– ಮುಸ್ಲಿಮರೂ ನನ್ನ ಪಕ್ಷವನ್ನ ನಂಬಿ ಬನ್ನಿ ಎಂದ ಮಾಜಿ ಸಿಎಂ
ಕೋಲಾರ: ಈಗಿನ ರಾಜಕಾರಣಿಗಳು ಕೋಲಾರ (Kolar) ಜಿಲ್ಲೆಯ ಜನತೆಯೊಂದಿಗೆ ಚೆಲ್ಲಾಟ ಆಡಿದ್ದಾರೆ. ಬಹಳ ಹರಿಶ್ಚಂದ್ರರಂತೆ ಮಾತನಾಡ್ತಾರೆ. ನೀರಿನ ಹೆಸರು ಹೇಳಿಕೊಂಡು ಚುನಾವಣೆಗೆ ಜೇಬು ತುಂಬಿಸಿಕೊಂಡಿದ್ದಾರೆ. ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ. ಅಂಥವರ ಮಾತಿಗೆ ಕೋಲಾರದ ಜನ ಮರುಳಾಗಬೇಡಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
Advertisement
ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಶಿನಿಗೇನಹಳ್ಳಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯರಗೋಳ್ ಜಲಾಶಯದಲ್ಲಿ ನೀರು ಬರಲು ದಿವಂಗತ ಆಲಂಗೂರು ಶ್ರೀನಿವಾಸ್ ಅವರೇ ಕಾರಣ. ನನ್ನ ಹೋರಾಟವೂ ಕೋಲಾರ ಜಿಲ್ಲೆಗೆ ಉಪಯುಕ್ತ ಕುಡಿಯುವ ನೀರು ಕೊಡಬೇಕೆಂಬುದೇ ಆಗಿದೆ. ಆದ್ರೆ ಕೆಲವರಿಂದ ಹಂತ-ಹಂತವಾಗಿ ಈ ಜಿಲ್ಲೆಯ ಜನತೆಗೆ ವಿಷ ಕೊಡುವ ಕೆಲಸ ಆಗ್ತಿದೆ. ಕೆ.ಸಿ.ವ್ಯಾಲಿ ನೀರು ಕೊಟ್ಟು ವಿಷ ನೀಡುತ್ತಿದ್ದಾರೆ. ಈ ಬಾರಿ 6ಕ್ಕೆ 6 ಕ್ಷೇತ್ರಗಳಲ್ಲಿ ಕೋಲಾರದ ಜನತೆ ಜೆಡಿಎಸ್ ಪಕ್ಷವನ್ನ ಗೆಲ್ಲಿಸಿದ್ರೆ, ಮುಂದಿನ 5 ವರ್ಷದೊಳಗೆ ಪರಿಶುದ್ಧ ಕುಡಿಯುವ ನೀರು ಸಿಗುವಂತೆ ಮಾಡುತ್ತೇನೆ ಎಂದು ಶಪಥ ಮಾಡಿದ್ದಾರೆ.
Advertisement
Advertisement
ಈಗಿನ ರಾಜಕಾರಣಿಗಳು ಕೋಲಾರ ಜಿಲ್ಲೆಯ ಜನತೆಯೊಂದಿಗೆ ಚೆಲ್ಲಾಟ ಆಡಿದ್ದಾರೆ. ಬಹಳ ಹರಿಶ್ಚಂದ್ರರಂತೆ ಮಾತನಾಡ್ತಾರೆ. ನೀರಿನ ಹೆಸರು ಹೇಳಿಕೊಂಡು ಚುನಾವಣೆಗೆ ಜೇಬು ತುಂಬಿಸಿಕೊಂಡಿದ್ದಾರೆ. ಮಾಡೋದು ಹರಿಕಥೆ, ತಿನ್ನೋದು ಬದನೇಕಾಯಿ. ಅಂಥವರ ಮಾತಿಗೆ ಕೋಲಾರ ಜನ ಮರುಳಾಗಬೇಡಿ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಹೆರಿಟೇಜ್, ಡೂಡ್ಲ, ಆರೋಕ್ಯ ಹಾಲಿನ ಬ್ರಾಂಡ್‍ಗಳು ನಂದಿನಿಯ ಅಕ್ಕತಂಗಿಯರಾ?: ಪ್ರತಾಪ್ ಸಿಂಹ
Advertisement
ಜೆಡಿಎಸ್ (JDS) ಪಕ್ಷಕ್ಕೆ ಒಳ್ಳೆಯ ದಿನ ಬರುವ ನಂಬಿಕೆಯಿದೆ. ಕಾಂಗ್ರೆಸ್ (Congress) ತೊರೆದು ಪ್ರಮುಖ ಮುಖಂಡರು ನಮ್ಮ ಪಕ್ಷ ಸೇರಿದ್ದಾರೆ. ಪಕ್ಷಕ್ಕೆ ಸೇರುವವರಿಗೆ ನಾನು ಅಬಾರಿಯಾಗಿದ್ದೇನೆ. 2(0) ಯಿಂದ 3(0)ಗೆ ಹಾಕಿರುವ ಬಣಜಿಗ ಸಮುದಾಯದ ಪರವಾಗಿ ನಾನಿದ್ದೇನೆ. ಅವರ ಸಮಸ್ಯೆ ಸರಿಪಡಿಸುವ ಕೆಲಸ ಮಾಡ್ತೇವೆ. ಮುಸ್ಲಿಮರೂ ಸಹ ನನ್ನ ಪಕ್ಷವನ್ನ ನಂಬಿ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮೂಲಭೂತ ಸೌಕರ್ಯ ಕೊಡದೇ ಪ್ರಚಾರಕ್ಕೆ ಬಂದ್ರೆ ವೋಟ್ ಕೊಡಲ್ಲ: ನಿಖಿಲ್‌ಗೆ ಮಹಿಳೆಯರಿಂದ ತರಾಟೆ