ಬಾಲಿವುಡ್ ಹೆಸರಾಂತ ನಟ ಹೃತಿಕ್ ರೋಷನ್ (Hrithik Roshan) ಮತ್ತು ನಟಿ ಕಂಗನಾ ರಣಾವತ್ (Kangana Ranaut) ಡೇಟಿಂಗ್ ವಿಚಾರ ಗುಟ್ಟಾಗೇನೂ ಉಳಿದಿರಲಿಲ್ಲ. ಇಬ್ಬರೂ ಪರಸ್ಪರ ಅರ್ಥ ಮಾಡಿಕೊಂಡು ಡೇಟಿಂಗ್ ಮಾಡುತ್ತಿದ್ದಾರೆ ಎಂಬೆಲ್ಲ ಸುದ್ದಿ ಬಿಟೌನ್ ನಲ್ಲಿ ಕೇಳಿ ಬಂದಿತ್ತು. ಇಬ್ಬರೂ ಹೊಸ ಬದುಕು ಕಟ್ಟಿಕೊಳ್ಳಲಿದ್ದಾರೆ ಎನ್ನುವಲ್ಲಿಗೆ ಅವರ ಫ್ರೆಂಡ್ ಶಿಪ್ ವಿಸ್ತರಿಸಿತ್ತು. ಆದರೆ, ಈ ಜೋಡಿ ಅದನ್ನು ಮುಂದುವರೆಸಲಿಲ್ಲ. ಬ್ರೇಕ್ ಅಪ್ ಎಂದು ಹೇಳುವ ಮೂಲಕ ದೂರ ದೂರವಾದರು.
Advertisement
ಇಬ್ಬರೂ ದೂರವಾದ ನಂತರ ಕಂಗನಾ ಸುಮ್ಮನೆ ಕೂರಲಿಲ್ಲ. ಹೃತಿಕ್ ಬಗ್ಗೆ ಪರೋಕ್ಷ ಮತ್ತು ಪ್ರತ್ಯೆಕ್ಷವಾಗಿಯೇ ಹಲವು ಆರೋಪಗಳನ್ನು ಮಾಡಿದರು. ಹೃತಿಕ್ ಬಗ್ಗೆ ಸಲ್ಲದ ಮಾತುಗಳನ್ನೂ ಆಡಿದರು. ಹೀಗಾಗಿ ಫ್ರೆಂಡ್ ಶಿಪ್ ಶಾಶ್ವತವಾಗಿ ಮುರಿದು ಬಿತ್ತು. ಹಲವು ದಿನಗಳ ನಂತರ ಮತ್ತೆ ಹೃತಿಕ್ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಅವರು ಟಾಂಗ್ ನೀಡುವಂತೆ ಉತ್ತರಿಸಿದ್ದಾರೆ. ಇದನ್ನೂ ಓದಿ: 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್
Advertisement
Advertisement
ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಅಭಿಮಾನಿಗಳ ಜೊತೆ ಸಂವಾದಿಸುತ್ತಲೇ ಇರುತ್ತಾರೆ ಕಂಗನಾ. ಅಭಿಮಾನಿಗಳು ಕೇಳಿದ ಪ್ರಶ್ನೆಗೆ ತಮ್ಮದೇ ಆದ ರೀತಿಯಲ್ಲಿ ಅವರು ಉತ್ತರಿಸುತ್ತಾರೆ. ಈ ಬಾರಿ ಅಭಿಮಾನಿಯೊಬ್ಬ ಕೇಳಿದ್ದ ಪ್ರಶ್ನೆಗೆ ವಿಚಿತ್ರ ಹಾಗೂ ವಿವಾದ (Controversy) ಎನ್ನುವ ರೀತಿಯಲ್ಲಿ ಅವರು ಉತ್ತರಿಸಿದ್ದಾರೆ. ಈ ಉತ್ತರ ಹೃತಿಕ್ ಅಭಿಮಾನಿಗಳನ್ನು ಕೆಣಕಿದೆ.
Advertisement
ಅಭಿಮಾನಿಯೊಬ್ಬರು ‘ನಿಮಗೆ ಹೃತಿಕ್ ರೋಷನ್ ಮತ್ತು ದಿಲ್ಜಿತ್ ದೋಸಾಂಜ್ ಇವರಿಬ್ಬರಲ್ಲಿ ಯಾರು ಇಷ್ಟ, ಯಾರು ಉತ್ತಮ ನಟ’ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ವಿಭಿನ್ನವಾದ ರೀತಿಯಲ್ಲಿ ಉತ್ತರಿಸಿರುವ ಕಂಗನಾ, ‘ಒಬ್ಬರೇ ಕೇವಲ ಆ್ಯಕ್ಷನ್ ಮಾಡ್ತಾರೆ, ಮತ್ತೊಬ್ಬರು ವಿಡಿಯೋ ಸಾಂಗ್ ನಲ್ಲೇ ಕಳೆದು ಹೋಗಿದ್ದಾರೆ. ಇವರಲ್ಲಿ ಒಬ್ಬರನ್ನು ನಾನು ನಟಿಸಿದ್ದೇನೆ ನೋಡಿಲ್ಲ. ನೀವು ನೋಡಿದ್ದರೆ ತಿಳಿಸಿ’ ಎಂದು ಪರೋಕ್ಷವಾಗಿ ಹೃತಿಕ್ ಗೆ ಟಾಂಗ್ ಕೊಟ್ಟಿದ್ದಾರೆ ಕಂಗನಾ.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k