ಹುಬ್ಬಳ್ಳಿ: ವೈಯಕ್ತಿಕ ಕೆಲಸಗಳಿಗಾಗಿ ನಾನು ದೆಹಲಿಗೆ ಹೋಗಿದ್ದೆ. ಯಾವುದೇ ಹೈಕಮಾಂಡ್ ನಾಯಕರನ್ನು ಭೇಟಿ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadeesh Shettar) ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನನಗಿಂತ ಒಂದು ದಿನ ಮುಂಚೆ ಸಿದ್ದರಾಮಯ್ಯ (Siddaramaiah) ದೆಹಲಿಗೆ ಹೋಗಿದ್ದರು. ಅದಾದ ನಂತರ ನಾನು ಹೋಗಿದ್ದೆ. ಅವರು ಪ್ರಧಾನಿಗಳನ್ನು ಭೇಟಿಯಾಗಲು ಹೋಗಿದ್ದರು. ನಾನು ವೈಯಕ್ತಿಕ ಕೆಲಸಕ್ಕಾಗಿ ದೆಹಲಿಗೆ ಹೋಗಿದ್ದೆ. ಈ ವೇಳೆ ಯಾವುದೇ ನಾಯಕರನ್ನು ಭೇಟಿಯಾಗಿಲ್ಲ. ಯಾವುದೇ ಚುನಾವಣೆಯ ವಿಚಾರವನ್ನೂ ಚರ್ಚಿಸಿಲ್ಲ ಎಂದರು.
Advertisement
Advertisement
ಧಾರವಾಡ (Dharwad) ಆಕಾಂಕ್ಷಿಯಾಗಿ ಶೆಟ್ಟರ್ ಹೆಸರು ಶಿಫಾರಸು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇನ್ನು ಯಾರ ಹೆಸರನ್ನು ಕಳುಹಿಸಿಲ್ಲ. ಅದು ಹೇಗೆ ನನ್ನದೇ ಒಂದು ಹೆಸರು ಕಳಿಸಿದ್ದಾರೆ ಅಂತ ಹೇಳ್ತೀರಿ..? ನಿಮಗೆ ಆ ಪಟ್ಟಿ ಕೊಟ್ಟವರು ಯಾರು..? ಮೊನ್ನೆಯಷ್ಟೇ ವೀಕ್ಷಕರ ಸಭೆಯಾಗಿದೆ. ಟಿಕೆಟ್ ಆಕಾಂಕ್ಷಿಗಳ ಶಾರ್ಟ್ ಲಿಸ್ಟ್ ಮಾಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಇಷ್ಟರ ನಡುವೆಯೇ ನನ್ನದೊಂದೇ ಹೆಸರು ಕಳಿಸಿದ್ದಾರೆ ಅಂತ ಹೇಳ್ತಿದ್ದೀರಿ. ಸಿಎಂ ಸಮ್ಮುಖದಲ್ಲಿಯೇ ನಾನು ಚುನಾವಣೆಗೆ ನಿಲ್ಲಲ್ಲ ಅಂತ ಹೇಳಿದ್ದೇನೆ. ಕಾಂಗ್ರೆಸ್ಸಿನಿಂದ ಯಾರನ್ನೇ ನಿಲ್ಲಿಸಿದರೂ ನಾನು ಫೈಟ್ ಮಾಡುತ್ತೇನೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುತ್ತೇನೆ. ಲೋಕಸಭಾ ಚುನಾವಣೆಗೂ ನನ್ನ ದೆಹಲಿ ಭೇಟಿಗೂ ಸಂಬಂಧವಿಲ್ಲ ಎಂದು ಹೇಳಿದರು.
Advertisement
Advertisement
ಐ.ಎನ್.ಡಿ.ಐ.ಎ ಒಕ್ಕೂಟದ ಪಿಎಂ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೆಸರಿಗೆ ಕೆಲವರ ಅಪಸ್ವರ ವಿಚಾರವಾಗಿ ಪ್ರಧಾನಿ ಮೋದಿ ಒಂದು ಕಡೆ ಉಳಿದ ಎಲ್ಲಾ ವಿರೋಧ ಪಕ್ಷಗಳು, ಮತ್ತೊಂದು ಕಡೆ ವಿರೋಧ ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿವೆ. ಪ್ರಧಾನಿ ಅಭ್ಯರ್ಥಿ ಯಾರೆಂಬುದು ಎಲ್ಲರಲ್ಲೂ ಒಮ್ಮತದ ತೀರ್ಮಾನ ಬೇಕಾಗುತ್ತೆ. ಕೆಲ ಪಕ್ಷದವರು ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಸಲಹೆ ಮಾಡಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಬಹಳ ಅನುಭವ ಇರುವ ರಾಜಕಾರಣಿ ಖರ್ಗೆ ಮುತ್ಸದಿ ರಾಜಕಾರಣಿ ಒಳ್ಳೆಯ ಆಡಳಿತಗಾರಾಗಿರೋ ಖರ್ಗೆ ಎಲ್ಲ ರೀತಿ ಎಂದಲೂ ಅರ್ಹ. ಆದರೆ ಈ ವಿಚಾರದಲ್ಲಿ ಒಕ್ಕೂಟದ ಎಲ್ಲ ಸದಸ್ಯರ ಸರ್ವನಾಮಪದ ನಿರ್ಣಯ ಅಗತ್ಯವಿದೆ. ಸದ್ಯಕ್ಕೆ ಮಲ್ಲಿಕಾರ್ಜುನ ಖರ್ಗೆ ಹೆಸರು ತೇಲಿ ಬಿಟ್ಟಿದ್ದಾರೆ. ಚುನಾವಣೆಯ ನಂತರ ಪ್ರಧಾನಿ ಅಭ್ಯರ್ಥಿ ಯಾರೆಂಬುದು ತೀರ್ಮಾನ ಆಗಬಹುದು. ಸೋನಿಯಾ ಗಾಂಧಿ (Sonia Gandhi) ತೆಲಂಗಾಣದಿಂದ ಸ್ಪರ್ಧೆಸಬೇಕೆಂಬ ಬೇಡಿಕೆ ವಿಚಾರ ಇದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದರು.
ಸಂಸತ್ ಕಲಾಪದಿಂದ ನೂರಕ್ಕೂ ಹೆಚ್ಚು ಸಂಸದರ ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಅಧಿವೇಶನದಲ್ಲಿ ಚರ್ಚೆಗಳು ಆಗಬೇಕು. ಆದರೆ ಧರಣಿ ಮಾಡ್ತಾರೆ ಅಂತ ನೆಪ. ಮಾಡಿಕೊಂಡು ಅಮಾನತು ಮಾಡೋದು ಸರಿಯಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆ ಕುಸಿದು ಹೋಗಿದೆ ಅನ್ನೋದಕ್ಕೆ ಇದು ಸಾಕ್ಷಿ. ಮುಂದಿನ ದಿನಗಳಲ್ಲಿ ಈ ಬಗ್ಗೆ ಜನರೇ ತೀರ್ಮಾನಿಸ್ತಾರೆ ಎಂದು ಹೇಳಿದರು.