ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವಿಟ್ಟರ್ ಮೂಲಕ ರಾಮನವಮಿ ಶುಭಾಶಯ ತಿಳಿಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಅನ್ನ ಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಕ್ಷೀರಧಾರೆ, ಪಶುಭಾಗ್ಯ ಕೊಟ್ಟಿದ್ದೇನೆ. ನುಡಿದಂತೆ ನಡೆದಿದ್ದೇನೆ. ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಮತದಾರರಲ್ಲಿ ಮತ ಕೇಳುತ್ತಿದ್ದೇನೆ. ಆದರೆ ನಮ್ಮ ಪ್ರಧಾನಿ ನರೇಂದ್ರ ಸಾಹೇಬರು, ಪುಲ್ವಾಮಾ, ಬಾಲಕೋಟ್, ಪಾಕಿಸ್ತಾನ ಅಂತ ಹೇಳಿ ಮತಯಾಚಿಸುತ್ತಿದ್ದಾರೆ. ಇದು ನಮ್ಮ ಭಾಗ್ಯ ಮತ್ತು ದೌರ್ಭಾಗ್ಯ ಎಂದು ಟ್ವೀಟ್ ಮಾಡಿದ್ದಾರೆ.
Advertisement
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ವಿಚಾರ ಟ್ವೀಟ್ ಮಾಡಿರುವ ಮಾಜಿ ಸಿಎಂ, ಮುಖ್ಯಮಂತ್ರಿಯಾಗಿ ನಾನು ಶ್ರೀರಾಮಚಂದ್ರನಿಂದ ಕಲಿತ ಮೊದಲ ಪಾಠ ನುಡಿದಂತೆ ನಡೆಯಬೇಕೆಂಬ ವಚನಪಾಲನೆ. ರಾಮಮಂದಿರ ಕಟ್ಟುತ್ತೇವೆ ಎಂದು ಚಂದಾ ಎತ್ತಿ, ಇಟ್ಟಿಗೆ ಒಟ್ಟುಮಾಡಿ ಮೋಸ ಮಾಡಿದ ವಚನ ಭ್ರಷ್ಟರೆಲ್ಲ ಶ್ರೀರಾಮನಿಂದ ಕಲಿತಿದ್ದೇನು? ಹೇ ರಾಮ್! ಎಂದು ಹೇಳಿದ್ದಾರೆ.
Advertisement
" ಅನ್ನ ಭಾಗ್ಯ,ಕ್ಷೀರಭಾಗ್ಯ, ಕೃಷಿಭಾಗ್ಯ,ಕ್ಷೀರಧಾರೆ, ಪಶುಭಾಗ್ಯ ಕೊಟ್ಟಿದ್ದೇನೆ, ನುಡಿದಂತೆ ನಡೆದಿದ್ದೇನೆ,
ಮಾಡಿದಕೆಲಸಕ್ಕೆ ಕೂಲಿ ಕೊಡಿ ಎಂದು ಮತ ಕೇಳ್ತಿದ್ದೆ,
ನಮ್ಮ ಮೋದಿ ಸಾಹೇಬರು, ಪುಲ್ವಾಮ,ಬಾಲಕೋಟ್, ಪಾಕಿಸ್ತಾನ ಎಂದು ಹೇಳಿ ಮತ ಕೇಳ್ತಿದ್ದಾರೆ.
ಇದು ನಮ್ಮ
ಭಾಗ್ಯ ಮತ್ತು ದೌರ್ಭಾಗ್ಯ.@INCKarnataka
— Siddaramaiah (@siddaramaiah) April 13, 2019
Advertisement
ಮುಖ್ಯಮಂತ್ರಿಯಾಗಿ
ನಾನು ಶ್ರೀರಾಮಚಂದ್ರನಿಂದ ಕಲಿತ ಮೊದಲ ಪಾಠ
-ನುಡಿದಂತೆ ನಡೆಯಬೇಕೆಂಬ ವಚನಪಾಲನೆ.
ರಾಮಮಂದಿರ ಕಟ್ತೇವೆ ಎಂದು ಚಂದಾ ಎತ್ತಿ, ಇಟ್ಟಿಗೆ ಒಟ್ಟುಮಾಡಿ ಮೋಸಮಾಡಿದ ವಚನ ಭ್ರಷ್ಟರೆಲ್ಲ ಶ್ರೀರಾಮನಿಂದ ಕಲಿತಿದ್ದೇನು?
ಹೇ ರಾಮ್!@INCKarnataka
— Siddaramaiah (@siddaramaiah) April 13, 2019