ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿರುವ ಮಾಜಿ ಸೇನಾ ಕಮಾಂಡೋ ಹವಾಲ್ದಾರ್ ಮೊಹಮ್ಮದ್ ಖಾನ್ ಅವರ ಮನೆ ಬುಧವಾರ ಮುಂಜಾನೆ ಪಾಕಿಸ್ತಾನ ನಿಯಂತ್ರಣ ರೇಖೆಯಾದ್ಯಂತ ಹಾರಿಸಿದ ಫಿರಂಗಿ ಶೆಲ್‌ಗಳಿಂದ ಹಾನಿಗೊಳಗಾಗಿದೆ.
ಪಾಕ್ ಸೇನೆಯ ಗುಂಡಿನ ದಾಳಿಯಲ್ಲಿ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ. ಹಲವಾರು ಜನರು ಗಾಯಗೊಂಡಿದ್ದಾರೆ. ಅವರ ವೃತ್ತಿಜೀವನದ ಅವಧಿಯಲ್ಲಿ ಹವಿಲ್ದಾರ್ ಖಾನ್ ಅವರನ್ನು 6 ಪ್ಯಾರಾ ವಿಶೇಷ ಪಡೆಗಳ ಘಟಕಕ್ಕೆ ನಿಯೋಜಿಸಲಾಗಿತ್ತು.
‘ಮೊದಲು ಸ್ವಲ್ಪ ಗುಂಡಿನ ಚಕಮಕಿ ನಡೆಯಿತು. ಅದು ಬೆಳಗಿನ ಜಾವ 1 ಗಂಟೆಗೆ ಪ್ರಾರಂಭವಾಯಿತು. ಮೊದಲಿಗೆ ದೂರದಿಂದ ದಾಳಿ ನಡೆದಂತಿತ್ತು. ನಂತರ, ಬೆಳಗಿನ ಜಾವ 2:30 ರ ಹೊತ್ತಿಗೆ ಅದು ಜೋರಾಗಿ ಫಿರಂಗಿ ಗುಂಡಿನ ದಾಳಿ ಪ್ರಾರಂಭವಾಯಿತು’ ಎಂದು ಹವಿಲ್ದಾರ್ ಘಟನೆ ಬಗ್ಗೆ ತಿಳಿಸಿದ್ದಾರೆ.
‘ನನ್ನ ಮನೆ ಹಾನಿಗೊಳಗಾದಾಗ ನಾನು ನನ್ನ ಮಕ್ಕಳು ಮತ್ತು ಹೆಂಡತಿಯನ್ನು ಕರೆದುಕೊಂಡು ಹೊರಗೆ ಬಂದೆ. ಗುಂಡಿನ ದಾಳಿ ಇನ್ನೂ ನಡೆಯುತ್ತಿದೆ ಎಂದು ನನಗೆ ತಿಳಿದಿತ್ತು. ಆದ್ದರಿಂದ ಸುರಕ್ಷಿತವಾಗಿರಲು ನೆಲದ ಮೇಲೆ ಮಲಗಲು ನಾನು ಅವರಿಗೆ ಹೇಳಿದೆ. ನಾನು ಕೂಡ ಮಲಗಿದೆ’ ಎಂದು ವಿವರಿಸಿದ್ದಾರೆ.
ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಅಥವಾ ಪಿಒಕೆಯಲ್ಲಿನ ಒಂಬತ್ತು ಭಯೋತ್ಪಾದಕ ನೆಲೆಗಳು ಮತ್ತು ತರಬೇತಿ ಶಿಬಿರಗಳ ಮೇಲೆ ಭಾರತೀಯ ಸೇನೆಯು ರಾತ್ರಿಯಿಡೀ ನಡೆಸಿದ ನಿಖರವಾದ ದಾಳಿ ನಡೆಸಿದೆ. ಪಾಕ್ ಸೇನೆಯ ತಕ್ಷಣದ ಪ್ರತಿಕ್ರಿಯೆಯಾಗಿ ಈ ಶೆಲ್ ದಾಳಿ ನಡೆಸಿದೆ.
ಏ.22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಲಷ್ಕರ್-ಎ-ತೊಯ್ಬಾ ನಡೆಸಿದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಲಾಗಿತ್ತು. ಇದರಲ್ಲಿ ನಾಗರಿಕರು 26 ಜನರು ಸಾವನ್ನಪ್ಪಿದ್ದರು. ಅದಕ್ಕೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತು. ಪಾಕ್‌ನ ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿ ನಡೆಸಿದ ದಾಳಿಗೆ 70ಕ್ಕೂ ಹೆಚ್ಚು ಉಗ್ರರು ಹತರಾಗಿದ್ದಾರೆ.