ಭೋಪಾಲ್: ಬಿಜೆಪಿ ಯುವ ಮೋರ್ಚಾದ ಮಾಜಿ ನಾಯಕ ತಹಶೀಲ್ದಾರ್ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವುದಾಗಿ ಬೆದರಿಕೆಯೊಡ್ಡಿದ್ದರಿಂದ ಆತ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಧ್ಯಪ್ರದೇಶದ ರಾಜ್‍ಗಢ್ ಜಿಲ್ಲೆಯಲ್ಲಿ ನಡದಿದೆ.
ಪಚೋರ್‍ನ ಶಿವಾಲಯ ರಸ್ತೆಯಲ್ಲಿ ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ ಬಿಜೆವೈಎಂನ ರಾಜ್‍ಗಢ ಘಟಕದ ಮಾಜಿ ಪ್ರಧಾನ ಕಾರ್ಯದರ್ಶಿ ಭಗವಾನ್ ಸಿಂಗ್ ರಜಪೂತ್ ಅವರು ತಹಸೀಲ್ದಾರ್ ರಾಜೇಶ್ ಸೊರ್ಟೆ ಮೇಲೆ ಬಾಟಲಿನಲ್ಲಿದ್ದ ಪೆಟ್ರೋಲ್ ಸುರಿದಿರುವ ವೀಡೀಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೇ ಅತಿಕ್ರಮಣ ನಿಗ್ರಹ ದಳದ ಇತರ ಸದಸ್ಯರ ಮೇಲೂ ಪೆಟ್ರೋಲ್ ಸುರಿದಿದ್ದಾರೆ. ಇದನ್ನೂ ಓದಿ: ಖಡ್ಗ, ಭಯ, ದಬ್ಬಾಳಿಕೆಯಿಂದ ತನ್ವೀರ್ ಸೇಠ್ ಆಗಿದ್ದಾರೆ: ಪ್ರತಾಪ್ ಸಿಂಹ
Advertisement
Advertisement
ಭಗವಾನ್ ಸಿಂಗ್ ರಜಪೂತ್ ಅವರು ತಹಶೀಲ್ದಾರ್ ಮತ್ತು ಇತರರನ್ನು ನಿಂದಿಸಿದ್ದು, ಅವರಿಂದ ದೂರ ಹೋಗದಿದ್ದರೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೀಗ ಈ ಘಟನೆ ಕುರಿತಂತೆ ಮುಖ್ಯ ಮುನ್ಸಿಪಾಲಿಟಿ ಅಧಿಕಾರಿ ಪವನ್ ಮಿಶ್ರಾ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಭಗವಾನ್ ಸಿಂಗ್ ರಜಪೂತ್ ವಿರುದ್ಧ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ದೇಶವನ್ನು ಒಡೆದು ಆಳುವ ಕಾಂಗ್ರೆಸ್ ತುಕ್ಡೆ ತುಕ್ಡೆ ಗ್ಯಾಂಗ್ ಲೀಡರ್: ನರೇಂದ್ರ ಮೋದಿ