ಬೆಂಗಳೂರು: ವಿದೇಶಿ ಪ್ರವಾಸ ಮುಗಿಸಿ ಬಂದ ಬೆನ್ನಲ್ಲೇ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಮತ್ತೆ ಸರ್ಕಾರದ ವಿರುದ್ಧ ಗುಡುಗಲಾರಂಭಿಸಿದ್ದಾರೆ. ಗೃಹ ಇಲಾಖೆ (Home Department) ವರ್ಗಾವಣೆ ರಹಸ್ಯ ಸಭೆಯಲ್ಲಿ ವೈಎಸ್‌ಟಿ ಭಾಗಿ ಮಾಹಿತಿ ಸ್ಫೋಟಿಸಿದ್ದ ಹೆಚ್‌ಡಿಕೆ ಈಗ ಆ ಸಭೆ ಬಗ್ಗೆ ಮತ್ತಷ್ಟು ರಹಸ್ಯಗಳನ್ನ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ತಮ್ಮನ್ನ ಟೀಕಿಸಿದ ಸಿಎಂ ಮತ್ತು ಪರಮೇಶ್ವರ್ ಅವ್ರಿಗೂ ಹೆಚ್‌ಡಿಕೆ ಟಕ್ಕರ್ ಕೊಟ್ಟಿದ್ದಾರೆ.
Advertisement
ಗೃಹ ಇಲಾಖೆ ವರ್ಗಾವಣೆ (Home Department Transfer Scam) ಬಗ್ಗೆ ಮಾಜಿ ಸಿಎಂ ಹೆಚ್‌ಡಿಕೆ ಸ್ಫೋಟಿಸಿದ ಬಾಂಬ್ ಇನ್ನೂ ಸಿಡಿಯುತ್ತಲೇ ಇದೆ. ಈ ಮಧ್ಯೆ ಶನಿವಾರವೂ ಗೃಹ ವರ್ಗಾವಣೆ ದಂಧೆ ಆರೋಪ ಬಗ್ಗೆ ತಮ್ಮ ಬತ್ತಳಿಕೆಯಿಂದ ಮತ್ತಷ್ಟು ಬಾಣಗಳನ್ನ ಬಿಟ್ಟಿದ್ದಾರೆ. ಕಳೆದ ಜುಲೈ 30ರ ಸೀಕ್ರೆಟ್ ಸಭೆಯಲ್ಲಿ ಗೃಹ ಇಲಾಖೆ ವರ್ಗಾವಣೆ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwara) ನಡುವೆ ಜಟಾಪಟಿ ನಡೆದಿತ್ತು ಅಂತ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
Advertisement
Advertisement
ಇಲ್ಲಿನ ಜೆ.ಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕುಮಾರಸ್ವಾಮಿ, ಆವತ್ತು ಸಭೆ ನಡೆದ ಪೊಲೀಸ್ ಮೆಸ್‌ನಲ್ಲಿ ಸಿಎಂಗೂ-ಗೃಹ ಸಚಿವರಿಗೂ ಘರ್ಷಣೆ ಆಯ್ತು. ಸರ್ಕಾರದ ಶಾಸಕರಿಗೂ ಏನಾಯ್ತು ಅಂತ ಎಲ್ಲಾ ಗೊತ್ತಿದೆ. ವರ್ಗಾವಣೆ ಪ್ರಕ್ರಿಯೆ ಆಗುವಾಗ ಜೊತೆಗೆ ಯಾರು ಕೂತಿದ್ರು? ಅದೆಲ್ಲ ಗೊತ್ತಿಲ್ವಾ? ಸಾಕ್ಷಿಗೆ ಬೇಕಾದ್ರೆ ಮೆಸ್‌ನಲ್ಲಿ ಸಿಸಿ ಕ್ಯಾಮೆರಾಗಳಿವೆ, ಪರಿಶೀಲಿಸಬಹುದು ಎಂದಿದ್ದಾರೆ. ಇದನ್ನೂ ಓದಿ: ಕಲುಷಿತ ನೀರು ಸೇವಿಸಿ ಐವರು ಸಾವು – ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ವಿತರಣೆ
Advertisement
ಸುಮ್ನೆ ನನ್ನನ್ನ ಕೆಣಕಬೇಡಿ:
ಇದೇ ವೇಳೆ ತಮ್ಮ ಆರೋಪ ಹಿಟ್ ಅಂಡ್ ರನ್ ಕೇಸ್ ಅಂದ ಸಿಎಂ ಮೇಲೂ ಹೆಚ್‌ಡಿಕೆ ಹರಿಹಾಯ್ದಿದ್ದಾರೆ. ನಾನು ಹಿಟ್ ಅಂಡ್ ರನ್ ಮಾಡುವ ವ್ಯಕ್ತಿ ಅಲ್ಲ. ನಡೆದಿರುವುದನ್ನ ಹೇಳಿದ್ದೇನೆ, ಮಿಸ್ಟರ್ ಸಿದ್ದರಾಮಯ್ಯ ನಿಮ್ಮಂತೆ ನಾನು ಸಿಎಂ ಆಗಿದ್ದಾಗ ನನ್ನ ಸಹಿಯನ್ನ ಮಾರಾಟಕ್ಕಿಟ್ಟಿರಲಿಲ್ಲ. ನಾನು ಹಿಟ್ ಅಂಡ್ ರನ್ನಾ? ಯಾವುದರಲ್ಲಿ ಹಿಟ್ ಅಂಡ್ ರನ್? ತೋರಿಸಿ ನೋಡೋಣ. ಸುಮ್ಮನೆ ನನ್ನನ್ನ ಕೆಣಕಬೇಡಿ. ಹಿಟ್ ಅಂಡ್ ರನ್ ಮಾಡ್ತಾ ಇರೋದು ನೀವು. ಬಿಜೆಪಿ ಸರ್ಕಾರದ ಮೇಲೆ 40% ಆರೋಪ ಮಾಡಿದಿರಿ. ಆ ಆರೋಪಗಳ ಕಥೆ ಏನಾಯ್ತು? ಒಂದು ದಾಖಲೆಯನ್ನಾದ್ರೂ ಹೊರಗೆ ಬಿಟ್ರಾ? ನಿಮ್ಮ ಯೋಗ್ಯತೆ ನನಗೆ ಗೊತ್ತಿಲ್ಲವೇ? ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: ತೆರಿಗೆ ಕಾನೂನುಗಳು ಸರಳವಾಗ್ಬೇಕು; ಹೆಚ್ಚು ತೆರಿಗೆ ಸಂಗ್ರಹವಾಗ್ತಿದ್ರೆ, ದೇಶದ ಅಭಿವೃದ್ಧಿಯ ಸಂಕೇತ: ಬೊಮ್ಮಾಯಿ
ಕೇರಳದಲ್ಲಿ ಮಾನ ಮೂರಾಬಟ್ಟೆಯಾಗಿದೆ:
ಇನ್ನು ಗೃಹ ಸಚಿವ ಪರಮೇಶ್ವರ್ ವಿರುದ್ಧವೂ ಹೆಚ್‌ಡಿಕೆ ಟೀಕಾಪ್ರಹಾರ ನಡೆಸಿದ್ದಾರೆ. ತಮ್ಮ ನೇತೃತ್ವದ ಮೈತ್ರಿ ಸರ್ಕಾರದಲ್ಲಿ ಗೃಹ ಸಚಿವರೂ ಆಗಿದ್ದ ಪರಮೇಶ್ವರ್ ಅವರಿಗೆ ನಾನು ವರ್ಗಾವಣೆ ವಿಷಯದಲ್ಲಿ ಸಲಹೆ ಕೊಟ್ಟಿದ್ದೇನೆ ಎಂದು ಸ್ವತಃ ಅವರೇ ಹೇಳಿದ್ದಾರೆ. ನಾನು ಏನು ಸಲಹೆ ಕೊಟ್ಟಿದ್ದೀನಿ ಎಂದು ಅವರು ಜನರ ಮುಂದೆ ಬಂದು ಹೇಳಲಿ. ಪೊಲೀಸ್ ವರ್ಗಾವಣೆಯಲ್ಲಿ ನನ್ನ ಹಸ್ತಕ್ಷೇಪ ಇತ್ತಾ? ನೀವು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸೇರಿ ವರ್ಗ ಮಾಡಿದ್ದು, ಅಲ್ಲವೇ? ಬಿಡಿಎ ಸಂಬಂಧಿಸಿದ ಗಲಾಟೆ ನನ್ನಿಂದ ಶುರುವಾಯಿತಾ? ಅಲ್ಲಿ ನಡೆದ ಅವಾಂತರಕ್ಕೆ ಯಾರು ಕಾರಣ? ಪರಮೇಶ್ವರ್ ಹೇಳಬಹುದು, ಅಲ್ಲವೇ? ಗೃಹ ಸಚಿವರು ನನ್ನ ಬಗ್ಗೆ ಮಾತನಾಡುವುದನ್ನ ಮೊದಲು ನಿಲ್ಲಿಸಲಿ. ಕೇರಳದಲ್ಲಿ ನಿಮ್ಮ ಇಲಾಖೆಯ ಮಾನ ಮೂರಾಬಟ್ಟೆ ಆಗಿದೆ. ಕೇರಳಕ್ಕೆ ಹೋಗಿ ಮುಖಕ್ಕೆ ಮಂಗಳಾರತಿ ಮಾಡಿಸ್ಕೊಂಡು ಬಂದ್ರಲ್ಲಾ? ಯಾವ ರೀತಿ ಆಡಳಿತ ಇದೆ ಅನ್ನೋದಕ್ಕೆ ಈ ಉದಾಹರಣೆ ಸಾಕಲ್ಲವೇ? ಎಂದು ಪರಮೇಶ್ವರ್‌ಗೆ ಟಾಂಗ್ ಕೊಟ್ಟಿದ್ದಾರೆ.
ವರ್ಗಾವಣೆ ದಂಧೆಯಲ್ಲಿ 1 ಸಾವಿರ ಕೋಟಿ ಮೀರಿದೆ:
ಈ ಸರ್ಕಾರ ಲೆಕ್ಕಕ್ಕಿಲ್ಲದಷ್ಟು ಪ್ರಮಾಣದಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. ದಿನದಿಂದ ದಿನಕ್ಕೆ ಅದರ ಅವ್ಯವಹಾರ ಎಲ್ಲೆ ಮೀರುತ್ತಿದೆ. ಈವರೆಗೆ ಈ ದಂಧೆಯಲ್ಲಿ 1,000 ಕೋಟಿಗೂ ಮೀರಿ ಕೈ ಬದಲಾಗಿದೆ ಎಂದು ಅಧಿಕಾರಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ. ಒಂದೊಂದು ಹುದ್ದೆಗೆ ಮೂರು-ಮೂರು ಅಧಿಕಾರಿಗಳು ನಿಯೋಜನೆಯಾಗಿದ್ದಾರೆ. ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿ ಕಚೇರಿಯ ಅಡಿ ಟಿಪ್ಪಣಿಗಳು ಹಾದಿಬೀದಿಯಲ್ಲಿ ಬಿಕರಿ ಆಗುತ್ತಿವೆ ಎಂದು ಹೆಚ್‌ಡಿಕೆ ಗಂಭೀರ ಆರೋಪ ಮಾದ್ದಾರೆ.
Web Stories