ನವದೆಹಲಿ: ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ (Karpoori Thakur) ಅವರಿಗೆ ಮಂಗಳವಾರ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮರಣೋತ್ತರವಾಗಿ ರಾಷ್ಟ್ರದ ಅತ್ಯುನ್ನತ ಗೌರವವಾದ ಭಾರತ ರತ್ನ (Bharat Ratna) ಪ್ರದಾನ ಮಾಡಿದರು.
ಕರ್ಪೂರಿ ಠಾಕೂರ್ 1988 ರ ಫೆಬ್ರವರಿ 17 ರಂದು ನಿಧನರಾದರು. ಅವರ ಮರಣದ 35 ವರ್ಷಗಳ ನಂತರ ಪ್ರಶಸ್ತಿ ನೀಡಲಾಗಿದೆ. ಇದನ್ನೂ ಓದಿ: Bharat Jodo Nyay Yatra: ಅಸ್ಸಾಂನಲ್ಲಿ ಹೆಜ್ಜೆ ಹೆಜ್ಜೆಗೂ ಅಡ್ಡಿ – ಕೈ ಕಾರ್ಯಕರ್ತರು, ಪೊಲೀಸರ ನಡುವೆ ಘರ್ಷಣೆ
Advertisement
Advertisement
ರಾಜ್ಯದಲ್ಲಿ ಜನನಾಯಕ ಎಂದೇ ಖ್ಯಾತರಾಗಿದ್ದ ಕರ್ಪೂರಿ ಠಾಕೂರ್ ಅವರು ಅಲ್ಪಾವಧಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಡಿಸೆಂಬರ್ 1970 ರಿಂದ ಜೂನ್ 1971 ರವರೆಗೆ ಮತ್ತು ಡಿಸೆಂಬರ್ 1977 ರಿಂದ ಏಪ್ರಿಲ್ 1979 ರ ವರೆಗೆ ಸಿಎಂ ಆಗಿದ್ದರು.
Advertisement
Advertisement
ರಾಜ್ಯದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಗೆ ಕೇಂದ್ರದ ಮಾನ್ಯತೆ ಸಿಕ್ಕಿದೆ. ಠಾಕೂರ್ ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕು ಎಂಬುದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ದೀರ್ಘಕಾಲದ ಬೇಡಿಕೆಯಾಗಿತ್ತು. ಇದನ್ನೂ ಓದಿ: ರಾಮಲಲ್ಲಾನಿಗೆ 11 ಕೋಟಿ ರೂ. ಮೌಲ್ಯದ ವಜ್ರದ ಕಿರೀಟ ಅರ್ಪಿಸಿದ ಗುಜರಾತ್ ವ್ಯಾಪಾರಿ!