ಹುಬ್ಬಳ್ಳಿ: ಈಗ ಚುನಾವಣೆ ಮಾಡಿದ್ರೆ ಬಿಜೆಪಿಗೆ (BJP) 40 ಸೀಟು ಸಹ ಬರಲ್ಲ. ಏಕೆಂದರೆ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ. ವಿಜಯೇಂದ್ರ ಅಲ್ಲಾ ಯಾರೂ ಅಧ್ಯಕ್ಷರಾದ್ರೂ ಅಸರಿ ಮಾಡೋಕಾಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2018ರ ಚುನಾವಣೆಯಲ್ಲೇ ಮೋದಿ (Modi) ಮತ್ತು ಯಡಿಯೂರಪ್ಪ (Yediyurappa) ನೇತೃತ್ವದಲ್ಲಿ ಬಿಜೆಪಿ ವಿಧಾನಸಭಾ ಚುನಾವಣಾ ಎದುರಿಸಿತ್ತಕ. ಅಷ್ಟೆಲ್ಲಾ ಗುದ್ದಾಡಿದ್ರೂ ಕೊನೆಗೆ ಬಂದು ನಿಂತಿದ್ದು 104ಕ್ಕೆ. ಇವತ್ತು ಬಿಜೆಪಿ ಹದಗೆಟ್ಟು ಹೋಗಿದೆ, ಈಗ ಚುನಾವಣಾ ನಡೆದ್ರೆ 66 ಅಲ್ಲಾ 40 ಸೀಟ್ ಸಹ ಬಿಜೆಗೆ ಬರಲ್ಲ. ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ, ವಿಜಯೇಂದ್ರ ಅಲ್ಲಾ ಯಾರೂ ಅಧ್ಯಕ್ಷರಾದರೂ ಅದನ್ನು ಸರಿ ಮಾಡಲು ಆಗುವುದಿಲ್ಲ ಎಂದು ವಾಗದ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯ ಮುಂಚೆ or ನಂತ್ರ ಡಿಕೆಶಿ ಜೈಲಿಗೆ ಹೋಗೋದು ಫಿಕ್ಸ್: ಈಶ್ವರಪ್ಪ
Advertisement
Advertisement
ಪಂಚ ರಾಜ್ಯಗಳ ಚುನಾವಣೆಯಲ್ಲಿ (Five States Election) ಒಳ್ಳೆಯ ಫಲಿತಾಂಶ ಬರುತ್ತೆ. ಮಧ್ಯಪ್ರದೇಶ, ಛತ್ತೀಸ್ ಘಡ ಎರಡರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ತೆಲಂಗಾಣದಲ್ಲಿಯೂ ಅಧಿಕಾರಕ್ಕೆ ಬರುವ ಎಲ್ಲ ಅವಕಾಶಗಳಿವೆ ರಾಜಸ್ಥಾನದಲ್ಲಿ ನೆಕ್ ಟು ನೆಕ್ ಫೈಟ್ ಇದೆ. ಆದ್ರೆ ಅತೀವ ವಿಜಯ ಕಾಂಗ್ರೆಸ್‌ಗೆ ಬರುತ್ತದೆ. ಜನರ ಭಾವನೆ ಯಾವರೀತಿ ಇದೆ ಅನ್ನೋದನ್ನ ಈ ಚುನಾವಣಾ ಫಲಿತಾಂಶ ತಿಳಿಸುತ್ತದೆ. ಯಾವುದೇ ರಾಜಕೀಯ ಪಕ್ಷಗಳು ಕೊನೆಯ ಹಂತದವರಿಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತೆಗೆದುಕೊಂಡು ಹೋಗಬಾರದು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು. ಇದರಿಂದಾಗಿ ಅಭ್ಯರ್ಥಿಗಳು ಅತಿಹೆಚ್ಚು ಜನರನ್ನು ತಲುಪಬಹುದು. ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಒಳ್ಳೆಯದು ಎಂದು ಹೇಳಿದ್ದಾರೆ.
Advertisement
ಮುಂದುವರಿದು, ಈಗ ನಾನು ಎಲ್ಲಾ ಚುನಾವಣೆಯಲ್ಲಿ ಕಾಯಂ ಟಾರ್ಗೆಟ್. ಆದ್ರೂ ನಾನು ಯಾವುದಕ್ಕೂ ಹೆದರಲ್ಲ. ನನ್ನ ಮೇಲೆ ಐಟಿ ದಾಳಿ ನೆಡಸಲಿ ಅಂತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ತಂದೆ-ತಾಯಿಯನ್ನು ಸಾಕುವವರೇ ಹೆಣ್ಣು ಮಕ್ಕಳು: ಭ್ರೂಣಹತ್ಯೆ ವಿರುದ್ಧ ಎಂಬಿ ಪಾಟೀಲ್ ಕಿಡಿ
Advertisement
\
ಎಲ್ಲವೂ ರಾಜಕೀಯವಾಗಿದೆ ಸಿಬಿಐ ಐಟಿ, ಇಡಿ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ. ಈ ರೀತಿಯ ಸಂಸ್ಥೆಗಳ ಬಗ್ಗೆ ಜನರಿಗೆ ಹೆದರಿಕೆ ಇತ್ತು. ಆದರೆ ಈಗ ಸಿಬಿಐ ಅಂದ್ರೂ ಹೆದರಿಕೆ ಇಲ್ಲ, ಐಟಿ ಅಂದ್ರೂ ಹೆದರಿಕೆ ಇಲ್ಲ. ಇದೆಲ್ಲಾ ನಾಟಕೀಯ ಅಂತ ಜನ ಆಲೋಚನೆ ಮಾಡುತ್ತಿದ್ದಾರೆ. ಇಷ್ಟು ದಿನ ಐಟಿ ಮತ್ತು ಈಡಿ ದಾಳಿ ಮಾಹಿತಿ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಲಿ ದಾಳಿ ಬಗ್ಗೆ ಶ್ವೇತ ಪತ್ರ ಬಿಡುಗಡೆ ಮಾಡಲಿ. ಹುಬ್ಬಳ್ಳಿ ಧಾರವಾಡದಲ್ಲಿ ಯಾರು ಪ್ರಬಲವಾಗಿ ರಾಜಕೀಯ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಅಂತಹವರ ಮೇಲೆ ಐಟಿ ದಾಳಿಯಾಗಿದೆ ನನ್ನ ಆಪ್ತರ ಮೇಲೆ, ಬೆಂಬಲಿಗರಿಗೆ ಐಟಿ ದಾಳಿ ಬೆದರಿಕೆ ಹಾಕಿ ನಮ್ಮ ಮನೆ ಹತ್ತಿರ ಬಾರದಂತೆ ತಡೆಯಲಾಗಿದೆ ಅಂತ ಆರೋಪಿಸಿದ್ದಾರೆ.
ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ, ಹರಿಬರಿಯಲ್ಲಿ ಡಿ.ಕೆ ಶಿವಕುಮಾರ್ ಅವರ ಪ್ರಕರಣವನ್ನ ಸಿಬಿಐ ತನಿಖೆಗೆ ವಹಿಸಿತ್ತು. ಕಾನೂನಿನಲ್ಲಿ ಪ್ರಕರಣ ವಾಪಸ್ ಪಡೆಯಲು ಅವಕಾಶವಿದೆ, ಅದರಂತೆ ಕೇಸ್ ವಾಪಸ್ ಪಡೆಯಲಾಗಿದೆ. ಹಿಂದಿನ ಸರ್ಕಾರ ಕಾನೂನಾತ್ಮಕವಾಗಿ ತನಿಖೆಗೆ ವಹಿಸಿದ್ದರೇ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯ ಮುಂಚೆ or ನಂತ್ರ ಡಿಕೆಶಿ ಜೈಲಿಗೆ ಹೋಗೋದು ಫಿಕ್ಸ್: ಈಶ್ವರಪ್ಪ