ಲಂಡನ್: ಲಿಜ್ ಟ್ರಸ್ (Liz Truss) ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಬ್ರಿಟನ್‌ನ ಮಾಜಿ ಹಣಕಾಸು ಸಚಿವ ರಿಷಿ ಸುನಾಕ್ (Rishi Sunak) ಅವರು ಯುಕೆ ಪ್ರಧಾನಿ (UK PM Race) ಸ್ಥಾನಕ್ಕೆ ಸ್ಪರ್ಧಿಸಲು ಉಮೇದುವಾರಿಕೆ ಸಲ್ಲಿಸುವುದಾಗಿ ಭಾನುವಾರ ಘೋಷಿಸಿದ್ದಾರೆ.
ಬೋರಿಸ್ ಜಾನ್ಸನ್ ಪ್ರಧಾನಿ ಸ್ಥಾನದಿಂದ ಕೆಳಗಿಳಿದ ಸಂದರ್ಭದಲ್ಲಿ ಆ ಸ್ಥಾನಕ್ಕೆ ಸ್ಪರ್ಧಿಸಿ ಲಿಜ್ ಟ್ರಸ್ ಎದುರು ಸೋಲನುಭವಿಸಿದ್ದ ಭಾರತ ಮೂಲದ ರಿಷಿ ಸುನಾಕ್ ಈಗ ಮತ್ತೆ ಸ್ಪರ್ಧೆಗೆ ಮುಂದಾಗಿದ್ದಾರೆ. ಅಲ್ಲದೇ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಶ್ರಮಿಸುವುದಾಗಿ ಭರವಸೆ ಕೂಡ ಕೊಟ್ಟಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ
Advertisement
Advertisement
ಈ ಕುರಿತು ಟ್ವೀಟ್ ಮಾಡಿರುವ ಸುನಾಕ್, ಯುನೈಟೆಡ್ ಕಿಂಗ್‌ಡಮ್ ಒಂದು ಶ್ರೇಷ್ಠ ದೇಶವಾಗಿದೆ. ಆದರೆ ನಾವು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಆರ್ಥಿಕ ಬಿಕ್ಕಟ್ಟು ಸುಧಾರಿಸುವುದಕ್ಕಾಗಿ ನಿಮ್ಮ ಮುಂದಿನ ಪ್ರಧಾನಿಯಾಗಲು ನಿಂತಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ದೇಶದ ಆರ್ಥಿಕತೆಯನ್ನು ಸರಿಪಡಿಸಬೇಕಾಗಿದೆ. ಅಷ್ಟೇ ಅಲ್ಲ ನಮ್ಮ ಪಕ್ಷವನ್ನು ಸಹ ಒಗ್ಗೂಡಿಸುತ್ತೇನೆ. ಅದರ ಪ್ರಯೋಜನವನ್ನು ದೇಶಕ್ಕೆ ನೀಡಲು ಕಾರ್ಯಪ್ರವೃತ್ತನಾಗುತ್ತೇನೆ ಎಂದು ಸುನಾಕ್ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್ ಬಿಟ್ಟು ಬನ್ನಿ – ಭಾರತೀಯರಿಗೆ 5 ಬಾರ್ಡರ್ ಕ್ರಾಸಿಂಗ್ ಗುರುತಿಸಿದ ರಾಯಭಾರ ಕಚೇರಿ
Advertisement
ಪ್ರತಿಪಕ್ಷಗಳು ಸಾರ್ವತ್ರಿಕ ಚುನಾವಣೆಯ ಬೇಡಿಕೆಯನ್ನು ಪುನರುಚ್ಚರಿಸಿದ್ದರಿಂದ ಗುರುವಾರ ಪ್ರಧಾನಿ ಸ್ಥಾನಕ್ಕೆ ಟ್ರಸ್ ರಾಜೀನಾಮೆ ನೀಡಿದರು. ಇದರ ಬೆನ್ನಲ್ಲೇ ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಸುನಾಕ್ ಘೋಷಿಸಿದ್ದಾರೆ.