5 ವರ್ಷ ರಿಲೇಶನ್‍ಶಿಪ್‍ನಲ್ಲಿದ್ದು ಬ್ರೇಕಪ್ ಮಾಡಿದ ಪ್ರೇಯಸಿಗೆ ವಿಷ ಕುಡಿಸಿದ ಪ್ರಿಯಕರ!

Public TV
1 Min Read
EX BOYFRIEND MURDER

ಮುಂಬೈ: ಪ್ರಿಯಕರನೊಬ್ಬ ತನ್ನ ಮಾಜಿ ಪ್ರೇಯಸಿಯ ಕುತ್ತಿಗೆಗೆ ಚಾಕು ಹಿಡಿದು ವಿಷ ಕುಡಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.

ಕಿಶನ್ ಸೋನವಾನೇ(24) ತನ್ನ 22 ವರ್ಷದ ಮಾಜಿ ಪ್ರೇಯಸಿ ಜೊತೆ 5 ವರ್ಷದಿಂದ ರಿಲೇಶನ್‍ಶಿಪ್‍ನಲ್ಲಿದ್ದನು. ನಂತರ ಯುವತಿ ಕಳೆದ ತಿಂಗಳು ಕಿಶನ್ ಜೊತೆ ಬ್ರೇಕಪ್ ಮಾಡಿಕೊಂಡಿದ್ದಳು. ನಂತರ ಆಕೆಗೆ ಬುದ್ಧಿ ಕಲಿಸಲು ಕಿಶನ್ ತನ್ನ ಮಾಜಿ ಪ್ರೇಯಸಿಯನ್ನು ವಿಕ್ರೋಲಿಯಲ್ಲಿರುವ ಪಾರ್ಕ್‍ಗೆ ಕರೆಸಿಕೊಂಡಿದ್ದ.

ತನ್ನ ಮಾಜಿ ಪ್ರಿಯಕರನ ಮಾತು ಕೇಳಿ ಯುವತಿ ಭಾನುವಾರ ಬೆಳಗ್ಗೆ 10 ಗಂಟೆಗೆ ಪಾರ್ಕಿಗೆ ಹೋಗಿದ್ದಳು. ನಂತರ ಇಬ್ಬರು ಮಾತನಾಡುತ್ತಿದ್ದರು, ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ವಾದ-ವಿವಾದ ನಡೆಯಿತು ಎಂದು ಪ್ರತಿಕೆಯೊಂದರಲ್ಲಿ ವರದಿಯಾಗಿದೆ.

Minor Love 2

ಜಗಳವಾಡುತ್ತಿದ್ದಾಗ ಕಿಶನ್ ನನ್ನನ್ನು ಶಾಂತವಾಗಿರಲು ಹೇಳಿ, ಒಂದು ಮಾತ್ರೆಯನ್ನು ಕೊಟ್ಟಿದ್ದ. ಆದರೆ ಅದು ಇಲಿ ಪಾಷಾಣ ರೀತಿ ಇತ್ತು. ನಾನು ಅದನ್ನು ತಿನ್ನಲು ನಿರಾಕರಿಸಿದೆ. ಆಗ ಅವನು ನನ್ನ ಕುತ್ತಿಗೆ ಹತ್ತಿರ ಚಾಕು ಇಟ್ಟು ಪ್ರಾಣ ಬೆದರಿಕೆ ಹಾಕಿದ್ದ. ಅದಕ್ಕೆ ನಾನು ಹೆದರಿ ಆ ಮಾತ್ರೆಯನ್ನು ನುಂಗಿದೆ. ನಂತರ ನಾನು ಪ್ರಜ್ಞೆ ತಪ್ಪಿ ಕೆಳಗೆ ಬಿದ್ದೆ ಎಂದು ಯುವತಿ ಪೊಲೀಸರ ಹತ್ತಿರ ತಿಳಿಸಿದ್ದಾಳೆ.

ಈ ಘಟನೆ ನಡೆದ ನಂತರ ಕಿಶನ್ ಆ ಜಾಗದಿಂದ ಪರಾರಿಯಾಗಿದ್ದು, ಪಾರ್ಕ್‍ನಲ್ಲಿದ್ದ ಸ್ಥಳೀಯರು ಯುವತಿಯನ್ನು ಮಹಾತ್ಮ ಪುಲೇ ಮುನಿಸಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಸದ್ಯ ಯುವತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು, ಕಿಶನ್‍ನನ್ನು ಆತನ ಮನೆಗೆ ಹೋಗಿ ಬಂಧಿಸಿದ್ದೇವೆ ಎಂದು ವಿಕ್ರೋಲಿ ಪೊಲೀಸ್ ಠಾಣೆಯ ಅಧಿಕಾರಿಯಾದ ಎಸ್‍ಪಿಐ ಸಂಜಯ್ ಮೋರ್ ತಿಳಿಸಿದ್ದಾರೆ.

Share This Article