ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಾಡಹಗಲೇ ಡಬಲ್ ಮರ್ಡರ್ (Double Murder) ನಡೆದಿದ್ದು, ಬೆಂಗಳೂರು ಜನತೆಯನ್ನ ಬೆಚ್ಚಿ ಬೀಳಿಸಿದೆ. ಸಂಸ್ಥೆಯ ಮಾಜಿ ಉದ್ಯೋಗಿಯಿಂದಲೇ ಏರೋನಿಕ್ಸ್ ಕಂಪನಿಯ (Aeronics Company) ಎಂಡಿ ಹಾಗೂ ಸಿಇಒ ಭೀಕರವಾಗಿ ಹತ್ಯೆಯಾಗಿಯಾಗಿದ್ದಾರೆ. ಆದ್ರೆ ಹಂತಕ ಹತ್ಯೆ ಮಾಡೋದಕ್ಕೂ ಮುನ್ನವೇ ತನ್ನ ಇನ್ಸ್ಟಾಖಾತೆಯಲ್ಲಿ ಸ್ಟೇಟಸ್ ಹಾಕಿದ್ದ ಅನ್ನೋ ಸತ್ಯ ಬಯಲಾಗಿದೆ.
ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಬೆಂಗಳೂರಿನ (Bengaluru) ಹೆಬ್ಬಾಳ ಸಮೀಪದ ಅಮೃತಹಳ್ಳಿಯ ಪಂಪಾ ಬಡಾವಣೆಯಲ್ಲಿ ಹತ್ಯೆ ನಡೆದಿದೆ. ಏರೋನಿಕ್ಸ್ ಮೀಡಿಯಾ ಪ್ರೈವೆಟ್ ಲಿಮಿಟೆಡ್ ಸಂಸ್ಥೆಗೆ ನುಗ್ಗಿದ್ದ ಮೂವರು ಹಂತಕರು ಮಚ್ಚಿನಿಂದ ಕಚೇರಿಯಲ್ಲಿದ್ದ ಎಂಡಿ ಫಣೀಂದ್ರ ಸುಬ್ರಮಣ್ಯ ಹಾಗೂ ಸಿಇಒ ವಿನುಕುಮಾರ್ ಮೇಲೆ ಅಟ್ಯಾಕ್ ಮಾಡಿ ಮನ ಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.
Advertisement
Advertisement
ಕೊಲೆಯಾದ ಫಣೀಂದ್ರ 4 ತಿಂಗಳ ಹಿಂದೆ ಪಂಪಾ ಬಡಾವಣೆಯಲ್ಲಿ ಏರೋನಿಕ್ಸ್ ಮೀಡಿಯಾ ಪ್ರೈ.ಲಿ. ಹೆಸರಿನಲ್ಲಿ ಹೊಸ ಸಂಸ್ಥೆಯನ್ನ ಆರಂಭಿಸಿದ್ದರು. ಅದಕ್ಕೆ ವಿನುಕುಮಾರ್ ಸಿಇಒ ಆಗಿ ನೇಮಕವಾಗಿದ್ರು. ಮಂಗಳವಾರ ಸಂಜೆ 4 ಗಂಟೆ ವೇಳೆಗೆ ಕಂಪನಿ ಸಿಬ್ಬಂದಿ ಜೊತೆ ಎಂಡಿ ಹಾಗೂ ಸಿಇಒ ಮೀಟಿಂಗ್ ಕರೆದಿದ್ದರು. ಅದೇ ಸಮಯಕ್ಕೆ ಸ್ಕೆಚ್ ಹಾಕಿ ಕಾದು ಕುಳಿತಿದ್ದ ಹಂತಕರು ಏಕಾಏಕಿ ಕಚೇರಿಗೆ ನುಗ್ಗಿ ಮಾರಾಕಸ್ತ್ರಗಳಿಂದ ಕೊಚ್ಚಿ ಇಬ್ಬರನ್ನ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಹಾಡಹಗಲೇ ಡಬಲ್ ಮರ್ಡರ್!
Advertisement
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಅಮೃತಹಳ್ಳಿ ಪೊಲೀಸರು ಸಂಸ್ಥೆಯ ಗ್ರೌಂಡ್ ಫ್ಲೋರ್‌ನಲ್ಲಿ ಪರಿಶೀಲನೆ ನಡೆಸಿದಾಗ ತಲ್ವಾರ್ ನಿಂದ ಹಲ್ಲೆ ಮಾಡಿ ಕೊಲೆ ಮಾಡಿರೋದು ಗೊತ್ತಾಗಿದೆ. ನಂತರ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿ ಸಂಸ್ಥೆಯ ಮಾಜಿ ಉದ್ಯೋಗಿ ಫೆಲಿಕ್ಸ್ ಅಲಿಯಾಸ್ ಜೋಕರ್ ಫೆಲಿಕ್ಸ್ ಎಂಬಾತನೇ ಕೊಲೆ ಮಾಡಿರೋದು ಗೊತ್ತಾಗಿದೆ.
Advertisement
ಫಣೀಂದ್ರ, ವಿನು ಕುಮಾರ್ ಹಾಗೂ ಫೆಲಿಕ್ಸ್ ಈ ಹಿಂದೆ ಬನ್ನೇರುಘಟ್ಟ ರಸ್ತೆಯ ಜಿ ನೆಟ್ ಅನ್ನೊ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಕೆಲಸ ಬಿಟ್ಟು ಫಣೀಂದ್ರ ಪ್ರತ್ಯೇಕವಾಗಿ ಕಂಪನಿ ತೆರೆದಿದ್ದರು. ಅಲ್ಲಿಯೇ ವಿನುಕುಮಾರ್ ಸಿಇಒ ಆಗಿ ನೇಮಕವಾಗಿದ್ದರು. ಇದರಿಂದ ಹಳೇ ಸಂಸ್ಥೆಗೆ ನಷ್ಟವಾಗಿದೆ ಅಂತಾ ಫೆಲಿಕ್ಸ್ ಸ್ಕೆಚ್ ಹಾಕಿ ಕೊಲೆ ಮಾಡಿದ್ದಾನೆ ಅನ್ನೋದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಇದನ್ನೂ ಓದಿ: ಜೈನಮುನಿ ಹತ್ಯೆ ಕೇಸ್ ತನಿಖೆ ಚುರುಕು- 7 ದಿನ ಹಂತಕರು ಪೊಲೀಸ್ ಕಸ್ಟಡಿಗೆ
ಟಿಕ್‌ಟಾಕ್ ಸ್ಟಾರ್ ಆಗಿ ಫೇಮಸ್ ಆಗಿದ್ದ ಫೆಲಿಕ್ಸ್ ಅಲಿಯಾಸ್ ಜೋಕರ್ ಫೆಲಿಕ್ಸ್ ಕೊಲೆ ಮಾಡುವುದಕ್ಕೂ ಮುನ್ನ ಸ್ಟೇಟಸ್ ಹಾಕಿದ್ದಾನೆ. ʻಪ್ರಪಂಚದಲ್ಲಿ ನಂಬಿಕೆ ದ್ರೋಹಿಗಳು ಹೆಚ್ಚಾಗಿದ್ದಾರೆ. ದ್ರೋಹಿಗಳನ್ನ ಗಾಯ ಪಡಿಸುತ್ತೇನೆ, ಕೆಟ್ಟ ವ್ಯಕ್ತಿಗಳನ್ನ ಹರ್ಟ್ ಮಾಡುತ್ತೇನೆ. ಒಳ್ಳೆ ವ್ಯಕ್ತಿಗಳನ್ನ ಹರ್ಟ್ ಮಾಡೋದಿಲ್ಲʼ ಅಂತಾ ಸ್ಟೇಟಸ್ ಹಾಕಿದ್ದಾನೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿಕೊಂಡಿರೋ ಅಮೃತಹಳ್ಳಿ ಪೊಲೀಸರು ತಲೆಮರೆಸಿಕೊಂಡಿರೋ ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.
Web Stories