ಮುಂಬೈ: ಸಂಸ್ಕೃತ (Sanskrit) ಏಕೆ ಭಾರತದ ಅಧಿಕೃತ ಭಾಷೆಯಾಗಬಾರದು? 1949 ರ ಮಾಧ್ಯಮ ವರದಿಗಳ ಪ್ರಕಾರ, ಸಂವಿಧಾನ ಶಿಲ್ಪಿ ಮತ್ತು ಖ್ಯಾತ ನ್ಯಾಯಶಾಸ್ತ್ರಜ್ಞ ಬಿ.ಆರ್.ಅಂಬೇಡ್ಕರ್ (BR Ambedkar) ಅವರು ಕೂಡ ಇದನ್ನು ಪ್ರಸ್ತಾಪಿಸಿದ್ದರು ಎಂದು ಸುಪ್ರೀಂ ಕೋರ್ಟ್‌ನ (Supreme Court) ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ (S.A.Bobde) ಹೇಳಿದ್ದಾರೆ.
ಸಂಸ್ಕೃತ ಭಾರತಿ ಆಯೋಜಿಸಿದ್ದ ಅಖಿಲ ಭಾರತೀಯ ಛಾತ್ರ ಸಮ್ಮೇಳನದಲ್ಲಿ ಬೋಬ್ಡೆ ಅವರು ಮಾತನಾಡಿ, ಆಡಳಿತ ಮತ್ತು ನ್ಯಾಯಾಲಯಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ ಅನ್ನು ಅಧಿಕೃತ ಭಾಷೆಗಳಾಗಿ ಬಳಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: 1 ವರದಿಗೆ ಕರಗಿತು 4 ಲಕ್ಷ ಕೋಟಿ ಸಂಪತ್ತು – 7ನೇ ಸ್ಥಾನಕ್ಕೆ ಜಾರಿದ ಅದಾನಿ: ಯಾವುದು ಎಷ್ಟು ಇಳಿಕೆ?
Advertisement
Advertisement
ಉಚ್ಚ ನ್ಯಾಯಾಲಯದ ಮಟ್ಟದಲ್ಲಿ ಇಂಗ್ಲಿಷ್ ಇಂಗ್ಲಿಷ್ ಅಧಿಕೃತ ಭಾಷೆಯಾಗಿದೆ. ಆದರೂ ಅನೇಕ ಹೈಕೋರ್ಟ್‌ಗಳು ಪ್ರಾದೇಶಿಕ ಭಾಷೆಗಳಲ್ಲಿ ಅರ್ಜಿಗಳು ಮತ್ತು ದಾಖಲೆಗಳನ್ನು ಸಹ ಅನುಮತಿಸಬೇಕಾಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
Advertisement
ಈ ಸಮಸ್ಯೆಯು (ಅಧಿಕೃತ ಭಾಷೆ) ಬಗೆಹರಿಯದೆ ಉಳಿಯಬೇಕು ಎಂದು ನಾನು ಭಾವಿಸುವುದಿಲ್ಲ. ಇದು 1949 ರಿಂದ ಇತ್ಯರ್ಥವಾಗದೆ ಉಳಿದಿದೆ. ಆಡಳಿತ ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ತಪ್ಪು ಸಂವಹನವಾಗುವ ಗಂಭೀರ ಅಪಾಯಗಳಿವೆ ಎಂದು ಎಚ್ಚರಿಸಿದ್ದಾರೆ.
Advertisement
1949ರ ಸೆಪ್ಟೆಂಬರ್ 11 ರಲ್ಲಿ ಪತ್ರಿಕೆಗಳು, ಡಾ ಅಂಬೇಡ್ಕರ್ ಅವರು ಸಂಸ್ಕೃತವನ್ನು ಭಾರತ ಒಕ್ಕೂಟದ ಅಧಿಕೃತ ಭಾಷೆಯನ್ನಾಗಿ ಮಾಡುವ ಕ್ರಮವನ್ನು ಪ್ರಾರಂಭಿಸಿದರು ಎಂದು ವರದಿ ಮಾಡಿದೆ. ನಮ್ಮ ಬಹಳಷ್ಟು ಭಾಷೆಗಳಲ್ಲಿ ಸಂಸ್ಕೃತ ಶಬ್ದ ಸಂಪತ್ತಿದೆ. ಅಂಬೇಡ್ಕರ್ ಅವರು ಪ್ರಸ್ತಾಪಿಸಿದಂತೆ ಸಂಸ್ಕೃತ ಅಧಿಕೃತ ಭಾಷೆಯಾಗದಿರಲು ಯಾಕೆ ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದ ʼGo First’ಗೆ 10 ಲಕ್ಷ ದಂಡ
ಸಂಸ್ಕೃತ ಯಾವುದೇ ಧರ್ಮವನ್ನು ಪರಿಚಯಿಸುವುದಿಲ್ಲ. ಭಾಷೆಗಳಿಗೆ ಯಾವುದೇ ಧರ್ಮದೊಂದಿಗೆ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಆದರೆ ತತ್ವಶಾಸ್ತ್ರ, ಕಾನೂನು, ವಿಜ್ಞಾನ, ಸಾಹಿತ್ಯ, ವಾಸ್ತುಶಿಲ್ಪ, ಖಗೋಳಶಾಸ್ತ್ರ ಇತ್ಯಾದಿ ವಿಷಗಳೊಂದಿಗೆ ಭಾಷೆ ಸಂಬಂಧವನ್ನು ಹೊಂದಿರುತ್ತದೆ ಎಂದು ತಿಳಿಸಿದ್ದಾರೆ.
ಸಂಸ್ಕೃತ ಭಾಷೆಯು ದಕ್ಷಿಣ ಅಥವಾ ಉತ್ತರ ಭಾರತಕ್ಕೆ ಸೇರಿಲ್ಲ. ಇದು ಜಾತ್ಯತೀತ ಬಳಕೆಗೆ ಸಂಪೂರ್ಣವಾಗಿ ಸಮರ್ಥವಾಗಿದೆ. ಈ ಭಾಷೆ ಕಂಪ್ಯೂಟರ್‌ಗಳಿಗೆ ಹೆಚ್ಚು ಸೂಕ್ತವಾದದ್ದು ಎಂದು ನಾಸಾ ವಿಜ್ಞಾನಿಯೊಬ್ಬರು ಕಂಡುಕೊಂಡಿದ್ದಾರೆ. ಆ ವಿಜ್ಞಾನಿ ‘ಸಂಸ್ಕೃತ ಮತ್ತು ಕೃತಕ ಬುದ್ಧಿಮತ್ತೆಯಲ್ಲಿ ಜ್ಞಾನ ಪ್ರಾತಿನಿಧ್ಯ’ ಎಂಬ ಲೇಖನವನ್ನು ಬರೆದಿದ್ದಾರೆ. ಸಾಧ್ಯವಾದಷ್ಟು ಕಡಿಮೆ ಪದಗಳಲ್ಲಿ ಸಂದೇಶಗಳನ್ನು ಸಂವಹನ ಮಾಡಲು ಸಂಸ್ಕೃತವನ್ನು ಬಳಸಬಹುದು ಎಂದು ಅವರು ಅದರಲ್ಲಿ ಉಲ್ಲೇಖಿಸಿದ್ದಾರೆಂದು ಹೇಳಿದ್ದಾರೆ.
ಸಮೀಕ್ಷೆಯೊಂದನ್ನು ಉಲ್ಲೇಖಿಸಿ ಮಾತನಾಡಿದ ಬೋಬ್ಡೆ, ಶೇ.43.63 ರಷ್ಟು ನಾಗರಿಕರು ಹಿಂದಿ ಮಾತನಾಡುತ್ತಾರೆ. ಆದರೆ ಕೇವಲ ಶೇ.6ರಷ್ಟು ಜನರು ಇಂಗ್ಲಿಷ್ ಮಾತನಾಡುತ್ತಾರೆ. ಇದು ಗ್ರಾಮೀಣ ಪ್ರದೇಶಗಳಲ್ಲಿ ಶೇ.3 ಕ್ಕೆ ಇಳಿಯುತ್ತದೆ. ಶೇ.41 ರಷ್ಟು ಶ್ರೀಮಂತರು ಇಂಗ್ಲಿಷ್ ಮಾತನಾಡುತ್ತಾರೆ. ಆದರೆ ಬಡವರಲ್ಲಿ ಇದು ಕೇವಲ ಶೇ.2ಕ್ಕೆ ಇಳಿಯುತ್ತದೆ. ಸಂಸ್ಕೃತವು ಪ್ರಾಯಶಃ ನಮ್ಮ ಪ್ರಾದೇಶಿಕ ಭಾಷೆಗಳೊಂದಿಗೆ ಸಹ ಅಸ್ತಿತ್ವದಲ್ಲಿರಬಹುದಾದ ಏಕೈಕ ಭಾಷೆಯಾಗಿದೆ ಎಂದು ವಿಶ್ಲೇಷಿಸಿದ್ದಾರೆ. ಇದೇ ವೇಳೆ ಭಾರತ ಸಂವಿಧಾನದ 8ನೇ ಅನುಸೂಚಿಯನ್ನೂ ಉಲ್ಲೇಖಿಸಿದರು. ಇದನ್ನೂ ಓದಿ: ಜೆಎನ್‌ಯು, ಜಾಮಿಯಾ ಬಳಿಕ ದೆಹಲಿ ವಿವಿಗೆ ಕಾಲಿಟ್ಟ ಮೋದಿ ಸಾಕ್ಷ್ಯಚಿತ್ರ ವಿವಾದ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k