ಹಾಸನ: ಸಿದ್ದರಾಮಯ್ಯ (Siddaramaiah) ನಾಲಿಗೆ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳಲಿ. ಹುಚ್ಚುಚ್ಚಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (Yediyurappa) ಕಿಡಿ ಕಾರಿದ್ದಾರೆ.
ಹಾಸನದಲ್ಲಿಂದು (Hassan) ಶಾಸಕ (MLA) ಪ್ರೀತಂಗೌಡ ಅವರ ಮನೆಗೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ವೈ, `ಬಿಜೆಪಿ ಲಜ್ಜೆಗೆಟ್ಟ ಸರ್ಕಾರ’ (BJP Government) ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸ್ನಾನದ ವೀಡಿಯೋ ಲೀಕ್ – ವಾಶ್ ರೂಂ ಅಂದ್ರೆನೇ ಬೆಚ್ಚಿ ಬೀಳ್ತಿದ್ದಾರೆ ವಿದ್ಯಾರ್ಥಿನಿಯರು
ಸಿದ್ದರಾಮಯ್ಯ ಹುಚ್ಚುಚ್ಚಾಗಿ ಮಾತನಾಡುವುದು ಅವರಿಗೆ ಶೋಭೆ ತರುವುದಿಲ್ಲ. ಮೈಸೂರಿನಲ್ಲಿ ಯಾಕೆ ಅವರಿಗೆ ಸೋಲಾಯ್ತು? ಬಾದಾಮಿಯಲ್ಲಿ ಇನ್ನೊಂದು ದಿನ ನಾನು ಹೋಗಿದ್ರೆ ಅಲ್ಲಿಯೂ ಸೋಲು ಅನುಭವಿಸುತ್ತಿದ್ದರು. ಮೊದಲು ಅವರ ಕ್ಷೇತ್ರ ಯಾವುದು ಎಂದು ಹುಡುಕಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಸ್ತೆಗಾಗಿ ದಶಕಗಳಿಂದ ಹೋರಾಟ – ಆಸ್ಪತ್ರೆಗೆ ದಾಖಲಿಸಲು ವದ್ಧೆಯನ್ನು ಜೋಳಿಗೆಯಲ್ಲೇ ಹೊತ್ತೊಯ್ದರು
`ಬಿಜೆಪಿ 40 ಪರ್ಸೆಂಟ್ ಕಮಿಷನ್ ಸರ್ಕಾರ’ (40 Percent Commission) ಎಂಬ ಕಾಂಗ್ರೆಸ್ (Congress) ಆರೋಪಕ್ಕೆ ತಿರುಗೇಟು ನೀಡಿದ ಬಿಎಸ್‌ವೈ (BSY), ಆಧಾರ ರಹಿತವಾದ ಆರೋಪವನ್ನು ಯಾರು ಬೇಕಾದರೂ ಮಾಡಬಹುದು. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡಲಿ, ಅವರ ಕಾಲದಲ್ಲಿ ಭ್ರಷ್ಟಾಚಾರ ಮಾಡಿ ಡಿಕೆಶಿ-ಸಿದ್ಧರಾಮಯ್ಯ (DK Shivakumar) ನಮ್ಮ ಮೇಲೆ ಆರೋಪ ಮಾಡ್ತಿದ್ದಾರೆ. ಭ್ರಷ್ಟಾಚಾರ ನಡೆದಿದ್ದರೆ ಸದನದಲ್ಲಿ ಗಮನಕ್ಕೆ ತರಲಿ ಸರಿ ಪಡಿಸಿಕೊಳ್ಳುವ ಕೆಲಸ ಮಾಡ್ತಿವಿ ಎಂದು ಹೇಳಿದ್ದಾರೆ.
ದೇಶದಲ್ಲೇ ಕಾಂಗ್ರೆಸ್ ಧೂಳೀಪಟ: ಇಡೀ ದೇಶದಲ್ಲೇ ಕಾಂಗ್ರೆಸ್ ಧೂಳಿಪಟವಾಗಿದೆ. ರಾಹುಲ್‌ಗಾಂಧಿ ಭಾರತ್ ಜೋಡೋ ಯಾತ್ರೆಯಿಂದ ದೊಡ್ಡ ಸಾಧನೆ ಮಾಡ್ತಾರೆ ಅನ್ಸೋದಿಲ್ಲ ಎಂದು ಕುಟುಕಿದ್ದಾರೆ.
ಕಾಂಗ್ರೆಸ್‌ನವರು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದು, ಡಿಕೆಶಿ-ಸಿದ್ದರಾಮಯ್ಯ ಕಚ್ಚಾಟ ದಿನೇ ದಿನೇ ಜಾಸ್ತಿ ಆಗ್ತಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ 140 ಸೀಟ್ ಗೆದ್ದು ಬಿಜೆಪಿ ಅಧಿಕಾರಕ್ಕೆ ಬರ್ತೇವೆ. ಅಧಿವೇಶನ ಮುಗಿದ ನಂತರ ಎರಡು ತಂಡಗಳಾಗಿ ಇಡೀ ರಾಜ್ಯದಲ್ಲಿ ಪ್ರವಾಸ ಮಾಡ್ತೇವೆ. ದೇಶದಲ್ಲೇ ಮೋದಿಯವರ ಪರ ಅಲೆ ಜಾಸ್ತಿ ಇದೆ. ಹಾಗಾಗಿ ಬಿಜೆಪಿ ಅಧಿಕಾರಕ್ಕೆ ಬರೋದು ಖಚಿತವಾಗಿದೆ. ರಾಜ್ಯದಲ್ಲೂ ಅಧಿಕಾರಕ್ಕೆ ತರುವ ಮೂಲಕ ಮೋದಿಯವರ ಕೈ ಬಲಪಡಿಸುತ್ತೇವೆ ಎಂದು ಹೇಳಿದ್ದಾರೆ.
ತಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ವಿಚಾರ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಯಲ್ಲಿದೆ. ಅಲ್ಲಿ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ರಾಜ್ಯದಲ್ಲಿ ಯಾವ್ಯಾವ ಹಗರಣಗಳು ನಡೆದಿವೆ ಎಲ್ಲದರ ಬಗ್ಗೆ ತನಿಖೆ ನಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.