ಲಕ್ನೋ: ಗ್ಯಾಂಗ್‌ಸ್ಟರ್, ರಾಜಕಾರಣಿ ಮುಖ್ತಾರ್ ಅನ್ಸಾರಿಯನ್ನು (Mukhtar Ansari) ಮುಲಾಯಂ ಸಿಂಗ್ ಯಾದವ್ (Mulayam Singh Yadav) ಸರ್ಕಾರ ರಕ್ಷಿಸಿತ್ತು ಎಂದು ಮಾಜಿ ಡಿಎಸ್‌ಪಿ ಶೈಲೇಂದ್ರ ಸಿಂಗ್ (Shailendra Singh) ಹೇಳಿದ್ದಾರೆ.
20 ವರ್ಷಗಳ ಹಿಂದೆ ಮುಖ್ತಾರ್ ಅನ್ಸಾರಿಯ ಕ್ರಿಮಿನಲ್ ಚಟುವಟಿಕೆಗಳು ಉತ್ತಂಗದಲ್ಲಿತ್ತು. ಕರ್ಫೂ ವಿಧಿಸಿದ ಪ್ರದೇಶಗಳಲ್ಲಿ ತೆರೆದ ಜೀಪಿನಲ್ಲಿ ಗನ್ ಹಿಡಿದುಕೊಂಡು ತನ್ನ ಪಟಾಲಂ ಕಟ್ಟಿಕೊಂಡು ಅನ್ಸಾರಿ ತಿರುಗಾಡುತ್ತಿದ್ದಾಗ ಯಾರು ಆತನನ್ನು ತಡೆದು ನಿಲ್ಲಿಸುವ ಧೈರ್ಯ ತೋರಿಸುತ್ತಿರಲಿಲ್ಲ.
Advertisement
ಲೈಟ್ ಮೆಷಿನ್ ಗನ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿಯ ಡಿಎಸ್‌ಪಿಯಾಗಿದ್ದ ಶೈಲೇಂದ್ರ ಸಿಂಗ್ ಅವರು ಅನ್ಸಾರಿಯನ್ನು ತಡೆದು ಬಂಧಿಸಿದ್ದರು.
Advertisement
Advertisement
ಅನ್ಸಾರಿ ಬಳಿ ಇದ್ದ ಗನ್‌ಗಳನ್ನು ಜಪ್ತಿ ಮಾಡಿದ್ದ ಶೈಲೇಂದ್ರ ಸಿಂಗ್ ಭಯೋತ್ಪದನಾ ನಿಗ್ರಹ ಕಾಯ್ದೆ(POTA) ಅಡಿಯಲ್ಲಿ ಬಂಧಿಸಿದ್ದರು. ಬಂಧನ ಮಾಡಿದ ನಂತರ ಉತ್ತರ ಪ್ರದೇಶದಲ್ಲಿ ಭಾರೀ ಹೈಡ್ರಾಮಾ ನಡೆಯಿತು. ಬಂಧನ ಮಾಡಿದ 15 ದಿನದಲ್ಲೇ ಶೈಲೇಂದ್ರ ಸಿಂಗ್ ರಾಜೀನಾಮೆ ನೀಡುವ ಪ್ರಸಂಗ ಸೃಷ್ಟಿಯಾಗಿತ್ತು.
Advertisement
ರಾಜಕೀಯ ಒತ್ತಡದಿಂದ ಸೇವೆಗೆ ರಾಜೀನಾಮೆ ನೀಡಿದ ಶೈಲೇಂದ್ರ ಸಿಂಗ್ ಮೇಲೆ ಕೆಲವು ತಿಂಗಳ ನಂತರ ವಿಧ್ವಂಸಕ ಪ್ರಕರಣವನ್ನು ದಾಖಲಿಸಲಾಯಿತು. 2021ರಲ್ಲಿ ಯೋಗಿ ಸರ್ಕಾರ ಶೈಲೇಂದ್ರ ಸಿಂಗ್ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಇದನ್ನೂ ಓದಿ: ಗ್ಯಾಂಗ್‌ಸ್ಟರ್ ಅನ್ಸಾರಿ ಸಾವು – ಸುಪ್ರೀಂ ಕೋರ್ಟ್ ತನಿಖೆಗೆ ಆಗ್ರಹಿಸಿದ ಅಖಿಲೇಶ್ ಯಾದವ್
#WATCH | Lucknow: Gangster-turned-politician Mukhtar Ansari's death | Former DSP Shailendra Singh says, "20 years ago, in 2004, Mukhtar Ansari's empire was at its peak. He would move around in open jeeps in areas where curfew was imposed. That time I recovered a Light Machine… pic.twitter.com/tMIAycGCXj
— ANI (@ANI) March 29, 2024
ಮಾಧ್ಯಮದ ಜೊತೆ ಮಾತನಾಡಿದ ಶೈಲೇಂದ್ರ ಸಿಂಗ್, 2024ರಲ್ಲಿ ಅನ್ಸಾರಿಯನ್ನು ಪೋಟಾ ಕಾಯ್ದೆಯ ಅಡಿ ಬಂಧಿಸಿದ್ದೆ. ಆದರೆ ಮುಲಾಯಂ ಸರ್ಕಾರವು ಆತನನ್ನು ರಕ್ಷಿಸಲು ಬಹಳ ಪ್ರಯತ್ನಿಸಿತು. ಅಧಿಕಾರಿಗಳ ಮೇಲೆ ಒತ್ತಡ ಹೇರಿ ಐಜಿ, ಡಿಐಜಿ ಮತ್ತು ಎಸ್ಪಿ-ಎಸ್‌ಟಿಎಫ್‌ಗಳನ್ನು ವರ್ಗಾಯಿಸಲಾಯಿತು. ನಾನು 15 ದಿನಗಳಲ್ಲಿ ರಾಜೀನಾಮೆ ನೀಡುವಂತೆ ಮಾಡಲಾಗಿತ್ತು ಎಂದು ವಿವರಿಸಿದರು. ಇದನ್ನೂ ಓದಿ: ಬಿಹಾರದಲ್ಲಿ INDIA ಒಕ್ಕೂಟದ ಸೀಟು ಹಂಚಿಕೆ ಫೈನಲ್ – ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರ?
ನನ್ನ ರಾಜೀನಾಮೆ ಪತ್ರದಲ್ಲಿ ಜನರಿಗೆ ಕಾರಣ ಬರೆದಿದ್ದೆ. ನೀವು ಆಯ್ಕೆ ಮಾಡಿರುವ ಸರ್ಕಾರ ಮಾಫಿಯಾಗಳನ್ನು ರಕ್ಷಿಸುತ್ತಿದೆ. ನಾನು ಯಾರ ಪರವಾಗಿ ಕೆಲಸ ಮಾಡಿಲ್ಲ. ನಾನು ನನ್ನ ಕರ್ತವ್ಯ ಮಾಡಿದ್ದೇನೆ ಎಂದು ಬರೆದು ರಾಜೀನಾಮೆ ನೀಡಿದ್ದೆ ಎಂದು ಹೇಳಿದರು.
ಮುಖ್ತಾರಿ ಅನ್ಸಾರಿ ಅವರನ್ನು ವಿಷಪೂರಿತವಾಗಿ ಕೊಲ್ಲಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಆರೋಪ ಸಂಪೂರ್ಣವಾಗಿ ನಿರಾಧಾರ. ಮರಣೋತ್ತರ ಪರೀಕ್ಷೆಯ ನಂತರ ಸಷ್ಟವಾಗಲಿದೆ ಎಂದು ತಿಳಿಸಿದರು.
ಎರಡು ಬಾರಿ ಬಹುಜನ ಸಮಾಜ ಪಕ್ಷದ ಸೇರಿದಂತೆ ಐದು ಬಾರಿ ಮೌ ವಿಧಾನಸಭಾ ಕ್ಷೇತ್ರದಿಂದ ಶಾಸಕನಾಗಿ ಅನ್ಸಾರಿ ಆಯ್ಕೆಯಾಗಿದ್ದು, ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದರು.
ಏಪ್ರಿಲ್ 2023 ರಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಹತ್ಯೆ ಪ್ರಕರಣದಲ್ಲಿ ಮುಖ್ತಾರ್ ಅನ್ಸಾರಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. 1990 ರಲ್ಲಿ ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ನಕಲಿ ದಾಖಲೆಗಳನ್ನು ಬಳಸಿದ ಪ್ರಕರಣದಲ್ಲಿ 2024ರ ಮಾರ್ಚ್ 13 ರಂದು ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು.