ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಬಿಬಿ ಶಿವಪ್ಪ ನಿಧನ: ಸಾವಿನಲ್ಲೂ ಮಾನವೀಯತೆ ಮೆರೆದ ನಾಯಕ

Public TV
2 Min Read
BB SHIVAPPA 5

ಬೆಂಗಳೂರು: ಹಿರಿಯ ಬಿಜೆಪಿ ಮುಖಂಡ ಹಾಗೂ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಬಿಬಿ ಶಿವಪ್ಪ ವಿಧಿವಶರಾಗಿದ್ದಾರೆ.

ಬೆಂಗಳೂರಿನ ಸುಗುಣ ಆಸ್ಪತ್ರೆಯಲ್ಲಿ ನಿಧನರಾದ ಶಿವಪ್ಪ ಅವರಿಗೆ 89 ವರ್ಷ ವಯಸ್ಸಾಗಿತ್ತು. ಸಾವಿನಲ್ಲೂ ಮಾನವೀಯತೆ ಮೆರೆದ ಬಿಬಿ ಶಿವಪ್ಪ, ತಮ್ಮ ಕಣ್ಣುಗಳನ್ನು ದಾನ ಮಾಡಿದ್ದಾರೆ.

ಆಸ್ಪತ್ರೆಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ಭೇಟಿ ನೀಡಿದ್ದಾರೆ. ಪ್ರಮೋದ್ ಮುತಾಲಿಕ್, ಮಾಜಿ ಪರಿಷತ್ ಸದಸ್ಯ ವಿನಯ್ ಚಂದ್ರ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಅಸ್ಪತ್ರೆಗೆ ಆಗಮಿಸಿ ಅಂತಿಮ ದರ್ಶನ ಪಡೆದಿದ್ದಾರೆ.

BB SHIVAPPA 1

ವಯೋ ಸಹಜ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ಶಿವಪ್ಪ ಅವರಿಗೆ ಕಳೆದ ಏಪ್ರಿಲ್‍ನಲ್ಲಿ ಹೃದಯಾಘಾತವಾಗಿತ್ತು. ಶಿವಪ್ಪ ಅವರು ಹುಟ್ಟೂರಿನಲ್ಲೇ ಕೊನೆಯುಸಿರೆಳೆಯಬೇಕೆಂಬ ಬಯಕೆ ವ್ಯಕ್ತಪಡಿಸಿದ್ದರಿಂದ ವೈದ್ಯರ ಅನುಮತಿ ಪಡೆದು ಹುಟ್ಟೂರಿಗೆ ಕರೆದೊಯ್ಯಲು ಕುಟುಂಬಸ್ಥರು ರೆಡಿಯಾಗಿದ್ದರು. ಆದ್ರೆ ಇಂದು ಆಸ್ಪತ್ರೆಯಲ್ಲಿ ಶಿವಪ್ಪ ಕೊನೆಯುಸಿರೆಳೆದಿದ್ದಾರೆ.

BB SHIVAPPA

ಬಿಜೆಪಿ ಕಚೇರಿಯಲ್ಲಿ ಶಿವಪ್ಪ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಗೆ ಬಿಜೆಪಿ ಕಚೇರಿ, ನಂತರ 2-30ರಿಂದ ಶಾಸಕರ ಭವನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ಸಕಲೇಶಪುರದ ಕಂಬಾಲಪುರದ ಎಸ್ಟೇಟ್ ಗೆ ಪಾರ್ಥಿವ ಶರೀರ ರವಾನೆಯಾಗಲಿದ್ದು, ನಾಳೆ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ ಶಿವಪ್ಪ ಅವರು ಮೂವರು ಮಕ್ಕಳಾದ ಪ್ರತಾಪ್, ಪ್ರದೀಪ್, ಸುಧೀರ್ ಹಾಗೂ ಪತ್ನಿ ಸುಶೀಲಾ ಅವರನ್ನ ಅಗಲಿದ್ದಾರೆ.

BB SHIVAPPA 3

ಬಿಜೆಪಿಯ ಡೈನಾಮಿಕ್ ಲೀಡರ್ ಎಂದು ಹೆಸರು ಪಡೆದಿದ್ದ ಶಿವಪ್ಪ 1994, 1999 ರಲ್ಲಿ ಸಕಲೇಶಪುರ ವಿಧಾನಸಭೆ ಕ್ಷೇತ್ರದಿಂದ ಗೆದ್ದಿದ್ದರು. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಮಹತ್ತರ ಪಾತ್ರ ವಹಿಸಿದ್ದರು. 1980 ಮತ್ತು 1991 ರಲ್ಲಿ ಹಾಸನ ಲೋಕಸಭೆ ಚುನಾವಣೆಗಳಲ್ಲಿ ಸೋಲನುಭವಿಸಿದ್ದರು. 1989 ರಲ್ಲಿ ಸೋಮವಾರಪೇಟೆ ಕ್ಷೇತ್ರದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪರಾಭವ ಹೊಂದಿದ್ದರು. ಬಿಜೆಪಿಯಿಂದ ಒಮ್ಮೆ ಬಿಬಿ ಶಿವಪ್ಪ ಉಚ್ಛಾಟನೆಯಾಗಿದ್ದರು.

BB SHIVAPPA 4

2004 ರಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಸ್ಥಾನ ಕೈತಪ್ಪಿತ್ತು. ಇದರಿಂದ ಬೇಸರಗೊಂಡು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಟಿಕೆಟ್ ಪಡೆದು ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. ಹೆಚ್ಚು ದಿನ ಕಾಂಗ್ರೆಸ್ ನಲ್ಲಿರದೇ ಮತ್ತೆ ಬಿಜೆಪಿಗೆ ವಾಪಸ್ ಆಗಿದ್ದರು.

ಶಿವಪ್ಪ ಎರಡು ಬಾರಿ ಶಾಸಕರು, ಪರಿಷತ್ ಸದಸ್ಯರಾಗಿದ್ದರು. ಮೂರು ಸಲ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಬಿಜೆಪಿ ಕಟ್ಟಿ ಬೆಳೆಸಿದ್ದ ಶಿವಪ್ಪ, ಇತ್ತೀಚಿಗಿನ ಬಿಜೆಪಿ ಬೆಳವಣಿಗೆಗಳ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು. ಲಿಂಗಾಯತ ಸಮುದಾಯದ ಪ್ರಭಾವಿ ನಾಯಕರಾಗಿದ್ದರು. ಬಿಜೆಪಿಯ ನಾಯಕರಾದ ವೆಂಕಯ್ಯನಾಯ್ಡು, ಅನಂತ್ ಕುಮಾರ್, ಯಡಿಯೂರಪ್ಪರಿಗೆ ಬಿಫಾರಂ ಕೊಟ್ಟಿದ್ದರು. ಪಕ್ಷದಿಂದ ಕೊಟ್ಟಿದ್ದ ಕಾರಿನಲ್ಲಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ ಅಡ್ವಾಣಿಯವರನ್ನು ರಾಜ್ಯಾದ್ಯಂತ ಸುತ್ತಾಡಿಸಿದ್ದರು.

https://twitter.com/ShobhaBJP/status/891924043619749889

https://twitter.com/BSriramulu_BJP/status/891916693722681345

BB SHIVAPPA 2

Share This Article
Leave a Comment

Leave a Reply

Your email address will not be published. Required fields are marked *