LatestMain PostNational

‘ಹರ್ ಘರ್ ತಿರಂಗ’ ರ‍್ಯಾಲಿ ವೇಳೆ ಮಾಜಿ ಸಿಎಂ ನಿತಿನ್ ಪಟೇಲ್‍ಗೆ ತಿವಿದ ಹಸು

ಗಾಂಧೀನಗರ: ‘ಹರ್ ಘರ್ ತಿರಂಗ’ ಯಾತ್ರೆಯ ರ‍್ಯಾಲಿ ವೇಳೆ ಗುಜರಾತ್‍ನ ಮಾಜಿ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಅವರ ಮೇಲೆ ರಸ್ತೆಯಲ್ಲಿ ಬಿಡಾಡುತ್ತಿದ್ದ ಹಸುಗಳು ದಾಳಿ ನಡೆಸಿರುವ ಘಟನೆ ಮೆಹ್ಸಾನಾ ಜಿಲ್ಲೆಯ ಕಡಿ ಪ್ರದೇಶದಲ್ಲಿ ನಡೆದಿದೆ.

ಕಡಿಯಲ್ಲಿ ನಡೆದ ತ್ರಿವರ್ಣ ಧ್ವಜಾರೋಹಣದ ವೇಳೆ ಈ ಘಟನೆ ನಡೆದಿದೆ. ಕಾರನ್‍ಪುರ ತರಕಾರಿ ಮಾರುಕಟ್ಟೆಯಲ್ಲಿ ಓಡಾಡುತ್ತಿದ್ದ ಹಸು ನಿತಿನ್ ಪಟೇಲ್ ಅವರಿಗೆ ತಿವಿದಿದೆ. ಇದರಿಂದಾಗಿ ನಿತಿನ್ ಪಟೇಲ್ ಅವರ ಕಾಲಿಗೆ ಗಾಯವಾಗಿದ್ದು, ನಂತರ ಅವರನ್ನು ಸ್ಥಳೀಯರ ನೆರವಿನಿಂದ ತಕ್ಷಣ ಭಾಗ್ಯೋದಯ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಯಿತು. ಇದನ್ನೂ ಓದಿ: ಎಣ್ಣೆ ಏಟಲ್ಲಿ ರೆಸ್ಟೋರೆಂಟ್‍ನಲ್ಲಿ ರಂಪಾಟ – ಗಗನಸಖಿ ಸೇರಿ ಮೂವರು ಅರೆಸ್ಟ್

ಚಿಕಿತ್ಸೆ ನಂತರ ನಿತಿನ್ ಪಟೇಲ್ ಅವರು ಅಹಮದಾಬಾದ್‍ನಲ್ಲಿರುವ ತಮ್ಮ ನಿವಾಸಕ್ಕೆ ತೆರಳಲಿದ್ದಾರೆ. ಇದೀಗ ನಿತಿನ್ ಪಟೇಲ್ ಅವರು ವೀಲ್ ಚೇರ್ ಮೇಲೆ ಕುಳಿತುಕೊಂಡಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಜೈಲಿನ ಕೈದಿಗೆ ಚಿಕನ್ ಪೀಸ್‍ನಲ್ಲಿ ಗಾಂಜಾ ಸಾಗಾಟ- ಪೊಲೀಸರಿಂದ ಜಪ್ತಿ

Live Tv

Leave a Reply

Your email address will not be published. Required fields are marked *

Back to top button