ಭುವನೇಶ್ವರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮಗಳನ್ನು ಗೆಲ್ಲಿಸಲು ಒಡಿಶಾದ ಕಾಂಗ್ರೆಸ್ ಮಾಜಿ ಶಾಸಕರೊಬ್ಬರು ಮಹತ್ವದ ಹೆಜ್ಜೆಯನ್ನು ಇಡುವ ಮೂಲಕ ಇದೀಗ ಭಾರೀ ಸುದ್ದಿಯಾಗಿದ್ದಾರೆ.
ಹೌದು. ಮಾಜಿ ಕಾಂಗ್ರೆಸ್ (Congress) ಶಾಸಕ, 2014 ರಿಂದ 2019 ರವರೆಗೆ ಔಲ್ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ದೇಬೇಂದ್ರ ಶರ್ಮಾ (Debendra Sharma) ಅವರಿಗೆ ಚುನಾವಣಾ ಪ್ರಚಾರಕ್ಕೆ ಹಣದ ಕೊರತೆಯಾಗಿದೆ. ಹೀಗಾಗಿ ಅವರು ಇತ್ತೀಚೆಗೆ ತಮ್ಮ ಸ್ಥಳೀಯ ಗ್ರಾಮದಲ್ಲಿರುವ ಪೂರ್ವಜರ ಭೂಮಿಯ ಒಂದು ಭಾಗವನ್ನು ಮಾರಾಟ ಮಾಡುವ ನಿರ್ಧಾರ ಮಾಡಿದ್ದಾರೆ.
Advertisement
ಈ ಸಂಬಂಧ ಪ್ರತಿಕ್ರಿಯಿಸಿರುವ ಅವರು, ನನ್ನ ತಂದೆ ಮತ್ತು ನಾನು ಹಿಂದೆ ಶಾಸಕರಾಗಿ ಆಯ್ಕೆಯಾದ ಕ್ಷೇತ್ರದಿಂದ ನನ್ನ ಮಗಳು 28 ವರ್ಷದ ಡಾ. ದೇಬಸ್ಮಿತಾ ಶರ್ಮಾ ಸ್ಪರ್ಧಿಸುತ್ತಿದ್ದಾಳೆ. ಆರ್ಥಿಕವಾಗಿ ಹಿಂದುಳಿದಿರುವ ನಮಗೆ ಅಗತ್ಯ ಚುನಾವಣಾ ವೆಚ್ಚಗಳನ್ನು ಪೂರೈಸುವುದು ಸವಾಲಾಗಿದೆ ಎಂದರು. ಇದನ್ನೂ ಓದಿ: Exclusive: ಪ್ರತಿದಿನ 50 ಕೋಟಿ ಕಾಸು ಮಾಡದೇ ಡಿಕೆಶಿ ಮಲಗೋದಿಲ್ಲವಂತೆ: ಹೆಚ್‌ಡಿಕೆ ಬಾಂಬ್
Advertisement
Advertisement
ಇದೇ ವೇಳೆ ಕಾಂಗ್ರೆಸ್ ಪಕ್ಷದಿಂದ ಹಣಕಾಸಿನ ನೆರವಿನ ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಪಕ್ಷವು ತನ್ನ ಮಗಳಿಗಾಗಿ ನೀಡಿದ ಪ್ರಚಾರ ನಿಧಿಯು ಸಾಕಾಗುವುದಿಲ್ಲ. ಹೀಗಾಗಿ ಹಳ್ಳಿಯಲ್ಲಿರುವ ನಮ್ಮ ಪೂರ್ವಜರ ಜಮೀನಿನ ಒಂದು ಭಾಗವನ್ನು ಮಾರಾಟ ಮಾಡುವ ಕಠಿಣ ನಿರ್ಧಾರವನ್ನು ಮಾಡಿರುವುದಾಗಿ ತಿಳಿಸಿದರು.
Advertisement
ಬಿಜೆಡಿಯ ಒಡಿಶಾ ಸಚಿವ ಪ್ರತಾಪ್ ಕೇಶರಿ ದೇಬ್ ಮತ್ತು ಬಿಜೆಪಿಯ ಕೃಷ್ಣ ಚಂದ್ರ ಪಾಂಡಾ ಅವರಂತಹ ಪ್ರಮುಖ ಎದುರಾಳಿಗಳ ವಿರುದ್ಧ ಕಣಕ್ಕಿಳಿದಿದ್ದರೂ, ಮತದಾರರು ತಮ್ಮ ಮಗಳ ಮೇಲೆ ನಂಬಿಕೆ ಇಡುತ್ತಾರೆ ಎಂದು ಶರ್ಮಾ ಭರವಸೆ ವ್ಯಕ್ತಪಡಿಸಿದರು.
ಒಡಿಶಾದಲ್ಲಿ ಮೇ 13 ರಿಂದ ಏಕಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳು ನಡೆಯಲಿದ್ದು, ಜೂನ್ 2 ರಂದು ಮತದಾನದ ಫಲಿತಾಂಶಗಳು ಪ್ರಕಟವಾಗಲಿವೆ.