ಅಕ್ರಂ ಹೇಳಿದ್ದಾರೆ. ಇದನ್ನೂ ಓದಿ: BJP ನೀತಿಗಳಿಂದ ಭಾರತದಲ್ಲೂ ತಾಲಿಬಾನ್ನಂಥ ಭಯಾನಕ ಪರಿಸ್ಥಿತಿ ಎದುರಾಗುತ್ತೆ: KCR
Advertisement
Advertisement
ಜಗದೀಶ್ ವಿಷ ಸೇವಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಆದರೆ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಎಸ್ಪಿ ಅಕ್ರಮ ಪ್ರತಿಕ್ರಿಯಿಸಿದ್ದಾರೆ.
Advertisement
ಕೆಲವು ಆರೋಪಿಗಳು ಆಸ್ತಿ ವಿಚಾರದಲ್ಲಿ ಜಗದೀಶ್ಗೆ ಕಿರುಕುಳ ನೀಡುತ್ತಿದ್ದರು ಎಂದು ಸಂತ್ರಸ್ತನ ಕುಟುಂಬದವರು ಆರೋಪಿಸಿದ್ದಾರೆ. ಇದರಿಂದಾಗಿ ಜಗದೀಶ್ ತೀವ್ರ ಒತ್ತಡಕ್ಕೆ ಒಳಗಾಗಿದ್ದರು. ಅವರು ಇತ್ತೀಚೆಗೆ ಆಡಿಯೋ ಕ್ಲಿಪ್ ಕೂಡ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಇಡೀ ಜೋಶಿಮಠ ಮುಳುಗುವ ಎಚ್ಚರಿಕೆ ನೀಡಿದ ಇಸ್ರೋ – ಆತಂಕ ಮೂಡಿಸುತ್ತಿದೆ ಉಪಗ್ರಹ ಚಿತ್ರ
Advertisement
ಡಿಸೆಂಬರ್ 26 ರಂದು ಜಗದೀಶ್ ಆಡಿಯೋ ಕ್ಲಿಪ್ ಅನ್ನು ಪ್ರಸಾರ ಮಾಡಿದ್ದರು. ಅದರಲ್ಲಿ ಕೆಲವರು ನನಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಏನಾದರೂ ಸಂಭವಿಸಿದರೆ ಅವರೇ ಹೊಣೆಯಾಗುತ್ತಾರೆ ಎಂದು ಆರೋಪಿಸಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k